ಶೆಟ್ಟರ್ ಹೇಳಿಕೆಗೆ ದೇಶಪಾಂಡೆ ಆಕ್ಷೇಪ
Team Udayavani, Feb 7, 2018, 6:45 AM IST
ವಿಧಾನಸಭೆ: ಬೆಂಗಳೂರು ಕ್ರೈಮ್ ಸಿಟಿ, ಮರ್ಡರ್ ಸಿಟಿ, ರೇಪ್ ಸಿಟಿ ಎಂಬ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಕ್ಕೆ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹತ್ಯೆ ಪ್ರಕರಣಗಳ ಬಗ್ಗೆ ಪ್ರಸ್ತಾಪಿಸಿದ ಜಗದೀಶ ಶೆಟ್ಟರ್, ಮೊದಲ ಬೆಂಗಳೂರಿಗೆ ಗಾರ್ಡನ್ ಸಿಟಿ ಎಂಬ ಹೆಸರಿತ್ತು. ಆದರೆ ಇದೀಗ ಕ್ರೈಮ್ ಸಿಟಿ, ಮರ್ಡರ್ ಸಿಟಿ ಆಗಿದೆ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ದೇಶಪಾಂಡೆ, ಆ ರೀತಿ ಹೇಳಬೇಡಿ. ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಂಕಿ-ಅಂಶ ಇದ್ದರೆ ಹೇಳಿ. ಹೂಡಿಕೆಯಲ್ಲಿ ದೇಶದಲ್ಲೇ ನಾವು ಮೊದಲಿದ್ದೇವೆ, ರಾಜ್ಯದ ಹಿತದೃಷ್ಟಿಯಿಂದ ತಪ್ಪು
ಮಾಹಿತಿ ಕೊಡಬೇಡಿ ಎಂದರು. ಮಾತು ಮುಂದುವರಿಸಿದ ಜಗದೀಶ ಶೆಟ್ಟರ್, ಆಯ್ತು ಕೈಗಾರಿಕೆ ಹೂಡಿಕೆ ಯಲ್ಲಿ ನಂಬರ್ ಒನ್ ಅಂತೀರಿ, ನೀವು 3.35 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಗುರಿ ಹೊಂದಿ ದ್ದೀರಿ, ಇದುವರೆಗೂ ಬಂದಿದ್ದು 50,324 ಕೋಟಿ ರೂ. ಮಾತ್ರ. ಇದಕ್ಕೆ ನಂಬರ್ ಓನ್ ಎಂದು ದೊಡ್ಡ ದೊಡ್ಡ ಜಾಹೀರಾತು ಹಾಕಿಕೊಂಡಿದ್ದೀರಿ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ದೇಶಪಾಂಡೆ ಸದನದಲ್ಲಿರಲಿಲ್ಲ. ಸಚಿವರು ಇಲ್ಲದ ಸಮಯದಲ್ಲಿ ಏನೇನೋ ಹೇಳಬೇಡಿ, ಅವರು ಬಂದ ಮೇಲೆ ಹೇಳಿ ಅಂಕಿ-ಅಂಶ ಸಮೇತ ಉತ್ತರ ನೀಡುತ್ತಾರೆ ಎಂದು ಜಾರ್ಜ್, ಎಂ.ಬಿ.ಪಾಟೀಲ್ ಹೇಳಿದರು. ಆಗ ಜಗದೀಶ ಶೆಟ್ಟರ್, ನಾನು ರಾಜ್ಯಪಾಲರ ಭಾಷಣದ
ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡೋಣ ಎಂದಿದ್ದೆ. ಆದರೆ, ದೇಶಪಾಂಡೆ ಅವರು ಹೂಡಿಕೆಯಲ್ಲಿ ನಂಬರ್ ಒನ್ ಎಂದು ಹೇಳಿದ್ದಕ್ಕೆ ಹೇಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್ಕೌಂಟರ್ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.