ತೆರಿಗೆ ಸೋರಿಕೆ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ
Team Udayavani, Jan 18, 2018, 8:34 AM IST
ಬೆಂಗಳೂರು: ಜಿಎಸ್‌ಟಿಯಡಿ ವಾಣಿಜ್ಯ ತೆರಿಗೆ ಆದಾಯ ಇಳಿಕೆಯಾಗುತ್ತಿದ್ದು, ಇದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ಸಂಪನ್ಮೂಲ ಕ್ರೋಢೀಕರಣ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಜಿಎಸ್‌ಟಿ ನೆಟ್‌ವರ್ಕ್ ಸಂಬಂಧಿತ ಸಚಿವರ ತಂಡದ
ಮುಖ್ಯಸ್ಥರಾದ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ಹೇಳಿದರು.
ನಗರದಲ್ಲಿ ಬುಧವಾರ ಸಚಿವರ ತಂಡದ ಆರನೇ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಜಿಎಸ್‌ಟಿಯಡಿ ಜುಲೈ ವಹಿವಾಟಿಗೆ ಸಂಬಂಧ ಪಟ್ಟಂತೆ 92,283 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ನವೆಂಬರ್‌ನಲ್ಲಿ ತೆರಿಗೆ ಆದಾಯ 80,806
ಕೋಟಿ ರೂ.ಗೆ ಇಳಿಕೆಯಾಗಿದೆ. ತೆರಿಗೆ ಆದಾಯ ಇಳಿಕೆ ಬಗ್ಗೆ ಜಿಎಸ್‌ಟಿ ನೆಟ್‌ವರ್ಕ್‌ನಡಿ ವಿವರ ಪರಿಶೀಲಿಸುತ್ತಿದೆ. ಗುರುವಾರ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆ ಆದಾಯ ಇಳಿಕೆ ಬಗ್ಗೆ ವಿವರವಾಗಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ರಾಜಿ ತೆರಿಗೆ ಪದ್ಧತಿಯ ಡೀಲರ್‌ಗಳಿಂದ ನಿರೀಕ್ಷಿತ ತೆರಿಗೆ ಸಂಗ್ರಹವಾಗುತ್ತಿಲ್ಲ. ರಾಜಿ ತೆರಿಗೆ ಪದ್ಧತಿಯಡಿ 7.5 ಲಕ್ಷ ಡೀಲರ್‌ಗಳ ರಿಟರ್ನ್ಸ್ ಸಲ್ಲಿಕೆ ವಿವರದ ಪ್ರಕಾರ 310 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಿಂದ ರಾಜಿ ತೆರಿಗೆ ಪದ್ಧತಿಯ ಡೀಲರ್‌ಗಳು
ನಿಯಮಾನುಸಾರ ತೆರಿಗೆ ಪಾವತಿಸದಿರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ರಾಜಿ ತೆರಿಗೆ ಪದ್ಧತಿಯಡಿಯ ಡೀಲರ್‌ಗಳ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರಗಳೇ ಡೀಲರ್‌ಗಳಿಗೆ ನೋಟಿಸ್ ನೀಡುತ್ತಿವೆ ಎಂದು ತಿಳಿಸಿದರು.
ಐಜಿಎಸ್‌ಟಿಯಡಿ 1.35 ಲಕ್ಷ ಕೋಟಿ ರೂ. ಹಣವಿದ್ದು, ಇದರ ಹಂಚಿಕೆಗೆ ಕೆಲ ತೊಡಕುಗಳಿದ್ದು, ಇತ್ಯರ್ಥವಾದರೆ ರಾಜ್ಯ ಸರ್ಕಾರಗಳ ಆದಾಯ ತುಸು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಸಚಿವರ ತಂಡ ಸದಸ್ಯರಾದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗಬೇಕಾದ ತೆರಿಗೆ ಆದಾಯದಲ್ಲಿ ಇಳಿಕೆ ಪ್ರಮಾಣಕ್ಕೆ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ನಿಯಮಿತವಾಗಿ ಬಿಡುಗಡೆ ಮಾಡುತ್ತಿದೆ. ಅದರಂತೆ ರಾಜ್ಯ ಸರ್ಕಾರಕ್ಕೆ 1,200 ಕೋಟಿ ರೂ.ನಿಂದ 1,900 ಕೋಟಿ ರೂ. ವರೆಗೆ ಪರಿಹಾರ ಬಿಡುಗಡೆಯಾಗುತ್ತಿದೆ ಎಂದರು.
ಇ-ವೇ ಬಿಲ್ ಕಡ್ಡಾಯ
ಏ.1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ “ಇ-ವೇ’ ಬಿಲ್ ವ್ಯವಸ್ಥೆಯನ್ನು ಫೆ.1ರಿಂದ ಜಾರಿಗೊಳಿಸಲಾಗುತ್ತಿದೆ ಎಂದು ಜಿಎಸ್‌ಟಿಎನ್ ಸಚಿವರ ತಂಡದ ಮುಖ್ಯಸ್ಥ ಸುಶೀಲ್ ಮೋದಿ ತಿಳಿಸಿದರು. ದೇಶಾದ್ಯಂತ ಫೆ.1ರಿಂದ ಅಂತಾ ರಾಜ್ಯ ಸರಕು ಸಾಗಣೆಗೆ “ಇ- ವೇ’ ಬಿಲ್ ಕಡ್ಡಾಯ ವಾಗಲಿದೆ. ಜ.15ರಿಂದ ಪ್ರಾಯೋಗಿಕ ಜಾರಿಗೆ ಚಾಲನೆ ನೀಡ ಲಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್‌ನಿಂದಲೇ “ಇ-ವೇ’ ಬಿಲ್ ವ್ಯವಸ್ಥೆ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !
Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Siddaramaiah; ಸಿದ್ದು ಹಿಂದ ಬಾಣ!: ಕನಕ ಪೀಠ ಸ್ಥಾಪಿಸಿ ಕುರುಬರಿಗೆ ಶಕ್ತಿ ನೀಡಿದ್ದು ನಾನು
ಸರಕಾರ ಬಾಕಿ ಕೊಟ್ಟರೆ ಸಾರಿಗೆಗೆ ಸಾಲ ಬೇಡ !
Sullia: ಮಹಿಳೆ ಶೌಚಾಲಯದಲ್ಲಿದ್ದ ವೇಳೆ ಫೋಟೋ ತೆಗೆದು ಕಿಡಿಗೇಡಿ ಪರಾರಿ
Ahmedabad: ಬ್ರಿಟಿಷ್ ಬ್ಯಾಂಡ್ ಕಾರ್ಯಕ್ರಮ ವೇಳೆ ಮಕ್ಕಳು ವೇದಿಕೆಗೆ ಬರುವಂತಿಲ್ಲ
Vijay Hazare Trophy : ಕರ್ನಾಟಕಕ್ಕೆ ನೇರ ಕ್ವಾ. ಫೈನಲ್ ಟಿಕೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.