ಸಿ.ಟಿ.ರವಿಯದ್ದು ಅರೆಹುಚ್ಚನ ವರ್ತನೆ: ಗುಂಡೂರಾವ್
Team Udayavani, Sep 15, 2021, 10:30 PM IST
ಬೆಂಗಳೂರು: ಕಾಂಗ್ರೆಸ್ ಮಾಡಿದ ಸಾಲವನ್ನು ತೀರಿಸುತ್ತಿರುವ ಕಾರಣ ಅಗತ್ಯ ವಸ್ತುಗಳ ಬೆಲೆ ಜಾಸ್ತಿಯಾಗಿದೆ ಎಂದಿರುವ ಸಿ.ಟಿ.ರವಿ ಅವರು ಅರೆಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪೊಳ್ಳು ಮಾತುಗಳಿಂದಲೇ ಕುಖ್ಯಾತರಾಗಿರುವ ಸಿ.ಟಿ.ರವಿ, 2014ರ ವರೆಗೆ ಅಧಿಕಾರ ನಡೆಸಿದ್ದ ಸರಕಾರಗಳು ಮಾಡಿದ್ದ ಸಾಲ 54 ಲಕ್ಷ ಕೋಟಿ ರೂ. ಆದರೆ, ಮೋದಿಯವರು 7 ವರ್ಷಗಳಲ್ಲಿ ಮಾಡಿರುವ ಸಾಲ 35 ಲಕ್ಷ ಕೋಟಿ ರೂ. ಆಗಿದೆ ಎಂದರು.
ಇದನ್ನೂ ಓದಿ:2 ವರ್ಷ ಹಿಂದೆಯೇ 242 ಧಾರ್ಮಿಕ ಕೇಂದ್ರಗಳ ತೆರವು
ಯುಪಿಎ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120 ಡಾಲರ್ ತಲುಪಿದಾಗ, ಜನರ ಮೇಲೆ ಹೊರೆ ತಪ್ಪಿಸಲು 1 ಲಕ್ಷದ 34 ಸಾವಿರ ಕೋಟಿ ರೂ.ಯ ತೈಲ ಬಾಂಡ್ ಖರೀದಿಸಲಾಗಿತ್ತು. ಏಳು ವರ್ಷಗಳಲ್ಲಿ ತೈಲದ ಮೇಲಿನ ತೆರಿಗೆಯಿಂದಲೇ ಕೇಂದ್ರ ಸರಕಾರ, 23 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದೆ. ಇದರಲ್ಲಿ ತೈಲ ಬಾಂಡ್‌ಗೆ ಪಾವತಿಸಿರುವುದು 9 ಕೋಟಿ ಮಾತ್ರ. ಉಳಿದ ಹಣ ಯಾರ ಖಜಾನೆ ಸೇರಿದೆ ಸಿ.ಟಿ.ರವಿಯವರೇ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.