![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 24, 2019, 3:04 AM IST
ವಿಧಾನಸಭೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರ ರೋಗ ಯಾರಿಗೂ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶ್ವಾಸ ಮತ ಯಾಚನೆ ಪ್ರಸ್ತಾವದ ಮೇಲೆ ಮಾತನಾಡಿ, ಪಕ್ಷಾಂತರ ರೋಗ ಬೆಳೆಸುವುದು ಯಾರಿಗೂ ಒಳ್ಳೆಯದಲ್ಲ. ಈ ರೋಗ ಬಿಜೆಪಿಗೂ ಕೆಟ್ಟ ಬೆಳವಣಿಗೆ. ಇದನ್ನು ಯಾರೂ ಪ್ರೋತ್ಸಾಹಿಸಬಾರದು ಎಂದು ಹೇಳಿದರು.
ವ್ಯಾಪಾರಗಳಲ್ಲಿ ಎರಡು ವಿಧಗಳಿವೆ. ಹೋಲ್‌ಸೇಲ್ ಮಾರಾಟ ಹಾಗೂ ರಿಟೇಲ್ ಮಾರಾಟ. ರಿಟೇಲ್ ಮಾರಾಟವಾದರೆ ಪರವಾಗಿಲ್ಲ. ಆದರೆ, ಇಲ್ಲಿ ಎಲ್ಲ ಶಾಸಕರೂ ಹೋಲ್‌ಸೇಲ್ ಮಾರಾಟವಾಗಿದ್ದಾರೆ. ಇದು ಬಹಳ ಅಪಾಯಕಾರಿ ಎಂದು ಹೇಳಿದರು. ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು. ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡುವಂತಿಲ್ಲ. ಈ ಬಗ್ಗೆ ಸ್ಪೀಕರ್‌ಗೆ ಮನವರಿಕೆ ಆಗಬೇಕು.
ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್‌ಗೆ ಇದೆ. ಸ್ಪೀಕರ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಶಾಸಕರು ಕೋರ್ಟ್‌ಗೆ ಹೋಗುವ ಹಾಗಿಲ್ಲ. ಅದೇ ಕಾರಣಕ್ಕೆ ನಾನು ಕ್ರಿಯಾಲೋಪ ಎತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಜನತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪಿಗೆ ತಲೆ ಬಾಗಲೇಬೇಕು. ಕಳೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತು. ಬಿಜೆಪಿಯಿಂದ 104, ಕಾಂಗ್ರೆಸ್‌ಗೆ 80, ಜೆಡಿಎಸ್ 38, ಕೆಪಿಜೆಪಿಯಿಂದ ಒಬ್ಬರು, ಒಬ್ಬರು ಪಕ್ಷೇತರ ಶಾಸಕರು ಆಯ್ಕೆಯಾಗಿದ್ದರು.
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಬಿಜೆಪಿಗೆ ಬಹುಮತ ಇರಲಿಲ್ಲ. ಆಗ 110 ಶಾಸಕರನ್ನು ಪಡೆದಿದ್ದರು. ಈ ಬಾರಿ 104 ಶಾಸಕರು ಗೆದ್ದಿದ್ದರು. ಅವರಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಹಾಗಿದ್ದರೂ, ಸರ್ಕಾರ ರಚನೆಗೆ ಮುಂದಾಗಿದ್ದರು. ಒಬ್ಬರೇ ಪಕ್ಷೇತರ ಶಾಸಕ ಇದ್ದರು. ಬಿಜೆಪಿಯವರು ಯಾರನ್ನು ನಂಬಿ ಸರ್ಕಾರ ರಚನೆ ಮಾಡಲು ಹೋಗಿದ್ದರು. ಬಹುಶ: ಶಾಸಕರನ್ನು ಪಕ್ಷಾಂತರ ಮಾಡಿಸುವ ಉದ್ದೇಶ ಹೊಂದಿದ್ದರು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸ್ಪೀಕರ್‌ಗೆ ಹೆಚ್ಚು ಜ್ಞಾಪಕ ಶಕ್ತಿ ಇದೆ. ಜ್ಞಾಪಕ ಶಕ್ತಿ ಜಾಸ್ತಿ ಇದ್ದಿದ್ದಕ್ಕೆ ಅವರ ಕೂದಲು ಉದುರಿದೆ. ಸ್ಪೀಕರ್ ನನಗಿಂತ ಐದು ವರ್ಷ ಮೊದಲು ಸದನಕ್ಕೆ ಬಂದಿದ್ದಾರೆ. ನಾನು ಯಡಿಯೂರಪ್ಪ ಒಂದೇ ಬಾರಿ ಸದನಕ್ಕೆ ಬಂದಿದ್ದೇವೆ.
-ಸಿದ್ದರಾಮಯ್ಯ, ಮಾಜಿ ಸಿಎಂ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಪಡೆದಿರುವ ದೇಶದಲ್ಲಿ ಚುನಾಯಿತ ಸರ್ಕಾರವೊಂದನ್ನು ಕೆಡವಲಾಗಿದೆ. ಇಂದು “ಪ್ರಜಾಪ್ರಭುತ್ವದ ಕರಾಳ ದಿನ’.
-ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮಾಜಿ ಸಿಎಂ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.