ಹಳ್ಳಿ ಜನರಿಂದ ಡಿಜಿಟಲ್ ಪಾವತಿ ಕ್ರಾಂತಿ
ಗ್ರಾಪಂಗಳಲ್ಲಿ ಪಿಒಎಸ್ ಮೂಲಕ ತೆರಿಗೆ ಸಂಗ್ರಹ n 4 ತಿಂಗಳಲ್ಲಿ 46.46 ಕೋ.ರೂ. ಡಿಜಿಟಲ್ ಪಾವತಿ
Team Udayavani, Aug 3, 2023, 12:13 AM IST
ದಾವಣಗೆರೆ: ರಾಜ್ಯದ ಗ್ರಾಪಂಗಳಲ್ಲಿ ತೆರಿಗೆ ಹಾಗೂ ಸೇವಾ ಶುಲ್ಕ ಸಂಗ್ರಹ ಡಿಜಿಟಲೀಕರಣ ಆಗಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 4 ತಿಂಗಳಲ್ಲಿ ಡಿಜಿಟಲ್ ರೂಪದಲ್ಲಿ 46.46 ಕೋಟಿ ರೂ. ಪಾವತಿಯಾಗಿದೆ.
ಗ್ರಾ.ಪಂ.ಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾ.ಪಂ.ಗಳಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸಲು ತೆರಿಗೆ, ದರ ಮತ್ತು ಇತರ ಶುಲ್ಕಗಳನ್ನು ವಸೂಲಾತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ರಾಜ್ಯದ ಆಯ್ದ 5,016 ಗ್ರಾಪಂಗಳಿಗೆ ಆ್ಯಕ್ಸಿಸ್ ಬ್ಯಾಂಕ್‌ನಿಂದ ಒಂದೊಂದು ಆ್ಯಂಡ್ರಾಯ್ಡ ಪಿಒಎಸ್ ಯಂತ್ರಗಳನ್ನು ಒದಗಿಸಿದೆ.
ಬಿಲ್ ಕಲೆಕ್ಟರ್‌ಗಳು ಮನೆ ಮನೆಗೆ ಭೇಟಿ ನೀಡಿ ತೆರಿಗೆ ವಸೂಲು ಮಾಡುತ್ತಿದ್ದಾರೆ. ಗ್ರಾ.ಪಂ. ಕಚೇರಿಗಳಲ್ಲಿಯೂ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಡೆಯಲು ಆ್ಯಂಡ್ರಾಯ್ಡ ಪಿಒಎಸ್ ಯಂತ್ರಗಳನ್ನು ಬಳಸಲಾಗುತ್ತಿದೆ.
ಜಿಲ್ಲೆಯಲ್ಲಿ ಮೊದಲು ದಾವಣಗೆರೆ, ಹರಿಹರ ತಾಲೂಕುಗಳ ಎಲ್ಲ ಗ್ರಾಪಂಗಳಿಗೆ ಪಿಒಎಸ್ ಯಂತ್ರ ನೀಡಲಾಗಿತ್ತು. ಕಳೆದೆರಡು ತಿಂಗಳುಗಳಿಂದ ಜಿಲ್ಲೆಯ ಎಲ್ಲ ಗ್ರಾಪಂಗಳಿಗೆ ಪಿಒಎಸ್ ಯಂತ್ರ ಒದಗಿಸ ಲಾಗಿದೆ. ಡಿಜಿಟಲ್ ಪಾವತಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಪ್ರೇರಣೆ ನೀಡುವ ಕಾರ್ಯ ನಡೆದಿದ್ದು ಡಿಜಿಟಲ್ ಪಾವತಿ ಕ್ರಮೇಣ ಇನ್ನೂ ಹೆಚ್ಚಾಗಲಿದೆ.
– ಸುರೇಶ್ ಇಟ್ನಾಳ್, ದಾವಣಗೆರೆ ಜಿಪಂ ಸಿಇಒ
46.46 ಕೋಟಿ ರೂ. ಡಿಜಿಟಲ್ ಪಾವತಿ
ಗ್ರಾ.ಪಂ.ಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ಒಟ್ಟು 17,479 ವ್ಯವಹಾರಗಳು ನಡೆದಿದ್ದು, 6,38,47,481 ರೂ. ಪಾವತಿಯಾಗಿದೆ. ಅದೇ ರೀತಿ ಯುಪಿಐ ಮೂಲಕ ಒಟ್ಟು 36,389 ವ್ಯವಹಾರಗಳು ನಡೆದಿದ್ದು, 2,91,682 ರೂ. ಪಾವತಿಯಾಗಿದೆ. ಪಿಒಎಸ್ ಯಂತ್ರದ ಮೂಲಕ 2,37,794 ವ್ಯವಹಾರಗಳು ನಡೆದಿದ್ದು, 32,60,98,211 ರೂ. ಪಾವತಿಯಾಗಿದೆ. ಒಟ್ಟಾರೆ ರಾಜ್ಯದಲ್ಲಿ 46.46 ಕೋಟಿ ರೂ. ಮೊತ್ತ ಡಿಜಿಟಲ್ ರೂಪದಲ್ಲಿ ಪಾವತಿ ಯಾಗುವ ಮೂಲಕ ಡಿಜಿಟಲ್ ವ್ಯವ ಹಾರಕ್ಕೆ ಗ್ರಾಮೀಣ ಜನರು ಜೈ ಎಂದಿದ್ದಾರೆ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.