ವಿದ್ಯಾನಿಧಿ ಹಣ ನೇರ ವರ್ಗಾವಣೆ: ಆದೇಶ
Team Udayavani, Dec 11, 2021, 5:20 AM IST
ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ವಿದ್ಯಾನಿಧಿ ಯೋಜನೆಗೆ ಇನ್ನು ಯಾರೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಸರಕಾರದಲ್ಲಿರುವ ರೈತರ ದಾಖಲೆಗಳ ಆಧಾರದಲ್ಲೇ ಫಲಾನುಭವಿಗಳನ್ನು ಆರಿಸಿ ವಿದ್ಯಾನಿಧಿ ವಿದ್ಯಾರ್ಥಿವೇತನ ನೀಡಲು ಸರಕಾರ ನಿರ್ಧರಿಸಿದೆ.ಈ ಕುರಿತು ಶುಕ್ರವಾರ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.
ಪ್ರಮುಖವಾಗಿ ರೈತರ ಮಕ್ಕಳು ಎಂದು ಖಾತ್ರಿಪಡಿಸಲು ಅವರ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಎಫ್ಐಡಿ (ರೈತರ ಗುರುತಿನ ಚೀಟಿ) ನೀಡಬೇಕಿದೆ. ವಿದ್ಯಾನಿಧಿ ಯೋಜನೆಯ ಫಲಾನುಭವಿಗಳಿಗೂ ಈಗಾಗಲೇ ಜಾರಿ ಯಲ್ಲಿರುವ ಇತರ ಸ್ಕಾಲರ್‌ಶಿಪ್ ಯೋಜನೆಗಳನ್ನು ನೀಡುವ ಎಸ್‌ಎಸ್‌ಪಿ (ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್) ನಲ್ಲಿಯೇ ಸೇರಿಸಿರುವುದರಿಂದ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮೆರಿಟ್ ಆಧಾರ ದಲ್ಲಿ ವಿದ್ಯಾರ್ಥಿ ವೇತನ ಪಡೆಯುತ್ತಿರುವ ರೈತರ ಮಕ್ಕಳು ಈ ಯೋಜನೆಯಿಂದ ವಂಚಿತರಾಗುತ್ತಿದ್ದರು. ಆದನ್ನು ಬದಲಾಯಿಸಿ ಯಾವುದೇ ರೀತಿಯ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಒದಗಿಸಲಾಗಿದೆ.
ಕೂಡು ಕುಟುಂಬ ಅಥವಾ ವಿಭಕ್ತ ಕುಟುಂಬವಾಗಿ ದ್ದರೂ, ಜಮೀನು ವಿದ್ಯಾರ್ಥಿಗಳ ತಾತನ ಹೆಸರಲ್ಲಿದ್ದು, ರೈತರ ಮಕ್ಕಳಾಗಿದ್ದರೂ ಅವರಿಗೆ ಈ ಯೋಜನೆಯ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿಲ್ಲ. ಕೃಷಿ ಇಲಾಖೆ ಮೂಲ ಗಳ ಪ್ರಕಾರ ರಾಜ್ಯದಲ್ಲಿ ಶೇ. 40ರಷ್ಟು ರೈತ ಕುಟುಂಬಗಳ ಆಸ್ತಿ ತಾತನ ಹೆಸರಿನಲ್ಲಿಯೇ ಇದೆ. ಹೀಗಾಗಿ ತಾತನ ಹೆಸರಿನಲ್ಲಿ ಆಸ್ತಿ ಇದ್ದರೂ, ಅವರ ಕುಟುಂಬದ ವಂಶಾವಳಿ (ಕೃಷಿ ಪದವಿಗೆ ಸಿಇಟಿ ಬರೆಯಲು ಅನುಸರಿಸುತ್ತಿರುವ ಮಾದರಿ) ವ್ಯವಸ್ಥೆಯನ್ನು ಅಳವಡಿಸಿ ರೈತ ಕುಟುಂಬದ ಮೊಮ್ಮಕ್ಕಳಿಗೂ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಕೃಷಿ ಇಲಾಖೆ ತಮ್ಮ ಬಳಿ ಇರುವ ರೈತರ ಡಾಟಾ ಆಧಾರದಲ್ಲಿ ಇಂಥವರನ್ನೂ ಯೋಜನೆ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ತೆರಿಗೆ ಬಾಕಿ ವಿವಾದ: ಮಂತ್ರಿ ಮಾಲ್ ಬೀಗ ತೆರೆಯಲು ಪಾಲಿಕೆಗೆ ಹೈಕೋರ್ಟ್ ಆದೇಶ
ಅರ್ಜಿಗೂ ಅವಕಾಶ
ಸರಕಾರ ತನ್ನಲ್ಲಿರುವ ರೈತರ ಡಾಟಾ ಆಧಾರದ ಮೇಲೆ ಅವರ ಮಕ್ಕಳಿಗೆ ವಿದ್ಯಾನಿಧಿ ತಲುಪಿಸುವ ಕೆಲಸವನ್ನು ಇಲಾಖೆ ಮಾಡಲಿದೆ. ಒಂದು ವೇಳೆ, ವಿದ್ಯಾರ್ಥಿಗಳು ರೈತರ ಮಕ್ಕಳಾಗಿದ್ದು, ವಿದ್ಯಾನಿಧಿ ಯೋಜನೆ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದೂ, ಬರದೇ ಇದ್ದರೆ, ಅವರು ತಮ್ಮ ಎಲ್ಲ ದಾಖಲೆಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶ ನೀಡಲಾಗಿದೆ.
ಮಕ್ಕಳ ಖಾತೆಗೆ ನೇರ ವರ್ಗಾವಣೆ
ರೈತ ರ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬ ಮಾಹಿತಿ ಸರಕಾರದಲ್ಲಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ಅರ್ಹತೆ ಪರಿಗಣಿಸಲು ಈಗಿರುವ ದಾಖಲೆಗಳನ್ನೇ ಬಳಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಲು ಇಲಾಖೆ ನಿರ್ಧ ರಿಸಿದೆ. ಪ್ರಸ್ತುತ ಕೃಷಿ ಇಲಾಖೆಯಲ್ಲಿ 1.74 ಲಕ್ಷ ವಿದ್ಯಾ ರ್ಥಿಗಳ ಮಾಹಿತಿಯಿದೆ ಎನ್ನಲಾಗಿದೆ.
ವಿದ್ಯಾನಿಧಿ ಯೋಜನೆಯು ಎಲ್ಲ ಅರ್ಹ ರೈತರ ಮಕ್ಕಳಿಗೆ ತಲುಪಬೇಕು ಎನ್ನುವ ಕಾರಣಕ್ಕೆ ಯೋಜನೆಯ ಅನುಷ್ಠಾನದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸದೆ, ನೇರವಾಗಿ ಸ್ಕಾಲರ್‌ಶಿಪ್ ದೊರೆಯಲಿದೆ.
-ಬ್ರಿಜೇಶ್ ಕುಮಾರ್ ದೀಕ್ಷಿತ್,
ಕೃಷಿ ಇಲಾಖೆ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.