ತಾಯಿ ಹುಡುಕಿಕೊಂಡು ಸ್ವೀಡನ್‌ನಿಂದ ಬಂದ ಪುತ್ರಿ
Team Udayavani, Feb 24, 2020, 3:07 AM IST
ಮಂಡ್ಯ: 29 ವರ್ಷಗಳ ಬಳಿಕ ತಾಯಿಯನ್ನು ಹುಡುಕಿಕೊಂಡು ದೂರದ ಸ್ವೀಡನ್ ದೇಶದಿಂದ ಪುತ್ರಿ ಆಗಮಿಸಿದ್ದಾಳೆ. ತಾಯಿಯನ್ನು ಕಾಣುವ ಪತ್ನಿಯ ಹಂಬಲಕ್ಕೆ ಪತಿ ಕೂಡ ಸಾಥ್ ಕೊಟ್ಟಿದ್ದಾರೆ. ಸ್ವೀಡನ್ ದೇಶದ ಜೋಲಿ ತನ್ನ ಪತಿ ಎರಿಕ್ ಜೊತೆ ತವರೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಗೆ ಬಂದಿದ್ದು ಊರಿನಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.
ಸಂಬಂಧಿಕರಿಗೂ ಶೋಧ ನಡೆಸಿದ್ದಾರೆ. ಆದರೆ, ಆಕೆಗೆ ತಂದೆ-ತಾಯಿ ಸಹಿತ ಸಂಬಂಧಿಕರೂ ಸಿಗದಿರುವುದು ತೀವ್ರ ನಿರಾಸೆ ಮೂಡಿಸಿದೆ. ದೇಶಹಳ್ಳಿ ಗ್ರಾಮದ ಜಯಮ್ಮ, ಬೋರೇಗೌಡ ದಂಪತಿ ಪುತ್ರಿಯಾಗಿರುವ ಜೋಲಿ 1993ರಲ್ಲಿ 6 ವರ್ಷದ ಬಾಲಕಿಯಾಗಿದ್ದ ಸಮಯದಲ್ಲಿ ತಾಯಿ ಜಯಮ್ಮ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.
ಬೆಂಗಳೂರಿಗೆ ಚಿಕಿತ್ಸೆಗಾಗಿ ಬಂದಿದ್ದ ಜಯಮ್ಮ ಬಡತನದ ಕಾರಣದಿಂದ ಮಗಳನ್ನು ಸಾಕಲಾಗದೆ ಇಂದಿರಾನಗರದಲ್ಲಿರುವ ಆಶ್ರಯ ದತ್ತು ಕೇಂದ್ರದಲ್ಲಿ ಮಗಳನ್ನು ಬಿಟ್ಟು ಹೋಗಿದ್ದರು. ಅದೇ ಸಮಯದಲ್ಲಿ ಸ್ವೀಡನ್ ದೇಶದ ದಂಪತಿಯೊಬ್ಬರು ಜೋಲಿಯನ್ನು ದತ್ತು ಪಡೆದು ತಮ್ಮ ದೇಶಕ್ಕೆ ಕರೆದುಕೊಂಡು ಹೋಗಿದ್ದರು.
ಇತ್ತೀಚೆಗೆ ತನ್ನ ತಾಯಿ ಆತ್ಮಹತ್ಯೆ ಮಾಡಿಕೊಂಡ ಕನಸು ಜೋಲಿಗೆ ಬಿದ್ದಿದ್ದು ಪೋಷಕರ ಬಳಿ ತಾನು ಯಾರು ಎಂಬುದನ್ನು ಪ್ರಶ್ನಿಸಿದ್ದಾಳೆ. ಆಗ ಪೋಷಕರು 29 ವರ್ಷದ ಹಿಂದೆ ದತ್ತು ಪಡೆದ ಬಗ್ಗೆ ಮಾಹಿತಿ ನೀಡಿದ್ದಾರೆ. ಜೋಲಿ ಪತಿ ಎರಿಕ್ ಕರೆದುಕೊಂಡು ಬಂದು ತನ್ನ ತಂದೆ-ತಾಯಿ ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು
Karkala: ಲೈಸೆನ್ಸ್ ಇಲ್ಲದ ವ್ಯಾಪಾರಕ್ಕೆ ಕಡಿವಾಣ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.