ಹುಬ್ಬಳ್ಳಿ-ಬೆಂಗಳೂರು ನಡುವೆ ನೇರ ವಿಮಾನ ಸೇವೆ
Team Udayavani, May 15, 2018, 12:21 PM IST
ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಉಡಾನ್ (ಉಡೇ ದೇಶ ಕಾ ಆಮ್ ನಾಗರಿಕ್) 2ನೇ ಹಂತದ ಅಡಿ ಸ್ಪೈಸ್ ಜೆಟ್ ಕಂಪನಿ ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬಯಿ, ಚೆನ್ನೈ, ಹೈದರಾಬಾದ್‌ಗೆ ವಿಮಾನಯಾನ ಸೇವೆ ಆರಂಭಿಸಿತು.
ಉಡಾನ್ ಯೋಜನೆಯಡಿ ಬೆಳಗ್ಗೆ 9:05 ಗಂಟೆಗೆ ಚೆನ್ನೈನಿಂದ ಹುಬ್ಬಳ್ಳಿಗೆ ಆಗಮಿಸಿದ ವಿಮಾನ, 9:25ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿತು. ಚೆನ್ನೈನಿಂದ ಹುಬ್ಬಳ್ಳಿಗೆ ಬಂದ ಮೊದಲ ವಿಮಾನದ ಪ್ರಯಾಣಿಕರನ್ನು ಸಂಸದ ಪ್ರಹ್ಲಾದ ಜೋಶಿ ಅವರು ಸಾಂಕೇತಿಕವಾಗಿ ಬರಮಾಡಿಕೊಂಡರು. ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಶುಭ ಕೋರಿದರು.
15 ವಿಮಾನಗಳ ಹಾರಾಟ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಮುಂಬರುವ ದಿನಗಳಲ್ಲಿ ಉಡಾನ್ ಯೋಜನೆಯಡಿ ಹುಬ್ಬಳ್ಳಿಯಿಂದ ವಿವಿಧ ನಗರಗಳ ನಡುವೆ ಒಟ್ಟು 15 ಹೊಸ ವಿಮಾನಗಳು ಸಂಚರಿಸಲಿವೆ. ಸದ್ಯ ಸ್ಪೈಸ್‌ಜೆಟ್ ಹಾಗೂ ಇಂಡಿಗೋ ಸಂಸ್ಥೆಗಳು ಸಜ್ಜಾಗಿವೆ ಎಂದರು.
ಈಗಾಗಲೇ ಏರ್ ಇಂಡಿಯಾ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬಯಿಗೆ ವಿಮಾನಯಾನ ಸೇವೆ ಒದಗಿಸುತ್ತಿದೆ. ಇತ್ತಿಚೇಗಷ್ಟೆ 142 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ… ಹಾಗೂ ವಿಸ್ತೃತಗೊಂಡ ರನ್‌ವೇ ಉದ್ಘಾಟನೆಗೊಂಡಿದೆ. ಇದರಿಂದ ಹೊಸ ವಿಮಾನ ಹಾರಾಟಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಜನತೆಗೆ ಕೈಗೆಟಕುವ ದರದಲ್ಲಿ ವಿಮಾನ ಸೇವೆ ದೊರೆಯಲಿದೆ ಎಂದರು.
ಬೆಂಗಳೂರು, ಮುಂಬಯಿಯಂಥ ಮೆಟ್ರೋ ನಗರಗಳನ್ನು ಹೊರತುಪಡಿಸಿ ಎರಡನೇ ಹಂತದ (ಟು ಟೈರ್ ಸಿಟಿ) ವಾಣಿಜ್ಯ ಹಾಗೂ ಜಿÇÉಾ ಕೇಂದ್ರಗಳನ್ನು ಬೆಸೆಯುವ ಪ್ರಾದೇಶಿಕ ಸಂಪರ್ಕ ಯೋಜನೆಯೆ ಉಡಾನ್. ಈ ಯೋಜನೆಯಡಿ ಆಯ್ಕೆಯಾದ ವಿಮಾನ ಸಂಸ್ಥೆಗಳಿಗೆ ಶೇ.50ರಷ್ಟು ಪ್ರಯಾಣಿಕರ ಅರ್ಧ ಟಿಕೆಟ್ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ. ಉಳಿದ ಶೇ.50ರಷ್ಟು ಸೀಟುಗಳ ಟಿಕೆಟ್ ದರವನ್ನು ಸಂಸ್ಥೆಯೇ ನಿಗದಿಪಡಿಸುತ್ತದೆ.
ವಿಮಾನ ಸೇವೆಯ ಸಮಯ ಹೀಗಿದೆ: ಸ್ಪೈಸ್ ಜೆಟ್ ಕಂಪನಿ ಪ್ರತಿ ದಿನ ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ನೇರ ಹಾರಾಟ ನಡೆಸಲಿದೆ. ವಿಮಾನವು ಬೆಳಗ್ಗೆ 7:25 ಗಂಟೆಗೆ ಚೆನ್ನೈನಿಂದ ಹೊರಟು 9:05 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. 9:25 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10:50 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಳಿಗ್ಗೆ 10:15 ಗಂಟೆಗೆ ಹೈದರಾಬಾದ್‌ನಿಂದ ಹೊರಟು 11:25 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.
11:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12:55 ಗಂಟೆಗೆ ಹೈದರಾಬಾದ್ ತಲುಪಲಿದೆ. ಬೆಳಿಗ್ಗೆ 10:45 ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12:05 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಮಧ್ಯಾಹ್ನ 12:25 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 1:35 ಗಂಟೆಗೆ ಮುಂಬಯಿ ತಲುಪಲಿದೆ. ಮಧ್ಯಾಹ್ನ 2:50 ಗಂಟೆಗೆ ಮುಂಬಯಿಯಿಂದ ಹೊರಟು ಸಂಜೆ 4:05 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಸಂಜೆ 4:25 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 5:35 ಗಂಟೆಗೆ ಬೆಂಗಳೂರು ತಲುಪಲಿದೆ. ಸಂಜೆ 5:45 ಗಂಟೆಗೆ ಬೆಂಗಳೂರಿನಿಂದ ಹೊರಟು 7:10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. 7:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 9:20 ಗಂಟೆಗೆ ಚೆನ್ನೈ ತಲುಪಲಿದೆ ಎಂದು ಸ್ಪೈಸ್‌ಜೆಟ್ ಕಂಪನಿಯು ತನ್ನ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಪ್ರಯಾಣ ದರ: ಹುಬ್ಬಳ್ಳಿಯಿಂದ ಬೆಂಗಳೂರಿಗೆ 2713 ರೂ., ಬೆಂಗಳೂರಿನಿಂದ ಹುಬ್ಬಳ್ಳಿಗೆ 2963 ರೂ., ಹುಬ್ಬಳ್ಳಿಯಿಂದ ಮುಂಬಯಿಗೆ 3240 ರೂ., ಮುಂಬಯಿಯಿಂದ ಬೆಂಗಳೂರಿಗೆ 3326 ರೂ., ಚೆನ್ನೆçನಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ಚೆನ್ನೆçಗೆ 2970 ರೂ., ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ 2329 ರೂ. ದರ ನಿಗದಿಪಡಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.