ಕತ್ತು ಕುಯ್ದುಕೊಂಡು ಸತ್ತ ರೇಪಿಸ್ಟ್‌ ಸೈಕೋ


Team Udayavani, Feb 28, 2018, 7:00 AM IST

18.jpg

ಬೆಂಗಳೂರು: ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಹಾಗೂ ನಾಲ್ಕೈದು ಬಾರಿ ಜೈಲಿನಿಂದ ಪರಾರಿಯಾಗಿ ಪೊಲೀಸರು ಮಾತ್ರವಲ್ಲದೇ ಸಾರ್ವಜನಿಕರ ನಿದ್ದೆಗೆಡಿಸಿದ್ದ ಶಂಕರ್‌ ಅಲಿಯಾಸ್‌ ಸೈಕೋ ಶಂಕರ್‌(38) ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಕತ್ತು  ಕುಯ್ದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅನಾರೋಗ್ಯ ಹಾಗೂ ಮಾನಸಿಕ ಖನ್ನತೆಗೊಳಗಾಗಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಎಡಪ್ಪಾಡಿ ಮೂಲದ ಶಂಕರ್‌, ತನಗೆ ನೀಡಿದ್ದ ವಿಶೇಷ ಸೆಲ್‌ನಲ್ಲಿ ನಸುಕಿನ 2.15ರ ಸುಮಾರಿಗೆ ಶೇವಿಂಗ್‌ಗೆ ಬಳಸುವ ಬ್ಲೇಡ್‌ನಿಂದ ಕುತ್ತಿಗೆ ಕುಯ್ದುಕೊಂಡು ಒದ್ದಾಡುತ್ತಿದ್ದ. ಇದನ್ನು ಗಮನಿಸಿದ ರಾತ್ರಿ ಪಾಳಿಯ ಸಿಬ್ಬಂದಿ ಕೂಡಲೇ ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮುಂಜಾನೆ 5.10ಕ್ಕೆ ಮೃತಪಟ್ಟಿದ್ದಾನೆ. ಸತತ ಹತ್ತಾರು ವರ್ಷಗಳ ಜೈಲುವಾಸ, ಅಪರಾಧ
ಪ್ರಕರಣಗಳು ಹಾಗೂ ಯಾರೊಂದಿಗೂ ಮಾತನಾಡ ದೆ ಮಾನಸಿಕ ಖನ್ನತೆಗೊಳಗಾಗಿದ್ದ ಶಂಕರ್‌ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಸೆಲ್‌ನ ಮೂಲೆಯೊಂದರಲ್ಲಿ ಕುಳಿತು ಚಿಂತಿಸುತ್ತಿದ್ದ.

ಖನ್ನತೆಗೊಳಗಾಗಿದ್ದ ಶಂಕರ್‌: ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಶಂಕರ್‌ನನ್ನು ಬಂಧಿಸಿದ ಪೊಲೀಸರು ಬಿಗಿ ಭದ್ರತೆಯಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಿದ್ದರು. ಸಹ ಕೈದಿಗಳ ಸಂಪರ್ಕ ಕಡಿತಗೊಳಿಸಿದ್ದರು. ಸೈಕೋ ರೀತಿಯ ವರ್ತನೆಯಿಂದ ಇತರೆ
ಕೈದಿಗಳು ಆತನ ಜತೆ ಮಾತನಾಡುತ್ತಿರಲಿಲ್ಲ. ಜೈಲಿನಿಂದ ಮತ್ತೂಮ್ಮೆ ಪರಾರಿಯಾಗುತ್ತಾನೆ ಎಂಬ ಕಾರಣಕ್ಕೆ ವಿಶೇಷ ಕಾಳಜಿ ವಹಿಸಲಾಗಿತ್ತಲ್ಲದೆ ಹೆಚ್ಚಿನ ನಿರ್ಬಂಧ ವಿಧಿಸಲಾಗಿತ್ತು. ಎಸ್ಕೇಪ್‌ ಆಗುವ ವೇಳೆ ಮೂಳೆ ಮುರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಶಂಕರ್‌ನ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡತೊಡಗಿತ್ತು. ಜೈಲಿನ ಆಸ್ಪತ್ರೆ ಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ. ಒಂಟಿತನ ಹಾಗೂ
ತನ್ನ ಕೃತ್ಯಗಳ ಪಾಪ ಪ್ರಜ್ಞೆ ಅತಿಯಾಗಿ ಕಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಶಂಕರ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಕೆಲ ದಿನಗಳ ಹಿಂದೆ ಶೇವಿಂಗ್‌ ಮಾಡಿಸಲು ಹೋದಾಗ ಬ್ಲೇಡ್‌ ಕಳವು ಮಾಡಿಕೊಂಡು ತನ್ನ ಬಳಿ ಇಟ್ಟುಕೊಂಡಿದ್ದ. ಇದರಿಂದಲೇ ಮಂಗಳವಾರ ನಸುಕಿನಲ್ಲಿ ಕತ್ತುಕುಯ್ದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಈತನ ವಿರುದ್ಧದ ಮೂರು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.

ಜಯಶಂಕರ್‌ ವಿರುದ್ಧ ಬೆಂಗಳೂರು ಗ್ರಾಮಾಂತರ, ತುಮಕೂರು, ಕಡೂರು, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮೂರು ಮತ್ತು ತಮಿಳುನಾಡಿನ ಚೆನ್ನೈ, ಧರ್ಮಪುರಿ, ಹೊಸೂರು, ಸೇಲಂ, ತಿರುಪ್ಪತ್ತೂರು ಸೇರಿ ಎರಡು ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ
ಆತ್ಯಾಚಾರ, ಕೊಲೆ ಪ್ರಕರಣಗಳು ವಿಚಾರಣೆಯಲ್ಲಿವೆ. ಈತನ ವಿರುದ್ಧ ಒಟ್ಟು 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ತಮಿಳುನಾಡಿನಲ್ಲಿ 20 ಮತ್ತು ಕರ್ನಾಟಕದಲ್ಲಿ 5 ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 5ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ತಮಿಳುನಾಡಿನ 3 ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆ ಯಾಗಿದೆ. ಇನ್ನುಳಿದ ಪ್ರಕರಣಗಳು ನ್ಯಾಯಾ ಲಯದಲ್ಲಿ ವಿಚಾರಣೆ ಹಂತದಲ್ಲಿವೆ.

ಜೈಲಿನಿಂದ ಎಸ್ಕೇಪ್‌ ಆಗಿದ್ದ ಶಂಕರ್‌: 2011ರಲ್ಲಿ ಕರ್ನಾಟಕ ಪೊಲೀಸರು ಜಯಶಂಕರ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ
ಕಳುಹಿಸಿದ್ದರು. 2013ರ ಸೆ 1 ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಲು ನಿರ್ಧರಿಸಿದ್ದ ಶಂಕರ್‌, ಅದಕ್ಕಾಗಿ ಸರ್ಜಿಕಲ್‌ ಗ್ಲೋಸ್‌ ಹಾಗೂ ಬ್ಯಾರಕ್‌ ಹಾಗೂ ತನ್ನ ಸೆಲ್‌ನ ಎರಡು ನಕಲಿ ಕೀಲಿಕೈಗಳನ್ನು ಸಿದ್ಧಪಡಿಸಿಕೊಂಡಿದ್ದ. ಅಷ್ಟೇ ಅಲ್ಲದೇ, ಪೊಲೀಸರ ವೇಷ ಧರಿಸಿ ರಾತ್ರಿ ಕರೆಂಟ್‌ ಹೋದ ಸಂದರ್ಭದಲ್ಲಿ ಜೈಲಿನ 15 ಅಡಿಯ ಎರಡು ಕಾಂಪೌಂಡ್‌, 30 ಅಡಿ ಎತ್ತರ ಮುಖ್ಯದ್ವಾರದ ಕಾಂಪೌಂಡ್‌ ಹಾರಿ ಎಸ್ಕೇಪ್‌ ಆಗಿದ್ದ. ಈ ವೇಳೆ ಆರೋಪಿಯ ಕಾಲು ಮತ್ತು ಬೆನ್ನಿಗೆ ಗಾಯವಾಗಿತ್ತು. ನಂತರ
ತಮಿಳುನಾಡಿನಲ್ಲಿ ತಲೆಮರೆಸಿ ಕೊಂಡಿದ್ದ ಈತ, ಮೂರು ದಿನಗಳ ಬಳಿಕ ಪರಪ್ಪನ ಅಗ್ರಹಾರ ಬಳಿಯ ಕೂಡ್ಲು ಗೇಟ್‌ನ ಖಾಲಿ ನಿವೇಶನದ ಟೆಂಟ್‌ವೊಂದರಲ್ಲಿ ಪತ್ತೆಯಾಗಿದ್ದ. ಈ ಸಂಬಂಧ ಜೈಲಿನ 20 ಮಂದಿ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿತ್ತು. ಇದಕ್ಕೂ ಮೊದಲು ಪೊಲೀಸರು  ಶಂಕರ್‌ ಪತ್ತೆಗಾಗಿ ನಗದು ಬಹುಮಾನ ಘೋಷಿಸಿದ್ದಲ್ಲದೇ, ಸಾವಿರಾರು ಪೋಸ್ಟರ್‌ಗಳು, 75 ಸಾವಿರ ಕರಪತ್ರಗಳನ್ನು 5 ಭಾಷೆಗಳಲ್ಲಿ ಮುದ್ರಿಸಿ ನೆರೆ ರಾಜ್ಯಗಳಲ್ಲೂ ಹಂಚಿದ್ದರು.

ಯಾರು ಈ ಜೈಶಂಕರ್‌?
‌ಮಿಳುನಾಡಿನ ಸೇಲಂನ ಎಡಪ್ಪಾಡಿ ಮೂಲದವನಾದ ಜಯಶಂಕರ್‌, ಟ್ರಕ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮದುವೆಯಾಗಿ ಮೂವರು ಹೆಣ್ಣು ಮಕ್ಕಳನ್ನು ಹೊಂದಿದ್ದ ಶಂಕರ್‌ ಕಾಮಪಿಶಾಚಿಯಂತೆ ವರ್ತಿಸುತ್ತಿದ್ದ ಮಹಿಳೆಯರನ್ನು ಅತ್ಯಾಚಾರವೆಸಗಿ ಕೊಲೆಗೈಯುತ್ತಿದ್ದ. ಜತೆಗೆ ಕಪ್ಪು ಕೈ ಚೀಲವನ್ನು ಹೊತ್ತೂಯ್ಯುತ್ತಿದ್ದ ಶಂಕರ್‌, ಅದರಲ್ಲಿ ನುರಿತ ಮಚ್ಚು ಹಾಗೂ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಎದುರಾಗುವ ಮಹಿಳೆಯರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆಗೈಯುತ್ತಿದ್ದ. 2007ರಲ್ಲಿ ಪೆರೆಂಡಹಳ್ಳಿಯಲ್ಲಿ 45 ವರ್ಷದ ಮಹಿಳೆ ಶ್ಯಾಮಲಾ ಎಂಬಾಕೆಯನ್ನು ಅತ್ಯಾಚಾರವೆಸಗಿ ಕೊಲೆಗೆ ಯತ್ನಿಸಿದ್ದ. ಈ ಮೂಲಕ ತನ್ನ ಪಾತಕ ಲೋಕದ ಖಾತೆ ತೆರೆದಿದ್ದ. ಬಳಿಕ 2009ರಲ್ಲಿ ಜುಲೈ 3ರಿಂದ ಆಗಸ್ಟ್‌ ಅಂತ್ಯದೊಳಗೆ 12 ಮಂದಿ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ.

2009ರಲ್ಲಿ ಮೊದಲ ಬಂಧನ
2009ರ ಆ.23ರಂದು ತಮಿಳುನಾಡಿನಲ್ಲಿ ಮಹಿಳಾ ಪೊಲೀಸ್‌ ಪೇದೆಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದಿದ್ದ. ಒಂದು
ತಿಂಗಳ ಬಳಿಕ ಮೃತ ದೇಹ ಪತ್ತೆಯಾಗಿತ್ತು. ಇದಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ನಂತರ 2010ರ ಮಾರ್ಚ್‌ 13ರಂದು ಹತ್ಯೆ ಪ್ರಕರಣದಲ್ಲಿ ವಿಚಾರಣೆಗೆಂದು ಕರೆದೊಯ್ಯುವಾಗ ಪೊಲೀಸರಿಗೆ ಚಳ್ಳೆಹಣ್ಣು
ತಿನ್ನಿಸಿ ಸೇಲಂ ಬಸ್‌ ನಿಲ್ದಾಣದಿಂದ ಪರಾರಿಯಾಗಿದ್ದ.ಇದಾದ ಬಳಿಕ ಮತ್ತೆ ಅಕ್ಟೋಬರ್‌ನಲ್ಲಿ ಮತ್ತೂಮ್ಮೆ ಬಂಧಿಸಿದ್ದರು. ಅಷ್ಟರಲ್ಲಿ
ತಿರುಪ್ಪೂರು, ಸೇಲಂ ಮತ್ತು ಧರ್ಮಪುರಿಗಳಲ್ಲಿ ತನ್ನ ಸಹಚರನೊಬ್ಬನ ಜತೆ ಸೇರಿ 12 ಅತ್ಯಾಚಾರವೆಸಗಿದ್ದ.

ರಾಜ್ಯದಲ್ಲೂ ಕೃತ್ಯ: 2011ರಲ್ಲಿ ತಮಿಳುನಾಡು ಪೊಲೀಸರಿಂದ ಎಸ್ಕೇಪ್‌ ಆಗಿ ಲಾರಿ ಏರಿ ರಾಜ್ಯಕ್ಕೆ ಬಂದ ಶಂಕರ್‌, ಚಿತ್ರದುರ್ಗದಲ್ಲಿ 
ಪೊಲೀಸ್‌ ಪೇದೆಯ ಪತ್ನಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿದ್ದ ಲ್ಲದೇ, ಇದನ್ನು ತಡೆಯಲು ಬಂದ ಪತಿಯನ್ನೂ ಕೊಂದಿದ್ದ. ಈ 
ಮೂಲಕ ರಾಜ್ಯದಲ್ಲಿ ತನ್ನ ಕೃತ್ಯದ ಖಾತೆ ತೆರೆದಿದ್ದ. ಬಳಿಕ ತುಮಕೂರಿನಲ್ಲಿ ಒಂದೇ ಕುಟುಂಬದ ಮೂವರನ್ನು ಕೊಂದಿದ್ದ. ಈ
2 ಜಿಲ್ಲೆಗಳಲ್ಲಿ 5 ಅತ್ಯಾಚಾರ, ಅತ್ಯಾಚಾರ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದೇ ವರ್ಷ ಮೇ11ರಂದು ವಿಜಯಪುರದಲ್ಲಿ
ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ನಂತರ ಪರಪ್ಪನ ಅಗ್ರಹಾರ ಸೇರಿದ ಶಂಕರ್‌ 2013ರಲ್ಲಿ ಎಸ್ಕೇಪ್‌ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿವೆ. 

ಚಿತ್ರದುರ್ಗದಲ್ಲೂ ತಲ್ಲಣ ಸೃಷ್ಟಿಸಿದ್ದ
ಚಿತ್ರದುರ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸೈಕೋ ಶಂಕರ್‌, ಚಿತ್ರದುರ್ಗ ಜಿಲ್ಲೆಯಲ್ಲೂ ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹಿರಿಯೂರು ತಾಲೂಕಿನ ಮೇಟಿಕುರ್ಕೆ ಸಮೀಪದ ಬಾಲು ಅಯ್ಯರ್‌ ಎಂಬುವವರ ತೋಟದ ಗುಡಿಸಲಿಗೆ ನುಗ್ಗಿ ತೋಟ ಕಾಯುತ್ತಿದ್ದ ಕೂಲಿ ಕಾರ್ಮಿಕನನ್ನು ಮರಕ್ಕೆ ಕಟ್ಟಿ ಹಾಕಿ ಆತನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಗಂಡನನ್ನು ಗುಡಿಸಲಿನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದ.
ನಂತರ ಚಿತ್ರದುರ್ಗ ತಾಲೂಕಿನ ಹೊರವಲಯದ ಛಲವಾದಿ ಗುರುಪೀಠದ ಹಿಂಭಾಗದ ಜಮೀನಿನಲ್ಲಿ ವಾಸವಾಗಿದ್ದ ವೃದಟಛಿ ದಂಪತಿಗಳ ಮೇಲೆ ಹಲ್ಲೆ ನಡೆಸಿ ವೃದೆಟಛಿ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಮೊಳಕಾಲ್ಮೂರು ತಾಲೂಕಿನ ಕೋಳಿಫಾರಂ ಒಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಎಲ್ಲ ಘಟನೆಗಳು ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದವು. ತೋಟದ ಮನೆಗಳಲ್ಲಿ ವಾಸ ಮಾಡಲು ರೈತರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರಿಗೆ ತಲೆನೋವಾಗಿದ್ದ
ಜಯಶಂಕರ್‌ ಎಂದರೆ ಕರ್ನಾಟಕ ಮಾತ್ರ ವಲ್ಲ. ಆಂಧ್ರ, ತಮಿಳುನಾಡು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ. ಈತನ ಕೃತ್ಯದ ಬಗ್ಗೆ ತಲೆಕೆಡಿಸಿಕೊಂಡಿದ್ದ ಪೊಲೀಸರು ಉಮೇಶ್‌ ರೆಡ್ಡಿಗೂ ಮೀರಿದ ಕಾಮುಕ ಎಂದು ವಾದಿಸುತ್ತಿದ್ದರು. ಒಂಟಿ ಮಹಿಳೆಯರು,
ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರನ್ನೆ ಟಾರ್ಗೆಟ್‌ ಮಾಡಿಕೊಂಡು ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದ. ಈ
ರೀತಿ ಕೃತ್ಯಗಳು ಮೇಲಿಂದ ಮೇಲೆ ಮಾಡುತ್ತಿದ್ದರಿಂದ ಈತನಿಗೆ ಜಯಶಂಕರ್‌ ಅಲಿಯಾಸ್‌ ಸೈಕೋ ಜಯಶಂಕರ್‌ ಎಂದು
ಪೊಲೀಸರೇ ಹೆಸರು ಕಟ್ಟಿದ್ದರು.

ಪಂಚ ಭಾಷೆ ನಿಪುಣ: ನಗರದ ಹೊರವಲಯದಲ್ಲಿ ಡಾಬಾ, ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಪರಿಚಯ ಮಾಡಿಕೊಂಡು ನಂಬಿಸಿ ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡುತ್ತಿದ್ದ ಶಂಕರ್‌, ಸೈಕೋನಂತೆ ವರ್ತಿಸುತ್ತಿದ್ದ ಇವನಿಗೆ ಐದು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಿದ್ದ. ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ. ಇದೇ ಈತನಿಗೆ ವರವಾಗಿತ್ತು.

ಸೈಕೋ ಟು ಎಸ್ಕೇಪ್‌ ಶಂಕರ್‌: ಈತನ ಕೃತ್ಯದ ಮಾದರಿಯಿಂದ ಸೈಕೋ ಆಗಿದ್ದ ಶಂಕರ್‌ ನಂತರ ಜೈಲುಗಳಿಂದ ಪರಾರಿಯಾಗುತ್ತ ಎಸ್ಕೇಪ್‌ ಶಂಕರ್‌ ಎಂಬ ಅಪಕೀರ್ತಿ ಒಳಗಾಗಿದ್ದ. 2009ರಲ್ಲಿ ತಮಿಳುನಾಡಿನ ಸೇಲಂನಿಂದ ಪೊಲೀಸರ ವಶದಲ್ಲಿದ್ದಾಗಲೇ ಪರಾರಿ. 2011ರಲ್ಲಿ ಕೋರ್ಟ್‌ ವಿಚಾರಣೆಗೆ ಕರೆದೊಯ್ಯುವಾಗ ಸೇಲಂ ಬಸ್‌ ನಿಲ್ದಾಣದಿಂದ ಎಸ್ಕೇಪ್‌. ಚಿತ್ರದುರ್ಗದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಅಲ್ಲಿಂದಲೂ ಪರಾರಿಯಾಗಿದ್ದ. 2013ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ.

ತಾನೇ ವಾದ ಮಂಡಿಸುತ್ತಿದ್ದ 
ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿದ್ದ ಸೈಕೋ ಶಂಕರ್‌, ತನ್ನ ವಿರುದ್ಧ ನ್ಯಾಯಾಲ ಯದಲ್ಲಿ ತಾನೇ ವಾದ
ಮಂಡಿಸುತ್ತಿದ್ದ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಕಾನೂನಿನ ಬಗ್ಗೆ ತಿಳಿದುಕೊಳ್ಳುತ್ತಿದ್ದ ಶಂಕರ್‌, ಹೈಕೋರ್ಟ್‌ ಹಾಗೂ ಕೆಳ ಹಂತದ ನ್ಯಾಯಾಲಯಗಳಲ್ಲಿ ತಾನೇ ವಾದ ಮಂಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಟಾಪ್ ನ್ಯೂಸ್

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

1-roh

Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ

ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ

Shivraj singh chou

Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Foot ball

Mangaluru; ಫುಟ್‌ಬಾಲ್‌ ಕ್ವಾರ್ಟರ್‌ ಫೈನಲ್‌ :ಕಸಬ ಬ್ರದರ್ ಮೇಲುಗೈ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ

1-roh

Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ

Randeep-surgewala

ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.