ಬಜೆಟ್ ಪುಸ್ತಕ ನೀಡಲು ವಿಳಂಬ: ಆಕ್ಷೇಪ
Team Udayavani, Mar 6, 2020, 3:03 AM IST
ಮುಖ್ಯಮಂತ್ರಿಯವರು ಬಜೆಟ್ ಭಾಷಣ ಪೂರ್ಣಗೊಳಿಸಿದ ನಂತರವೇ ಬಜೆಟ್ ಪುಸ್ತಕ ನೀಡುವುದಾಗಿ ತಿಳಿಸಿದ್ದರಿಂದ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಳೆದ ವರ್ಷವೇ ಈ ಸಂಪ್ರದಾಯ ಆರಂಭಿಸಲಾಗಿತ್ತು ಎಂದು ಸಮಜಾಯಿಷಿ ನೀಡಿದರು. ಆದರೆ, ಪ್ರತಿಪಕ್ಷ ಸದಸ್ಯರು ನಮ್ಮ ಅವಧಿಯಲ್ಲಿ ಈ ರೀತಿ ಮಾಡಿರಲಿಲ್ಲ ಎಂದರು. ಈ ಮಧ್ಯೆ, ಬಜೆಟ್ ಪುಸ್ತಕ ನೀಡದ ಕಾರಣ ಮಾಧ್ಯಮದವರೂ ಪ್ರತಿಭಟಿಸಿ ಗ್ಯಾಲರಿಯಿಂದ ಹೊರ ನಡೆದರು.
ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಯವರಿಗೆ ಮಾಧ್ಯಮದವರು ಹೊರಗೆ ಹೋದರು ಎಂದು ತಿಳಿಸಿದಾಗ ಗರಂ ಆದ ಮುಖ್ಯಮಂತ್ರಿ, ಸ್ಪೀಕರ್ ಅವರತ್ತ ನೋಡಿ ಪುಸ್ತಕ ಕೊಡಿ ಎಂದು ಹೇಳಿದರು. ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಆಗಮಿಸಿ ಅಧಿಕಾರಿಗಳ ಜತೆ ಮಾತನಾಡಿ ಬಜೆಟ್ ಪುಸ್ತಕ ಕೊಡಿಸುವ ವ್ಯವಸ್ಥೆ ಮಾಡಿಸಿದರು. ಸದನದಲ್ಲಿ ಪ್ರತಿಪಕ್ಷ ಸದಸ್ಯರಿಗೂ ಪುಸ್ತಕ ನೀಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.