Politics: ಕೇಂದ್ರ ಸಚಿವ ಜೋಶಿ ಎಲ್ಲ ನಾಯಕರನ್ನು ತುಳಿದಿದ್ದಾರೆ; ದಿಂಗಾಲೇಶ್ವರ ಶ್ರೀ ಆರೋಪ
Team Udayavani, Apr 2, 2024, 1:49 PM IST
ಧಾರವಾಡ : ಅಹಂಕಾರದಿಂದ ಮೆರೆಯುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ಷೇತ್ರದಲ್ಲಿ ಲಿಂಗಾಯತರು ಮಾತ್ರವಲ್ಲ ಬೇರೆ ಜನಾಂಗದ ನಾಯಕರನ್ನು ತುಳಿದಿದ್ದಾರೆ ಎಂದು ಶಿರಹಟ್ಟಿ ಮಠದ ಫಕ್ಕಿರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ಹೊರ ಹಾಕಿದರು.
ಧಾರವಾಡದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಗೆ ಈ ಚುನಾವಣೆಯಲ್ಲಿ ಭಕ್ತರು ತಕ್ಕ ಪಾಠ ಕಲಿಸಲಿದ್ದಾರೆ. ಸದಾ ಮೋದಿ ಬಳಿ ಇರುವವರು ಜೋಶಿ ನಮ್ಮ ನಾಡಿಗೆ ಏನು ಕೆಲಸ ಮಾಡಲಿಲ್ಲ ಎಂದರು.
ಬಡ ಮಕ್ಕಳಿಗೆ ಹಾಸ್ಟೆಲ್ ಕೊಟ್ಟಿಲ್ಲ. ಕೆಲಸ ಮಾಡಲು ನಾಯಕರಾಗಿಲ್ಲ ಬಡವರನ್ನು ತುಳಿಯಲು ಆಗಿದ್ದಾರೆ. ಜೋಶಿ ತಂದು ಹಾಕಲಿಲ್ಲ ತಿಂದು ಹಾಕಿದ್ದಾರೆ. ಜೋಶಿ ಹಿತಕ್ಕೆ ಹಿಂಬಾಲಕರು ಇದ್ದಾರೆ ಎಂದು ಆಪಾದಿಸಿದರು.
15 ವರ್ಷಗಳ ಹಿಂದೆ ಕೇಂದ್ರ ಈಗ ಶಾಸಕರಾದವರು ಪಕ್ಷದ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಕಾವಿ ಧಾರಿಗಳಿಗೆ ರಾಜಕೀಯ ಯಾಕೆ ಬೇಕು ? ಎಂದು ಕೇಳುವವರು ಚುನಾವಣೆ ಪಕ್ಷದ ಕಾರ್ಯಾಲಯ ಉದ್ಘಾಟನೆ ಗೆ ಯಾಕೆ 124 ಸ್ವಾಮೀಜಿಗಳನ್ನು ಕರೆಸಿದರು ಎಂದು ಸ್ವಾಮೀಜಿ ಪ್ರಶ್ನಿಸಿದರು.
ಮಠಾಧಿಪತಿಗಳು ಸ್ವಾಭಿಮಾನ ಕಳೆದುಕೊಳ್ಳಬಾರದು. ಒತ್ತಡಕ್ಕೆ ಒಳಗಾಗಬೇಡಿ ಎಂದು ಕಿವಿ ಮಾತು ಹೇಳಿದ ದಿಂಗಾಲೇಶ್ವರ ಸ್ವಾಮೀಜಿ,ದಲಿತ ಶಾಸಕರನ್ನು ಮನೆಗೆ ಸೇರಿಸಿಕೊಳ್ಳಲು ಬಿಟ್ಟಿಲ್ಲ. ಚುನಾವಣೆ ಮುಗಿದ ಮೇಲೆ ನನ್ನ ನೋಡಿಕೊಳ್ಳುವ ಹೆದರಿಕೆ ಹಾಕಿದರೂ ನಾನು ಅಂಜಲ್ಲ ಎಂದರು.
ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಹೇಳುವ ಅಹಂಕಾರ ಒಳ್ಳೆಯದಲ್ಲ ಜೋಶಿ ಅವರಿಗೆ ಒಳ್ಳೆಯದಲ್ಲ.ದೇಶದ ಪ್ರಧಾನಿ ಹೆಸರು ಹೇಳಿ ಗೂಂಡಾಗಿರಿ ಮಾಡುತ್ತಿದ್ದಾರೆ. ಅವರ ಹೆಸರು ಹೇಳುವ ಇಂತಹ ನಾಯಕರನ್ನು ಮೋದಿ ಹತ್ತಿಕ್ಕಬೇಕು ಎಂದು ಮನವಿ ಮಾಡಿದರು. ಸಮಾಜದ ಗಣ್ಯರು ಮಠದ ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.