Director ಗುರುಪ್ರಸಾದ್ ಪಂಚಭೂತಗಳಲ್ಲಿ ಲೀನ: ಯೋಗರಾಜ್ ಭಟ್, ವಿಜಿ, ಡಾಲಿ ಅಂತಿಮ ನಮನ
ಬ್ರಾಹ್ಮಣ ವಿಧಿಯಂತೆ ಅಂತಿಮ ಸಂಸ್ಕಾರ , ಮೊದಲ ಪತ್ನಿಯೂ ಭಾಗಿ
Team Udayavani, Nov 3, 2024, 7:31 PM IST
ಬೆಂಗಳೂರು: ಚಿತ್ರ ನಿರ್ದೇಶಕ ಗುರುಪ್ರಸಾದ್ ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ರವಿವಾರ(ನ3) ಸಂಜೆ ನೆರವೇರಿಸಲಾಯಿತು.
ಬ್ರಾಹ್ಮಣ ವಿಧಿಯಂತೆ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ಗುರುಪ್ರಸಾದ್ ಅವರ ಸಹೋದರ ಹರಿಪ್ರಸಾದ್, ಎರಡನೇ ಪತ್ನಿ ಸುಮಿತ್ರಾ , ಮೊದಲ ಪತ್ನಿ ಆರತಿ ಮತ್ತು ಕುಟುಂಬಸ್ಥರು ಹಾಜರಿದ್ದರು.
ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್ , ತಬಲಾ ನಾಣಿ, ಸತೀಶ್ ನೀನಾಸಂ ಮೊದಲಾದವರು ಅಂತಿಮ ವಿಧಿ ವೇಳೆ ಹಾಜರಿದ್ದರು.
ಇದನ್ನೂ ಓದಿ: Director Guruprasad: ಖ್ಯಾತ ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ
ಮಾಡನಾಯಕನ ಹಳ್ಳಿ ದಾಸನಪುರ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ಮೃತದೇಹ ರವಿವಾರ ಪತ್ತೆಯಾಗಿತ್ತು. ಗುರುಪ್ರಸಾದ್ ಅವರು ಮೊದಲ ಪತ್ನಿ ಆರತಿ ಅವರಿಗೆ ವಿಚ್ಛೇದನ ನೀಡಿ, 2020ರಲ್ಲಿ ಸುಮಿತ್ರಾ ಅವರನ್ನು 2ನೇ ಮದುವೆಯಾಗಿದ್ದರು. ಅವರಿಗೆ ಪುಟ್ಟ ಹೆಣ್ಣು ಮಗುವಿದೆ.
ಸಾಲ ಭಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಜಿಗುಪ್ಪೆಯಿಂದ 3-4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.