ಪರಿಷತ್‌ನಲ್ಲಿ ಸಾಹಿತಿಗಳ ಪಾನಗೋಷ್ಠಿ ಪ್ರಸ್ತಾಪ
Team Udayavani, Feb 14, 2019, 1:37 AM IST
ವಿಧಾನಪರಿಷತ್: ದೆಹಲಿಯ ಕರ್ನಾಟಕ ಭವನದಲ್ಲಿ ನಡೆದಿದೆ ಎನ್ನಲಾದ ಸಾಹಿತಿಗಳ “ಪಾನಗೋಷ್ಠಿ ಗದ್ದಲ’ವು ಬುಧವಾರ ಪರಿಷತ್ತಿನಲ್ಲೂ ಸದ್ದು ಮಾಡಿತು. ರಾಜ್ಯಕ್ಕೆ ಮುಜುಗರ ತಂದ ಈ ಘಟನೆಗೆ ಕಾರಣವಾದ ವ್ಯಕ್ತಿಗಳ ಮೇಲೆ ಕ್ರಮಕ್ಕೆ ಸದಸ್ಯರು ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಅರುಣ ಶಹಾಪೂರ, ಸಾಹಿತಿಗಳ ನಿಯೋಗವು ಕರ್ನಾಟಕ ಭವನದಲ್ಲಿ ಮದ್ಯಪಾನ ಮಾಡಿ, ಗಲಾಟೆ ಎಬ್ಬಿಸಿದ್ದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿರುವ ಘಟನೆ ಈಚೆಗೆ ನಡೆದಿದೆ.
ಇದು ರಾಜ್ಯದ ಘನತೆಗೆ ಧಕ್ಕೆ ತರುವಂತಹದ್ದಾಗಿದೆ. ಕಪ್ಪುಚುಕ್ಕೆ ತಂದಿರುವ ಈ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಾಹಿತಿಗಳು ಮದ್ಯಪಾನ ಮಾಡಿ ಜೋರಾಗಿ ಗಲಾಟೆ ಮಾಡುತ್ತಿರುವುದರಿಂದ ತಮಗೆ ತೊಂದರೆಯಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಗಳು ಅಲ್ಲಿನ ಸಿಬ್ಬಂದಿ ಮೂಲಕ ಗಮನಕ್ಕೆ ತಂದಿದ್ದಾರೆ. ಆದಾಗ್ಯೂ ಸಾಹಿತಿಗಳು ಗಲಾಟೆ ಮುಂದುವರಿಸಿದ್ದಾರೆ.
ಹಾಗಾಗಿ, ನ್ಯಾಯಮೂರ್ತಿಗಳು ಚಾಣಕ್ಯಪುರಿ ಪೊಲೀಸ್ ಠಾಣೆಗೆ ದೂರು ನೀಡಿ, ಈ ಪಾನಗೋಷ್ಠಿಯಲ್ಲಿ ತೊಡಗಿದ್ದ ವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆಯೂ ಸೂಚಿಸಿದ್ದಾರೆ. ರಾಜ್ಯಕ್ಕೆ ಮುಜುಗರ ತರುವಂತಹ ಈ ಘಟನೆ ಬಗ್ಗೆ ವರದಿ ಪಡೆಯಬೇಕು ಎಂದೂ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.