ಬೆಂಗಳೂರು ಹೆಸರಿಗೆ ಮಸಿ ಬಳಿಯಲು ಯತ್ನ; DJ ಡೇವಿಡ್ ಕಾರ್ಯಕ್ರಮ ರದ್ದು
Team Udayavani, Jan 12, 2017, 3:14 PM IST
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ನಡೆಯಬೇಕಾಗಿದ್ದ ಫ್ರೆಂಚ್ ನ ಜನಪ್ರಿಯ ಡಿಜೆ ಡೇವಿಡ್ ಗುಟ್ಟಾ ಅವರ ಸಂಗೀತ ರಸಮಂಜರಿ ಕಾರ್ಯಕ್ರಮ ರದ್ದುಗೊಂಡಿದೆ. ಅದಕ್ಕೆ ಕಾರಣ, ಸೂಕ್ತ ಭದ್ರತೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನುಮತಿ ನೀಡಲು ನಿರಾಕರಿಸಿರುವುದಾಗಿ ಆಂಗ್ಲ ಮಾಧ್ಯಮಗಳ ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ಹೊಸ ವರ್ಷಾರಣೆ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ ನಿಟ್ಟಿನಲ್ಲಿ ಬೆಂಗಳೂರು ಸುರಕ್ಷಿತವಲ್ಲ ಎಂದು ವರದಿ ಪ್ರಸಾರ ಮಾಡಿದ್ದವು. ಈಗ ಡೇವಿಡ್ ಗುಟ್ಟಾರಂತಹ ನಂಬರ್ ವನ್ ಸಂಗೀತಗಾರನ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡದಿದ್ದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಪ್ರಕರಣಗಳು ನಡೆಯುವ ಸಂಭವದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಿಲ್ಲ ಎಂದು ವರದಿ ವಿವರಿಸಿದೆ.
ಪಿಟಿಐ ವರದಿ ಪ್ರಕಾರ, ಕಾನೂನು ಸುವ್ಯವಸ್ಥೆ ಕಾರಣದಿಂದ ಕಾರ್ಯಕ್ರಮ ರದ್ದುಪಡಿಸಲಾಗಿದೆಯಂತೆ. ಹೊಸ ವರ್ಷಾಚರಣೆ ಸಂದರ್ಭ ಸಂಭವಿಸಿದ ಘಟನೆಯಿಂದಾಗಿ, ಇಂದು ನಗರದಲ್ಲಿ ನಡೆಯಬೇಕಿದ್ದ ಡೇವಿಡ್ ಗುಟ್ಟಾ ಸಂಗೀತ ರಸಮಂಜರಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಅಧಿಕಾರಿಗಳು ಶಿಫಾರಸು ಮಾಡಿರುವುದಾಗಿ ಹೇಳಿದೆ.
ಯಾವುದೇ ಕಾನೂನು ಬಾಹಿರವಾಗಲಿ, ಗದ್ದಲದಂತಹ ಪರಿಸ್ಥಿತಿಗೆ ಅವಕಾಶ ಕೊಡಲ್ಲ, ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಮನವರಿಕೆ ಮಾಡಿದ್ದೇವು. ಆದರೆ ಅಧಿಕಾರಿಗಳು ಸಮರ್ಪಕ ಭದ್ರತೆ ನೀಡುವ ಬಗ್ಗೆ ತಯಾರಿ ನಡೆಸಿಲ್ಲ ಎಂಬ ಕಾರಣ ನೀಡಿದ್ದಾರೆ. ಹಾಗಾಗಿ ಇಂದಿನ ಡೇವಿಡ್ ಗುಟ್ಟಾ ಅವರ ಸಂಗೀತ ರಸಮಂಜರಿ ಕಾರ್ಯಕ್ರಮ ರದ್ದುಪಡಿಸಿದ್ದೇವೆ ಎಂದು ಸನ್ ಬರ್ನ್ ಸಿಇಒ ಕಿರಣ್ ಸಿಂಗ್ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಯಾರೀತ ನಂಬರ್ ವನ್ ಡಿಜೆ ಡೇವಿಡ್ ಗುಟ್ಟಾ?
ಕಲಾವಿದನಾಗಿ ವೃತ್ತಿ ಆರಂಭಿಸಿ ನಂತರ ಸಂಗೀತದತ್ತ ಮುಖಮಾಡಿದ ನೆದರ್ಲ್ಯಾಂಡ್‌ನ ಲೇಯ್ಡ್ ಬ್ಯಾಕ್ ಲ್ಯೂಕ್ ಪ್ರಪಂಚದ ನಂಬರ್ ಒನ್ ಡಿಜೆ ಡೇವಿಡ್ ಗುಟ್ಟಾ. ಸ್ಟೀವ್ ಆಂಗೆಲೊ, ಸೆಬಾಸ್ಟಿನ್ ಇಂಗ್‌ರೊಸೊ, ಆಕ್ಸ್‌ವೆಲ್ ಮೊದಲಾದವರೊಂದಿಗೆ ಸೇರಿಕೊಂಡು ಯುರೋಪ್, ಉತ್ತರ ಅಮೆರಿಕೆಯ ದೇಶಗಳಲ್ಲೆಲ್ಲಾ ಸಂಗೀತ ರಸಧಾರೆ ಹರಿಸುವ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ.
ಆಯೋಜಕರು ಸುಳ್ಳು ಸುದ್ದಿ ಹಬ್ಬಿಸಿದ್ಯಾಕೆ?
ಫ್ರೆಂಚ್ ಡಿಜೆ ಗುಟ್ಟಾ ಕಾರ್ಯಕ್ರಮಕ್ಕೆ ಭದ್ರತೆ ದೃಷ್ಟಿಯಿಂದ ಅನುಮತಿ ನೀಡಿಲ್ಲ ಎಂಬುದು ಸುಳ್ಳು. ಎಪಿಎಂಸಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಅನುಮತಿ ನೀಡಿಲ್ಲ. ಅದನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರಣ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಬದ್ಧ ಎಂದು ಬೆಂಗಳೂರು ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜನವರಿ 10ರಂದು ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ್ದರು. 15 ಸಾವಿರ ಜನ ಸೇರುವುದಾಗಿ ಸನ್ ಬರ್ನ್ ಹೇಳಿತ್ತು. ಆದರೆ ಆ ಸ್ಥಳದಲ್ಲಿ ಚುನಾವಣೆ ನಡೆಯುತ್ತಿರುವ ನಿಟ್ಟಿನಲ್ಲಿ ಬೇರೆ ದಿನ ಕಾರ್ಯಕ್ರಮ ಆಯೋಜಿಸಿ ಅನುಮತಿ ನೀಡುತ್ತೇವೆ ಎಂದು ಹೇಳಿರುವುದಾಗಿ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.