ತೊಗರಿ ಸಾಗಣೆಯಲ್ಲಿ ಇಳಿಮುಖ
Team Udayavani, Sep 3, 2017, 12:35 PM IST
ಕಲಬುರಗಿ: ದರ ಕುಸಿತದಿಂದ ನಲುಗಿದ ತೊಗರಿ ಕಣಜಕ್ಕೆ ಜಿಎಸ್‌ಟಿ ಮತ್ತೂಂದು ನಿಟ್ಟಿನಲ್ಲಿ ಹೊಡೆತ ನೀಡಲಾರಂಭಿಸಿದೆ. ತೊಗರಿ ಮಾರಾಟ-ಖರೀದಿ ಹಾಗೂ ಬೇಳೆ ಮಾಡುವ ಪ್ರಕ್ರಿಯೆಗೆ ಜಿಎಸ್‌ಟಿ ಇಲ್ಲದಿದ್ದರೂ ಬೇಳೆ ಸಾಗಾಣಿಕೆಗೆ ತೆರಿಗೆ ಅನ್ವಯಿಸುತ್ತಿರುವುದು ಸಾಗಾಣಿಕೆ ಮೇಲೆ ಪರಿಣಾಮ ಬೀರಿದೆ.
ಕಲಬುರಗಿಯ ತೊಗರಿ ಬೇಳೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಎಂಬುದಾಗಿ ಹೆಸರು ಪಡೆದಿದೆ. ಇಲ್ಲಿಯ ತೊಗರಿ ಬೇಳೆ ತಮಿಳುನಾಡು, ಪುದುಚೇರಿಯಲ್ಲದೆ ರಾಜ್ಯದ ದಕ್ಷಿಣ ಕರ್ನಾಟಕ ಭಾಗಕ್ಕೂ ಸರಬರಾಜಾಗುತ್ತದೆ. ಆದರೆ ಈ ಸಾಗಾಣಿಕೆ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿರುವುದು ಸಾಗಾಣಿಕೆ ಇಳಿಮುಖವಾಗಲು ಕಾರಣವಾಗಿದೆ. ಕಳೆದ ವರ್ಷ 2016ರ ಏಪ್ರಿಲ್‌ದಿಂದ ಆಗಸ್ಟ್ ವರೆಗೆ ಕಲಬುರಗಿಯಿಂದಲೇ 4.73 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಸರಬರಾಜು ಆಗಿತ್ತು. ಪ್ರಸಕ್ತ 3.64 ಕ್ವಿಂಟಲ್ ಮಾತ್ರ ಸರಬರಾಜು ಆಗಿದೆ.
ಇದಕ್ಕೆ ಸಾಗಾಣಿಕೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದೇ ಕಾರಣ ಎಂದು ದ್ವಿದಳ ಧಾನ್ಯ ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಜಿಎಸ್‌ಟಿ ಜಾರಿ ಮುಂಚೆ ಬೆಂಗಳೂರಿಗೆ ಒಂದು ಕ್ವಿಂಟಲ್ ತೊಗರಿ ಬೇಳೆಗೆ 140 ರೂ.ದಿಂದ 150 ರೂ. ಸಾಗಾಣಿಕೆ ವೆಚ್ಚವಾಗುತ್ತಿತ್ತು. ಜಿಎಸ್‌ಟಿ ಜಾರಿ ಆದಾಗಿನಿಂದ 180 ರಿಂದ 190ರೂ. ಆಗುತ್ತಿದೆ. ಅಂದರೆ ಒಂದು ಲಾರಿಯಲ್ಲಿ ಬೇಳೆ ಸರಬರಾಜು ಆಗಿದ್ದರೆ ಈ ಮುಂಚೆ 18,000 ರೂ.ಸಾಗಾಣಿಕೆ ವೆಚ್ಚವಾಗುತ್ತಿತ್ತು. ಈಗ ಶೇ.5ರಷ್ಟು ಜಿಎಸ್‌ಟಿಯಿಂದ ಒಂದು ಲಾರಿ ಸಾಗಾಣಿಕೆಗೆ 1000ರೂ.ದಿಂದ 1100 ಹೆಚ್ಚಳವಾಗುತ್ತಿದೆ.
ದರ ಕುಸಿತ ಹಾಗೂ ಇಳುವರಿ ಕುಂಠಿತ ನಡುವೆ 2016ರ ಏಪ್ರಿಲ್ 1ರಿಂದ 2017ರ ಮಾರ್ಚ್ 31ರವರೆಗೆ 9.68 ಲಕ್ಷ ಕ್ವಿಂಟಲ್ ತೊಗರಿ ಬೇಳೆ ಕಲಬುರಗಿಯಿಂದ ಸಾಗಾಣಿಕೆಯಾಗಿತ್ತು. ಅದರ ಹಿಂದಿನ ವರ್ಷಗಳಲ್ಲಿ 15ರಿಂದ 20 ಲಕ್ಷ ಕ್ವಿಂಟಲ್ ವರೆಗೂ ಸಾಗಾಣಿಕೆಯಾಗಿರುವ ದಾಖಲೆಯಿದೆ.
ಬ್ರಾÂಂಡೆಡ್ ತೊಗರಿ ಬೇಳೆ ಹಿಂತೆಗೆತ:
ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬೇಳೆ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿದ್ದರಿಂದ ತೆರಿಗೆಯಿಂದ ಪಾರಾಗಲು ವ್ಯಾಪಾರಿಗಳು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿದ್ದಾರೆ. ಕಲಬುರಗಿಯ 250 ದಾಲ್‌ಮಿಲ್‌ಗಳಲ್ಲಿ 6 ವ್ಯಾಪಾರಿಗಳು ಪ್ಯಾಕ್ಡ್ ಹಾಗೂ ನೋಂದಾಯಿತ ತೊಗರಿ ಬ್ರಾÂಂಡೆಡ್ ಹೊಂದಿದ್ದರು. ಈ ಆರು ವ್ಯಾಪಾರಿಗಳು ನೋಂದಣಿ ಸಂಖ್ಯೆಯನ್ನು ವಾಪಸ್ಸು ಪಡೆದಿದ್ದಾರೆ.
ಹೀಗಾಗಿ ಬ್ರಾÂಂಡೆಡ್ ನೋಂದಾಯಿತ ತೊಗರಿ ಮಾರಾಟ ನಿಂತು ಹೋಗಿದೆ. ಶೇ.5ರಷ್ಟು ಜಿಎಸ್‌ಟಿಯಿಂದ ಪಾರಾಗಲು ತಮ್ಮ ನೋಂದಣಿಯನ್ನೇ ವಾಪಸ್ ಪಡೆದಿರುವುದಾಗಿ ವ್ಯಾಪಾರಿ ಚಂದ್ರಶೇಖರ ನಡಾರ್ ತಿಳಿಸಿದ್ದು, ಇವರ ಡೋವೋ ಪ್ಯಾಕ್ಡ್ ನೋಂದಾಯಿತ ತೊಗರಿ ಬೇಳೆ ಮಾರಾಟ ನಿಂತು ಹೋಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
MUST WATCH
ಹೊಸ ಸೇರ್ಪಡೆ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.