ಸಕ್ರೆಬೈಲು ಆನೆ ಬಿಡಾರದ ಮರಿಯಾನೆ “ಶಾರದೆ’ ಸಾವು
Team Udayavani, Jul 1, 2019, 3:00 AM IST
ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮರಿಯಾನೆಯೊಂದು ಶನಿವಾರ ರಾತ್ರಿ ಮೃತಪಟ್ಟಿದೆ. ಎರಡು ವರ್ಷದ “ಶಾರದೆ’ ಮೃತ ಮರಿಯಾನೆ. ಕಳೆದ ವರ್ಷ ಹಾಸನದ ಕಾಡಿನಲ್ಲಿ ಸೆರೆ ಹಿಡಿಯಲಾಗಿದ್ದ ಈ ಆನೆಯನ್ನು ಬಿಡಾರಕ್ಕೆ ತಂದು ಸಾಕಲಾಗುತ್ತಿತ್ತು.
ಬಿಡಾರಕ್ಕೆ ತಂದ ನಂತರ ಇದಕ್ಕೆ ಶಾರದೆ ಎಂದು ಹೆಸರಿಡಲಾಗಿತ್ತು. ಈ ಆನೆ ಮರಿ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ರಕ್ತವಾಂತಿ ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಡಾರದ ವೈದ್ಯ ವಿನಯ್ ಚಿಕಿತ್ಸೆ ನೀಡುತ್ತಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಆನೆಯ ಅಂಗಾಂಗಗಳನ್ನು ಪರೀಕ್ಷೆಗೆ ಒಳಪಡಿಸಲು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿಗೆ ಹಾಗೂ ಕೇರಳದ ಪಶು ಕಾಲೇಜಿಗೆ ಕಳುಹಿಸಲಾಗುವುದು.
ಅಲ್ಲಿಂದ ವರದಿ ಬಂದ ನಂತರ ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪ್ರಭಾರ ವನ್ಯಜೀವಿ ಡಿಎಫ್ಒ ಆಂತೋಣಿ ಮರಿಯಪ್ಪ ತಿಳಿಸಿದ್ದಾರೆ. ಶಾರದೆ ಸಾವಿನಿಂದ ಸಕ್ರೆಬೈಲು ಬಿಡಾರದ ಆನೆಗಳ ಸಂಖ್ಯೆ 26 ರಿಂದ 25ಕ್ಕೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.