ದೀನ್ ದಯಾಳ್ ಆದರ್ಶ ಮೈಗೂಡಿಸಿಕೊಳ್ಳಿ
Team Udayavani, Feb 12, 2020, 3:03 AM IST
ಬೆಂಗಳೂರು: ಏಕಾತ್ಮ ಮಾನವತಾವಾದ ಮತ್ತು ಅಂತ್ಯೋದಯ ಚಿಂತನೆ ನೀಡಿದ ಮೇರು ವ್ಯಕ್ತಿತ್ವ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರದ್ದು ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಲ್ಲೇಶ್ವರ ಮಂಡಲ ವತಿಯಿಂದ ಆಯೋಜಿಸಿದ್ದ ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಬಲಿದಾನ ದಿನದಲ್ಲಿ ಮಾತನಾಡಿದರು.
ದೀನ್‌ದಯಾಳರ ಆದರ್ಶ, ಪ್ರೇರಣೆ, ತ್ಯಾಗ ಸದಾ ನಮ್ಮೆಲ್ಲರಿಗೂ ಅವಿಸ್ಮರಣೀಯ. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಂಡು ಸಾಗೋಣವೆಂದರು. ಪಂಡಿತ್ ದೀನ್ ದಯಾಳರು ಪ್ರಖರ ರಾಷ್ಟ್ರಭಕ್ತರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಏಕಾತ್ಮ ಮಾನವತಾವಾದದ ಹರಿಕಾರರಾದ ಅವರ ಪುಣ್ಯತಿಥಿಯಂದು ನಾವು ಅವರ ಆದರ್ಶ ಪಾಲಿಸೊಣ, ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕಾರ್ಯಕರ್ತ.ರಿಗೆ ಸಲಹೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೀನ್‌ದಯಾಳ್ ಉಪಾಧ್ಯಾ ಯರ ಆಶಯದಂತೆ ಕಾರ್ಯಕ್ರಮ ಹಮ್ಮಿಕೊಂಡು ಜನಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮಂಡಲ ಅಧ್ಯಕ್ಷೆ ಕಾವೇರಿ ಕೇದರನಾಥ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.