ಹಳಿ ತಪ್ಪಿದ ಪ್ಯಾಸೆಂಜರ್ ರೈಲು ಪ್ರಯಾಣಿಕರು ಪಾರು
Team Udayavani, May 18, 2017, 9:55 AM IST
ಚಿತ್ರದುರ್ಗ: ಬೆಂಗಳೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಹೊಸಪೇಟೆಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಬುಧವಾರ ಬೆಳಗ್ಗೆ ಹಳಿ ತಪ್ಪಿದ್ದು, ರೈಲು ಚಾಲಕ ಸಮಯಪ್ರಜ್ಞೆ ತೋರಿದ್ದರಿಂದ ಪ್ರಯಾಣಿಕರು ಪಾರಾಗಿದ್ದು ಭಾರೀ ಅವಘಡವೊಂದು ತಪ್ಪಿದೆ. ರೈಲು ಚಿತ್ರದುರ್ಗ ನಿಲ್ದಾಣದಿಂದ ಒಂದೂವರೆ ಕಿಮೀ ದೂರ ಸಾಗುವಷ್ಟರಲ್ಲಿ ಈ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 13ರ ಬಳಿ ಪಿಳ್ಳೆಕೆರೆನಹಳ್ಳಿಯ ರೈಲ್ವೆ ಮೇಲ್ಸೇತುವೆಯ ಹಳಿ ತುಂಡಾಗಿದ್ದು
ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಇಂಜಿನ್ ಹಿಂಭಾಗದ ಒಂದು ಬೋಗಿಯ ಎರಡು ಚಕ್ರಗಳು ಹಳಿ ತಪ್ಪಿ ಹಳಿ ಮಧ್ಯದಲ್ಲಿದ್ದ ಕಲ್ಲು, ಸಿಮೆಂಟ್ ಹಲಗೆಗಳ ಮೇಲೆ ಸಾಗಿದವು.
ಇದರಿಂದ ದೊಡ್ಡದಾಗಿ “ಗಡ ಗಡ’ ಶಬ್ದ ಬಂದು ರೈಲು ಅಲುಗಾಡಿದ್ದು ಚಾಲಕನ ಗಮನಕ್ಕೆ ಬಂತು. ತಕ್ಷಣ ಬ್ರೇಕ್ ಹಾಕಿ
ರೈಲು ನಿಲ್ಲಿಸಿದ್ದಾನೆ. ಅಲ್ಲದೆ ನಿಲ್ದಾಣದಿಂದ ಅನತಿ ದೂರದಲ್ಲೇ ಹಳಿ ತಪ್ಪಿದ್ದರಿಂದ ರೈಲು ನಿಧಾನವಾಗಿ ಸಾಗುತ್ತಿದ್ದು ನಿಯಂತ್ರಣಕ್ಕೆ ಬಂದಿದೆ. ಸುದೈವವಶಾತ್ ದೊಡ್ಡ ದುರಂತವೊಂದು ತಪ್ಪಿದೆ. ಮೈಸೂರು, ಹರಿಹರ ಮತ್ತು ಅರಸೀಕೆರೆ ಯಿಂದ ತಜ್ಞ ದುರಸ್ತಿಗಾರರು ಆಗಮಿಸಿದ್ದು, ದುರಸ್ತಿ ಕಾರ್ಯ ಭರದಿಂದಸಾಗಿದೆ. ರೈಲ್ವೆ ಇಲಾಖೆ ಅಧಿಧಿಕಾರಿಗಳು
ರೈಲಿನಲ್ಲಿದ್ದ ಪ್ರಯಾಣಿಕರನ್ನು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬಳ್ಳಾರಿಗೆ ಕಳುಹಿಸಿಕೊಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.