Department of Education: ಶಾಲಾ ಕಾರ್ಯಗಳು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ

Team Udayavani, Oct 14, 2023, 10:36 AM IST

TDY-4

ಬೆಂಗಳೂರು: ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಆಶಯದಡಿ ಶಿಕ್ಷಣ ಇಲಾಖೆಯ ಹಲವು ಸೇವೆ ಮತ್ತು ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಎಲ್ಲವೂ ನಿಗದಿಯಂತೆ ನಡೆದರೆ ಶಿಕ್ಷಕರ ಹಾಜರಾತಿ, ಅತಿಥಿ ಶಿಕ್ಷಕರ ನೇಮಕ, ಮಧ್ಯಾಹ್ನದ ಬಿಸಿಯೂಟ ನೌಕರರ ನೇಮಕ,      ಶಿಕ್ಷಕರ ವೇತನ,   ಸಮವಸ್ತ್ರ ವಿತರಣೆ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಮುಂತಾದ  ಹಲವು ಕಾರ್ಯಕ್ರಮಗಳು ಗ್ರಾಮ ಪಂಚಾಯತ್‌ ಮೂಲಕ ಅನುಷ್ಠಾನಗೊಳ್ಳಲಿವೆ.

ಸಂವಿಧಾನದ 73ನೇ ತಿದ್ದುಪಡಿ ಅನ್ವಯ ಜಾರಿಗೆ ಬಂದ ಕರ್ನಾಟಕ ಪಂಚಾಯತ್‌ರಾಜ್‌ ಕಾಯ್ದೆ- 1993ರ 30ನೇ ವರ್ಷಾಚರಣೆ ಅಂಗವಾಗಿ ವಿಕೇಂದ್ರೀ ಕರಣ ವ್ಯವಸ್ಥೆಯನ್ನು ಬಲಪಡಿಸಲು ಗ್ರಾಪಂಗಳಿಗೆ ಹಂಚಿಕೆಯಾಗಿರುವ ಕಾರ್ಯಗಳನ್ನು ಗ್ರಾಪಂ ವ್ಯಾಪ್ತಿಗೆ ವರ್ಗಾಯಿಸಿ ಆ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗುವುದು ಎಂದು ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿತ್ತು.

ಅದರಂತೆ ಈಗ ಶಿಕ್ಷಣ ಇಲಾಖೆ ಪ್ರಸ್ತುತ ನಿರ್ವಹಿಸು ತ್ತಿರುವ ಸುಮಾರು 26 ವಿವಿಧ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವರ್ಗಾವಣೆಗೊಂಡು ಪಂಚಾಯತ್‌ಗಳ ವ್ಯಾಪ್ತಿಗೆ ಬರಲಿವೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವೆಲ್ಲ ಕಾರ್ಯಕ್ರಮಗಳು ಪಂಚಾಯತ್‌ಗಳ ವ್ಯಾಪ್ತಿಗೆ ಬರಲಿವೆ ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪಟ್ಟಿ ಸಿದ್ಧಪಡಿಸಿದ್ದು, ಶಿಕ್ಷಣ ಇಲಾಖೆ ಮಟ್ಟದಲ್ಲಿ ಈ ಬಗ್ಗೆ ಸಮಾಲೋಚನೆ ನಡೆದಿದೆ.

ಪಂಚಾಯತ್‌ಗಳ ಜವಾಬ್ದಾರಿಗಳು :

ಶಾಲಾ ಪೂರ್ವ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಕರ ಹಾಗೂ ಸಿಬಂದಿ ಹಾಜರಾತಿಯನ್ನು ಗ್ರಾ.ಪಂ.ನ ಸಾಮಾನ್ಯ ಸ್ಥಾಯೀ ಸಮಿತಿ ಪರಿಶೀಲಿಸಲಿದೆ. ಪ್ರಾಥ ಮಿಕ ಶಿಕ್ಷಕರ-ಸಿಬಂದಿ ಹಾಜರಾತಿ ತಾಪಂ ಹಾಗೂ ಪ್ರೌಢ ಶಾಲಾ ಶಿಕ್ಷಕರ ಹಾಜರಾತಿಯನ್ನು ಜಿ.ಪಂ. ಪರಿಶೀಲಿಸಲಿದೆ. ಅನಧಿಕೃತ ಗೈರು ಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಪಂಚಾಯತ್‌ಗಳು ನಿರ್ದೇಶಿಸಬೇಕು. ಡಿಡಿಪಿಐ ಅನುಮೋದಿಸಿದ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮುಖ್ಯ ಶಿಕ್ಷಕರೊಂದಿಗೆ ಚರ್ಚಿಸಿ ಗ್ರಾಪಂ ನೇಮಕ ಮಾಡಬೇಕು. ಬಿಸಿಯೂಟ ನೌಕರರ ನೇಮಕಕ್ಕೆ  ಅರ್ಜಿ ಆಹ್ವಾನಿಸಿ ಗ್ರಾಮ ಸಭಾದ ನಿಯಮ ಗಳಂತೆ ನೇಮಕ ಮಾಡಿಕೊಳ್ಳಬೇಕು. ಪ್ರಾಥ ಮಿಕ ಶಾಲಾ ಶಿಕ್ಷಕರ ವೇತನವನ್ನು ತಾ.ಪಂ.ಗಳು ಬಿಇಒಗಳಿಗೆ ಬಿಡು ಗಡೆ ಮಾಡಬೇಕು.  ಪ್ರೌಢ ಶಿಕ್ಷಣ ಶಿಕ್ಷಕರ ವೇತನವನ್ನು ಜಿ.ಪಂ.ಗಳು ಬಿಇಒಗಳಿಗೆ ಬಿಡುಗಡೆ ಮಾಡಬೇಕು.

 ಈ  ಹೊಣೆಯೂ ಗ್ರಾ.ಪಂ.ಗೆ:

ಎಸ್‌ಡಿಎಂಸಿಗಳ ಬಲವರ್ಧನೆ, ಮೇಲ್ವಿಚಾರಣೆ, ಶಾಲೆಯಿಂದ ಹೊರಗು ಳಿದ ಮಕ್ಕಳನ್ನು ಗುರುತಿಸುವುದರ ಜತೆಗೆ ಮಕ್ಕಳು ಪ್ರೋತ್ಸಾಹ ನೀಡುವುದು ಪೂರಕ ಪೌಷ್ಟಿಕಾಂಶಗಳನ್ನು ಒದಗಿಸುವುದು ಕೂಡ ಪಂಚಾಯತ್‌ಜವಾಬ್ದಾರಿಯಾಗಿದೆ.

ಮೂಲಸೌಕರ್ಯ ಒದಗಿಸುವುದು:

ಶಾಲೆಗಳ ನಿವೇಶನ ಮತ್ತು ಆಸ್ತಿಗಳ ಒತ್ತುವರಿ ತಡೆಯುವುದು ಗ್ರಾಪಂ ಜವಾಬ್ದಾರಿ. ಶಾಲಾ ಕೊಠಡಿಗಳ ದುರಸ್ತಿ, ಹೊಸ ಶಾಲಾ ಕೊಠಡಿ ನಿರ್ಮಾಣ, ಕುಡಿಯುವ ನೀರು, ಶೌಚಾಲಯ ನಿರ್ಮಾಣ, ಅಡುಗೆ ಮನೆ, ವಿದ್ಯುದೀಕರಣ, ಆಟದ ಮೈದಾನ, ಶಾಲಾ ಉದ್ಯಾನ, ಗ್ರಂಥಾಲಯ, ಪೀಠೊಪಕರಣ, ಆಟೋಪಕರಣ, ಪ್ರಯೋಗಾಲಯ, ಸ್ಮಾರ್ಟ್‌ ಕ್ಲಾಸ್‌ ಕಿಟ್‌ ಇತ್ಯಾದಿಗಳನ್ನು ಗುರುತಿಸಿ ಕ್ರಿಯಾ ಯೋಜನೆ (ಮಕ್ಕಳ ಬಜೆಟ್‌) ಸಿದ್ಧಪಡಿಸಬೇಕು. ಅದನ್ನು ತಾ.ಪಂ.-ಜಿ.ಪಂ. ಸ್ವಂತ ಆದಾಯದಡಿ ಸಂಯೋಜಿಸಬೇಕು.

ಪಂಚಾಯತ್‌ರಾಜ್‌ ಕಾಯ್ದೆಯ 73ನೇ ತಿದ್ದುಪಡಿಯ ಆಶಯಗಳು ಈಡೇರಬೇಕಾದರೆ ಹೊಣೆಗಾರಿಕೆ ನಿಗದಿ ಯಾಗಬೇಕು. ಪಂಚಾಯತ್‌ಗಳಿಗೆ ವರ್ಗಾವಣೆಗೊಳ್ಳಬೇಕಾದ ಕಾರ್ಯ ಗಳ ಬಗ್ಗೆ ಎಲ್ಲ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಲಾಗುತ್ತಿದೆ. ಅದರಂತೆ, ಶಿಕ್ಷಣ ಇಲಾಖೆ ಕೆಲವು ಕಾರ್ಯ ಗಳನ್ನು ಪಂಚಾಯತ್‌ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಸಮಾಲೋಚನೆ ಹಂತದಲ್ಲಿದೆ.– ಪ್ರಿಯಾಂಕ್‌ ಖರ್ಗೆ,  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ

ಗ್ರಾಪಂಗಳಿಗೆ ಜವಾಬ್ದಾರಿ ಹಂಚಿಕೆ ಆಗಿರುವುದು ಪಂಚಾಯತ್‌ಗಳ ಬಲವರ್ಧನೆ ಮತ್ತು ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ಒಳ್ಳೆಯದು. ಇದರಿಂದ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರಕಾರವಾಗಿ ಕಾರ್ಯನಿರ್ವಹಿಸಲು ಸಹಾಯ ಆಗಲಿದೆ.– ಕಾಡಹಳ್ಳಿ ಸತೀಶ್‌,  ಅಧ್ಯಕ್ಷರು, ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ 

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.