ನ್ಯಾ| ಕೆಂಪಣ್ಣ ವರದಿಗೆ ಆಗ್ರಹ: ಯು.ಟಿ. ಖಾದರ್
Team Udayavani, Feb 25, 2023, 6:30 AM IST
ಬೆಂಗಳೂರು: ಅರ್ಕಾವತಿ ಬಡಾವಣೆಯ ರಿಡೂ ವಿಚಾರಕ್ಕೆ ಸಂಬಂಧಿಸಿ ನ್ಯಾ| ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸ ಬೇಕೆಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದರು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿ, ಅರ್ಕಾವತಿ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಿಎಂ ಆರೋಪಿಸಿದ್ದಾರೆ. ಸದನದಲ್ಲಿ ವರದಿ ಮಂಡಿಸದೆ ವಿಷಯ ಪ್ರಸ್ತಾಪಿಸಿ ಸದನದ ನಿಯಮಾವಳಿಗಳಿಗೆ ಅಪಚಾರ ಎಸಗಿದ್ದಾರೆ ಎಂದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ವರದಿಯನ್ನು ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆದು ಮಂಡಿಸಬೇಕಾಗುತ್ತದೆ ಎಂದರು. ಅದಕ್ಕೆ ಸ್ಪೀಕರ್, ನಾನು ನಿನ್ನೆ ವರದಿ ಮಂಡಿಸಲು ಸೂಚಿಸಿದ್ದೇನೆ ಎಂದರು. ಆದರೆ ಆ ಬಗ್ಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಒಂದೇ ಪ್ರಶ್ನೆಗೆ ಸೀಮಿತ
ಅಧಿವೇಶನದ ಕೊನೆಯ ದಿನ ಪ್ರಶ್ನೋತ್ತರ ಕಲಾಪ ಐದೇ ನಿಮಿಷಗಳಲ್ಲಿ ಮುಗಿದು ಒಂದೇ ಪ್ರಶ್ನೆಗೆ ಸೀಮಿತವಾಯಿತು. ಪ್ರಶ್ನೆ ಕೇಳಿದ ಸದಸ್ಯರ ಗೈರು ಹಾಜರಿಯಿಂದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಹೆಸರು ಪ್ರಸ್ತಾವಿಸಿ ಇಲ್ಲ ಎಂದು ಸ್ಪೀಕರ್ ಹೇಳಿದರು. ಪ್ರಶ್ನೆ ಕೇಳಿದ್ದ 15 ಸದಸ್ಯರು ಸದನಕ್ಕೆ ಹಾಜರಾಗಿರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.