ಮಳೆಯ ಆರ್ಭಟ: ಡೆಂಗ್ಯೂ, ಚಿಕೂನ್‌ಗುನ್ಯಾ ದುಪ್ಪಟ್ಟು!
ರಾಜ್ಯಾದ್ಯಂತ 18 ದಿನದಲ್ಲಿ ಎರಡರಷ್ಟು ಪ್ರಕರಣ ಹೆಚ್ಚಳ
Team Udayavani, Jul 20, 2022, 6:35 AM IST
ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿರುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಕಳೆದ 18 ದಿನದಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣದಲ್ಲಿ ಎರಡರಷ್ಟು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಕಳೆದ 18ದಿನದಲ್ಲಿ 1,660 ಡೆಂಗ್ಯೂ ಹಾಗೂ 407 ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದೆ. 2022ರ ಏಪ್ರಿಲ್1ರಿಂದ ಜು.19ರ ವರೆಗೆ ಒಟ್ಟು ರಾಜ್ಯದ 30 ಜಿಲ್ಲೆಯಲ್ಲಿ 2,799 ಹಾಗೂ ಬಿಬಿಎಂಪಿಯಲ್ಲಿ 585 ಸೇರಿ 3,384 ಡೆಂಗ್ಯೂ ಪ್ರಕರಣ ಹಾಗೂ 775 ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದೆ. ಆ ಮೂಲಕ ಕಳೆದ ನಾಲ್ಕು ತಿಂಗಳಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣ ಸಂಖ್ಯೆ ಮೂರುಪಟ್ಟು ಏರಿಕೆಯಾಗಿರುವುದು ಆರೋಗ್ಯ ಇಲಾಖೆ ಅಂಕಿ- ಅಂಶ ದೃಢಪಡಿಸಿದೆ.
ಉಡುಪಿ 356, ಮೈಸೂರು 349, ದಕ್ಷಿಣ ಕನ್ನಡ 176, ದಾವಣಗೆರೆ 163, ಶಿವಮೊಗ್ಗ 158 ಡೆಂ à ಪ್ರಕರಣಗಳು ಪತ್ತೆಯಾಗಿದೆ. ವಿಜಯಪುರ 136, ಕೋಲಾರ 100, ಹಾಸನ 53 ಚಿಕೂನ್‌ಗುನ್ಯಾ ಪ್ರಕರಣದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ವರದಿಯಾಗಿದೆ.
ಎಲ್ಲಾ ಖಾಸಗಿ ಆರೋಗ್ಯ ಸಂಸ್ಥೆಗಳೂ ಸಹ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಪ್ರಕರಣಗಳ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಿಸಿದೆ. ಈಡೀಸ್ ಲಾರ್ವಾ ಸಮೀಕ್ಷೆ ನಡೆಸಿದ್ದು, ಲಾರ್ವಾ ತಾಣಗಳನ್ನು ನಾಶಪಡಿಸಲಾಗಿದೆ. ಈ ಚಟುವಟಿಕೆ ನಿರಂತರಗೊಳಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಡೆಂಗ್ಯೂ ಲಕ್ಷಣ
-ಇದ್ದಕ್ಕಿದ್ದಂತೆ ತೀವ್ರ ಜ್ವರ
-ವಿಪರೀತ ತಲೆನೋವು
-ಮೈ-ಕೈ ನೋವು
-ಕೀಲುಗಳಲ್ಲಿ ವಿಪರೀತ ನೋವು
– ವಾಕರಿಕೆ, ವಾಂತಿ
-ಆಂತರಿಕ ರಕ್ತಸ್ರಾವ
-ಒಸಡುಗಳಲ್ಲಿ ರಕ್ತಸ್ರಾವ.
ಚಿಕೂನ್‌ಗುನ್ಯಾದ ಲಕ್ಷಣ
-ತೀವ್ರ ಜ್ವರ
-ದೇಹದಲ್ಲಿ ಅತಿಯಾದ ನೋವು
-ಗಂಟುಗಳಲ್ಲಿ ನೋವು
– ದೇಹದ ಹಲವಾರು ಭಾಗಗಳಲ್ಲಿ ದದ್ದುಗಳು
-ಪಾದ ಹಾಗೂ ಕೈಗಳಲ್ಲಿ ಊತ
– ಕಣ್ಣುಗಳು ಕೆಂಪಾಗಬಹುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.