ಸಿದ್ದೇಶ್ವರ್ ಜಯದ ಬೌಂಡರಿ ಮಂಜಪ್ಪ ಹಿಟ್ ವಿಕೆಟ್
ಸತತ ಜಯಕಾರ; ಮೋದಿ ಝೇಂಕಾರ
Team Udayavani, May 24, 2019, 6:00 AM IST
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗುವ ಮೂಲಕ ದಾಖಲೆಗೆ ನಾಂದಿ ಹಾಡಿದ್ದಾರೆ.
ಸಂಸದ ಜಿ.ಎಂ.ಸಿದ್ದೇಶ್ವರ್ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಕಾಂಗ್ರೆಸ್‌ನ ಎಚ್.ಬಿ.ಮಂಜಪ್ಪ ವಿರುದಟಛಿ 1,69,702 ಮತಗಳ ಅಂತರದಿಂದ ಜಯ ಸಾಧಿಸಿ, ಈವರೆಗೂ ಕ್ಷೇತ್ರದಲ್ಲಿ ಎದುರಾಳಿಯನ್ನು ಅತ್ಯಧಿಕ ಮತಗಳಿಂದ ಪರಾಭವಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಬಿಜೆಪಿಯ ಜಿ.ಎಂ.ಸಿದ್ದೇಶ್ವರ್ 1643 ಅಂಚೆಮತ ಸೇರಿ 6,52,996 ಮತ ಗಳಿಸಿದ್ದರೆ, ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಎಚ್.ಬಿ.ಮಂಜಪ್ಪ 611 ಅಂಚೆ ಮತ ಒಳಗೊಂಡು 4,83,294 ಮತಗಳನ್ನು ಪಡೆದಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ವಿರುದಟಛಿ ಜಯ ಗಳಿಸಿದ್ದ ಸಿದ್ದೇಶ್ವರ್, ಈ ಸಲ ಮೈತ್ರಿ ಅಭ್ಯರ್ಥಿಯನ್ನೂ ಮಣಿಸಿರುವುದು ವಿಶೇಷ. ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚೆನ್ನಯ್ಯ
ಒಡೆಯರ್ ಅವರ ಹ್ಯಾಟ್ರಿಕ್ ಗೆಲುವಿನ ದಾಖಲೆ ಸರಿಗಟ್ಟಿದ್ದ ಜಿ.ಎಂ.ಸಿದ್ದೇಶ್ವರ್, ಸತತ ನಾಲ್ಕನೇ ಬಾರಿಗೆ ಚುನಾಯಿತರಾಗುವ ಮೂಲಕ ಕ್ಷೇತ್ರದಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ.
ಈ ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಶಾಮನೂರು ಹಾಗೂ ಭೀಮಸಮುದ್ರ ಉದ್ಯಮಿ ಬೀಗರ ಮಧ್ಯೆ ಪೈಪೋಟಿ ಏರ್ಪಡುತ್ತಿತ್ತು. ಈಬಾರಿಯೂ ಸಂಸದ ಜಿ.ಎಂ.ಸಿದ್ದೇಶ್ವರ್-ಮಾಜಿ ಸ ಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಧ್ಯೆಯೇ ಬಿಗ್ ಫೈಟ್ ನಡೆಯಲಿದೆ ಎಂಬುದಾಗಿ ನಿರೀಕ್ಷಿಸಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪರ್ಧೆಗೆ ಆಸಕ್ತಿ ತೋರದಿದ್ದರಿಂದ ಅವರ ತಂದೆ, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಘೋಷಿಸಿತ್ತು. ಆದರೆ, ಅವರೂ ಸಹ ಟಿಕೆಟ್ ನಿರಾಕರಿಸಿದ್ದರಿಂದ ಪರ್ಯಾಯ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿಸಲಾಗಿತ್ತು. 23 ವರ್ಷಗಳ ನಂತರ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ಅಹಿಂದ ಟ್ರಂಪ್ ಕಾರ್ಡ್ ಯಶಸ್ವಿಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಟಿಕೆಟ್ ಘೋಷಣೆ ವಿಳಂಬ, ಪ್ರಚಾರಕ್ಕೆ ಕಾಲಾವಕಾಶದ ಅಭಾವ, ಕ್ಷೇತ್ರದಲ್ಲಿ ಕುಗ್ಗಿದ ಪಕ್ಷದ ವರ್ಚಸ್ಸು, ಸಂಘಟನೆ ಕೊರತೆ, ಹೊಸ ಮುಖ, ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಮೈತ್ರಿ ಅಭ್ಯರ್ಥಿ ಎಚ್.ಬಿ. ಪರಾಭವಗೊಳ್ಳಲು ಕಾರಣವೆಂದು ಹೇಳಲಾಗುತ್ತಿದೆ.
ಮೋದಿ ಕೈಗೊಂಡ ಅಭಿವೃದಿಟಛಿ ಗಮನಿಸಿದ ಮತದಾರರು
ನನ್ನನ್ನು ಸತತ ನಾಲ್ಕನೇ ಬಾರಿ ಚುನಾಯಿಸಿದ್ದಾರೆ. ಮೈತ್ರಿ
ಮುಖಂಡರು ಒಂದಾಗಿದ್ದರೂ ಕಾರ್ಯಕರ್ತರು ಒಗ್ಗೂಡಿರಲಿಲ್ಲ.
– ಜಿ.ಎಂ.ಸಿದ್ದೇಶ್ವರ್, ಜೆಪಿ ಸಂಸದ.
ದಾವಣಗೆರೆ ಕ್ಷೇತ್ರದಲ್ಲಿ ಮತದಾರರು ಬದಲಾವಣೆ ಬಯಸಿದ್ದು, ತಮ್ಮನ್ನು ಆಯ್ಕೆ ಮಾಡಲಿದ್ದಾರೆ ಎಂಬುದಾಗಿ ವಿಶ್ವಾಸವಿತ್ತು. ಆದರೆ,ಹುಸಿಯಾಗಿದೆ.
– ಎಚ್.ಬಿ.ಮಂಜಪ್ಪ, ಮೈತ್ರಿ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.