ಬಿಜೆಪಿಯಲ್ಲೀಗ ‘ಹೊಸ ನೀರು, ಹೊಸ ನೀತಿ’ ಸೂತ್ರ; ಪಕ್ಷದ ಇಮೇಜ್ ಬದಲಾಯಿಸಲು ವರಿಷ್ಠರ ನಿರ್ಧಾರ
Team Udayavani, Apr 15, 2022, 10:12 AM IST
ಬೆಂಗಳೂರು : ಇದೇ ತಿಂಗಳು 16 ಹಾಗೂ 17 ರಂದು ಹೊಸಪೇಟೆಯಲ್ಲಿ ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆ ಹಲವು ಕಾರಣಗಳಿಂದ ಈಗ ಮಹತ್ವ ಪಡೆದುಕೊಂಡಿದ್ದು ” ಹೊಸ ನೀರು, ಹೊಸ ನೀತಿ” ಯ ಹರಿವಿಗೆ ಈ ಸಭೆ ನಾಂದಿ ಹಾಡಲಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಇಮೇಜ್ ಬದಲಾಯಿಸುವುದು ಅನಿವಾರ್ಯ ಎಂಬುದು ಬಿಜೆಪಿ ವರಿಷ್ಠರ ಅಂಬೋಣ. ರಾಜ್ಯ ಘಟಕದ ಒಟ್ಟಾರೆ ವಿದ್ಯಮಾನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ನಿರೀಕ್ಷೆಯಂತೆ ಇಲ್ಲ. ಜಾತಿವಾದ, ವಂಶವಾದ ಹಾಗೂ ಭ್ರಷ್ಟಾಚಾರದ ವಿರುದ್ಧ ಪಕ್ಷ ನಿಲ್ಲಬೇಕೆಂಬ ರಾಷ್ಟ್ರೀಯ ನಾಯಕರ ಧೋರಣೆಗೆ ಮೊದಲ ಅಡ್ಡಿ ಕರ್ನಾಟಕದಿಂದಲೇ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಪಾತ್ರ ವಹಿಸಲಿದೆ.
ಇದನ್ನೂ ಓದಿ:ರಾಜೀನಾಮೆ ನೀಡುವಂತೆ ಈಶ್ವರಪ್ಪ ಮೇಲೆ ಹೈಕಮಾಂಡ್ ಒತ್ತಡ ಹೇರಿಲ್ಲ: ಸಿಎಂ ಬೊಮ್ಮಾಯಿ
ಈ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಮುಂದಿನ ಚುನಾವಣೆ ಎದುರಿಸಲು ಪಕ್ಷದ ಅಜೆಂಡಾ ಏನು ? ಎಂಬುದರ ಬಗ್ಗೆಯೂ ಈ ಸಭೆಯಲ್ಲಿ ಸುಳಿವು ದೊರಕಲಿದೆ.
ಶಾ ಪ್ರಶ್ನೆಗೆ ಉತ್ತರ?: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಸಂದರ್ಭದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ತಂತ್ರಗಾರಿಕೆ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಮುಂದಿನ ಚುನಾವಣೆ ಎದುರಿಸಲು ನಿಮ್ಮ ಆಕ್ಷನ್ ಪ್ಲ್ಯಾನ್ ಏನು? ಎಂದು ಅಮಿತ್ ಶಾ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಿರಿಯ ನಾಯಕರಿಗೆ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ರಾಜ್ಯ ನಾಯಕರು ತಡಬಡಾಯಿಸಿ ಹೋಗಿದ್ದರು. ಯಾರ ಬಳಿಯೂ ಉತ್ತರ ಇರಲಿಲ್ಲ.
ರಾಜ್ಯದಲ್ಲಿ ಆಗ ನಡೆಯುತ್ತಿದ್ದ ಹಿಂದುತ್ವದ ಅಜೆಂಡಾದ ಹೋರಾಟಕ್ಕೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದ ಶಾ, ” ಉತ್ತರ ಪ್ರದೇಶದದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದಿದ್ದು ಕೇವಲ ಹಿಂದುತ್ವದ ಮತದಿಂದ ಎಂಬ ಭ್ರಮೆ ಬೇಡ. ಹಿಂದುತ್ವದಿಂದ ಮತ ಕ್ರೋಢಿಕರಣವಾಗುವುದು ಶೇ.30 ರಷ್ಟು ಮಾತ್ರ. ಚುನಾವಣೆ ಗೆಲ್ಲುವುದಕ್ಕೆ ಹಿಂದುತ್ವದ ಜತೆಗೆ ಬೇರೆ ತಂತ್ರಗಾರಿಕೆಯೂ ಅಗತ್ಯ ಎಂದು ಪ್ರತಿಪಾದಿಸಿದ್ದರು. ಆ ತಂತ್ರಗಾರಿಕೆಯ ಬೀಜ ಬಿತ್ತನೆಗೆ ನೆಲಹದಗೊಳಿಸುವ ಮಹತ್ವದ ಸಭೆ ಇದಾಗಲಿದೆ ಎಂಬ ಮಾತು ಬಿಜೆಪಿಯ ಆಂತರಿಕ ವಲಯದಿಂದ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.