Renukaswamy ಹಂತಕರಿಂದ ಡೇಟಾ ನಾಶ! ವೆಬ್ ಆ್ಯಪ್ ಬಳಸಿ ಡೇಟಾ ನಿಷ್ಕ್ರಿಯ
ಆರೋಪಿಗಳ ಹೆಸರಲ್ಲಿ ಹೊಸ ಸಿಮ್ ಪಡೆಯಲು ಮುಂದಾದ ಪೊಲೀಸರು ; ಮತ್ತೊಬ್ಬ ಅರೋಪಿಯ ಹೆಸರು ಬಾಯ್ಬಿಟ್ಟ ಪ್ರದೂಷ್
Team Udayavani, Jun 23, 2024, 7:20 AM IST
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯ ಎಲ್ಲ ಆರೋಪಿಗಳು ವೆಬ್ ಆ್ಯಪ್‌ಗ್ಳನ್ನು ಬಳಸಿ
ಕೊಂಡು ತಮ್ಮ ಮೊಬೈಲ್‌ಗಳಲ್ಲಿದ್ದ ಡೇಟಾಗಳನ್ನು ನಿಷ್ಕ್ರಿಯಗೊಳಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆದ್ದರಿಂದ ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್‌ಗಳನ್ನು ಸಂಬಂಧಪಟ್ಟ ಸೇವಾದಾರರಿಂದ ಪಡೆದುಕೊಂಡು ರೀ ಆ್ಯಕ್ಸೆಸ್ ಮಾಡಲು ಕೋರ್ಟ್ ಮೂಲಕ ತನಿಖಾಧಿಕಾರಿಗಳು ಅನುಮತಿ ಪಡೆದುಕೊಂಡಿದ್ದಾರೆ.
ದರ್ಶನ್‌ಗೆ ಹಣ ಪೂರೈಸಿದ ಮೋಹನ್
ರಾಜ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಮತ್ತೂಂದೆಡೆ ಪ್ರದೂಷ್ ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದ ಮತ್ತೂಬ್ಬ ವ್ಯಕ್ತಿಯ ಹೆಸರು ಬಾಯಿಬಿಟ್ಟಿದ್ದಾನೆ. ಆತನನ್ನು ಪತ್ತೆ ಹಚ್ಚಿ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಅನ್ನು ಧನರಾಜ್ ಆನ್‌ಲೈನ್ ಮೂಲಕ ಖರೀದಿಸಿದ್ದಾನೆ ಎಂದು ಬಾಯಿಬಿಟ್ಟಿದ್ದಾನೆ. ವಿನಯ್‌ಗೆ ಸೇರಿದ ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ಕೋಣೆಯಲ್ಲಿದ್ದ ಲಡ್ಜರ್ ಅನ್ನು ಜಪ್ತಿ ಮಾಡಲಾಗಿದೆ.
ದರ್ಶನ್ ಮೊಬೈಲ್ ಅನ್‌ಸಿಲ್
ದರ್ಶನ್ ಸೇರಿ ನಾಲ್ವರು ಆರೋಪಿಗಳ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದು ಅವುಗಳನ್ನು ಅನ್‌ಸಿàಲ್ ಮಾಡಿ ಪುನಃ ರಿ ಆ್ಯಕ್ಸೆಸ್ ಮಾಡಲು ಕೋರ್ಟ್ ಅನುಮತಿ ನೀಡಿದೆ. ಆದರೆ ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸುಮ್ಮನಹಳ್ಳಿಯ ರಾಜಕಾಲುವೆಗೆ ಎಸೆದಿದ್ದು ರೇಣುಕಾಸ್ವಾಮಿಯ ಮೊಬೈಲ್‌ನಲ್ಲಿದ್ದ ಡೇಟಾವನ್ನು ನಿಷ್ಕ್ರಿಯಗೊಳಿಸಿದ್ದಾರೆ. ಹೀಗಾಗಿ ಮೃತನ ಹೆಸರಿನಲ್ಲಿ ಹೊಸ ಸಿಮ್‌ಕಾರ್ಡ್‌ಗಳನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್‌ಗಳಿಂದ ಪಡೆದುಕೊಂಡು ರಿ ಆ್ಯಕ್ಸೆಸ್ ಮಾಡಲು ಕೋರ್ಟ್ ಅನುಮತಿ ಪಡೆದುಕೊಂಡಿರುವ ತನಿಖಾಧಿಕಾರಿಗಳು, ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ತಾಂತ್ರಿಕ ಸಾಕ್ಷ್ಯಾಧಾರಗಳಲ್ಲೂ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದುವರೆಗಿನ ತನಿಖೆಯಲ್ಲಿ ನಟ ದರ್ಶನ್ ಗ್ಯಾಂಗ್‌ಗೆ ಕಾನೂನಿನ ಮೇಲೆ ಕಿಂಚಿತ್ ಗೌರವ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅದು 17 ಮಂದಿ ತಂಡಗಳಿಂದ ಮಾತ್ರವಲ್ಲದೆ, ಪ್ರಕರಣದ ನೂರಾರು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.
ಮೃತನ ಬಟ್ಟೆ ಬದಲಿಸಿದ್ದರು
ಆರೋಪಿಗಳು ರೇಣುಕಾಸ್ವಾಮಿಯನ್ನು ಕೊಲೆಗೈದು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆತನ ಬಟ್ಟೆಗಳನ್ನು ಬದಲಾಯಿಸಿದ್ದಾರೆ. ಆತ ಧರಿಸಿದ್ದ ಪ್ಯಾಂಟ್ ಅನ್ನು ಎಸೆದಿದ್ದ ಸಂದರ್ಭದ ಸಾಕ್ಷಿದಾರರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಳ್ಳಲಾಗಿದೆ.
ಕರಿಯನಿಗೆ ಇದೆಯೇ
ಕ್ರಿಮಿನಲ್‌ಗಳ ಸಂಪರ್ಕ?
ಅಮಾನುಷವಾಗಿ ರೇಣುಕಾಸ್ವಾಮಿಯ ಹತ್ಯೆಗೈದ ದರ್ಶನ್ ಮತ್ತು ಗ್ಯಾಂಗ್, ಒಳಸಂಚು ರೂಪಿಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವ ಸಾಗಿಸಲು ಹಣದ ಪ್ರಭಾವ ಬಳಸಿದ್ದಾರೆ. ಜತೆಗೆ ಕೆಲವು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ಆರ್ಥಿಕ ಸಮಸ್ಯೆ ಹೊಂದಿರುವ ಕೆಲವರಿಗೆ ಆಮಿಷ ತೋರಿಸಿ, ಅವರ ಮೂಲಕ ಮೃತದೇಹವನ್ನು ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ದರ್ಶನ್, ರಾಘವೇಂದ್ರ, ಕಾರ್ತಿಕ್, ಕೇಶವಮೂರ್ತಿ ಕ್ರಿಮಿನಲ್ ಹಿನ್ನೆಲೆಯಳ್ಳವರಾಗಿದ್ದಾರೆ. ಅಲ್ಲದೆ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳು ತಮ್ಮ ಅಭಿಮಾನಿ ಬಳಗವನ್ನು ಬಳಸಿಕೊಂಡು ಪ್ರಕರಣದ ತನಿಖೆಗೆ ನಿರಂತರ ಅಡ್ಡಿಪಡಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಸಾಕ್ಷಿಗಳಿಗೆ ಬೆದರಿಕೆ : ದರ್ಶನ್, ಸಹಚರರ ಮೇಲೆ ಮತ್ತೊಂದು ಕೇಸ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯ ಆರೋಪಿ ದರ್ಶನ್ ತನ್ನ ಸಹಚರರ ಮೂಲಕ ಸಾಕ್ಷಿದಾರರಿಗೆ ಬೆದರಿಕೆ ಹಾಕಿಸಿರುವ ಆರೋಪ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ 60ಕ್ಕೂ ಹೆಚ್ಚು ಸಾಕ್ಷಿದಾರಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ಈ ಎಲ್ಲ ಸಾಕ್ಷಿಗಳಿಗೆ ದರ್ಶನ್‌ನ ಕೆಲವು ಸಹಚರರು ಪ್ರಾಣ ಬೆದರಿಕೆ ಹಾಕಿ, ಸಾಕ್ಷಿ ನುಡಿಯದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನೊಂದ ಕೆಲವು ಸಾಕ್ಷಿಗಳು ದೂರು ನೀಡಿದ್ದು, ಪೊಲೀಸರು ದರ್ಶನ್ ಮತ್ತು ಸಹಚರರ ವಿರುದ್ಧ ಸಾಕ್ಷಿಗಳಿಗೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ 60ಕ್ಕೂ ಹೆಚ್ಚು ಸಾಕ್ಷಿದಾರರು ಇದ್ದಾರೆ. ಜತೆಗೆ ಈ ಸಾಕ್ಷಿದಾರರ ಮೊಬೈಲ್‌ಗಳನ್ನು ರಿಟ್ರೀವ್ ಮಾಡಿಸಲು ಎಲ್ಲ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.