82 ಲಕ್ಷ ಆಹಾರ ಪೊಟ್ಟಣ, 22 ಲಕ್ಷ ದಿನಸಿ ಕಿಟ್ ವಿತರಣೆ
Team Udayavani, Apr 23, 2020, 11:41 AM IST
ತ್ರಿಪುರವಾಸಿನಿ ಆವರಣದಲ್ಲಿ ದಿನಸಿ ಕಿಟ್ ಸಿದ್ಧಪಡಿಸುವ ಪ್ರಧಾನ ಕೇಂದ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆಹಾರದ ಕಿಟ್‌ಅನ್ನು ಪರಿಶೀಲಿಸಿದರು.
ಬೆಂಗಳೂರು: ಲಾಕ್‌ಡೌನ್ ಜಾರಿಯಾದ ಮಾ.24ರಿಂದ ಈವರೆಗೆ ಬಿಜೆಪಿ ವತಿಯಿಂದ ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಒಟ್ಟು 82.23 ಲಕ್ಷ ಆಹಾರ ಪೊಟ್ಟಣ ಹಾಗೂ 22.13 ಲಕ್ಷ ದಿನಸಿ ಕಿಟ್ ವಿತರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಾ.24ರಿಂದಲೂ ಪಕ್ಷದ ವತಿಯಿಂದ ನಾನಾ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ 311 ಮಂಡಗಳ, 58, 000 ಮತಗಟ್ಟೆಗಳಲ್ಲಿ ಈವರೆಗೆ 82,23,048 ಆಹಾರ ಪೊಟ್ಟಣ ವಿತರಿಸಲಾಗಿದೆ. ಕಾರ್ಯಕರ್ತರ ಮನೆಗಳಿಂದಲೇ ಆಹಾರ ಸಿದ್ಧಪಡಿಸಿ ಬಡ,
ಅಸಹಾಯಕ ಜನರಿಗೆ ವಿತರಿಸಿರುವುದು ವಿಶೇಷ ಎಂದರು. ಅಗತ್ಯವಿದ್ದರಿಗೆ 22,13,672 ದಿನಸಿ ಕಿಟ್, 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಬೇಳೆ, ಅಡುಗೆ ಎಣ್ಣೆ, ಗೋಧಿ ಹಿಟ್ಟು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಾಸ್ಕ್ ವಿತರಣೆ: ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರ ಮನೆಗಳಿಂದಲೇ 34,35,902 ಮಾಸ್ಕ್ ಗಳನ್ನು ತಯಾರಿಸಿ ವಿತರಿಸಲಾಗಿದೆ. ವಿಶೇಷವಾಗಿ ಮಹಿಳಾ ಮೋರ್ಚಾ
ಕಾರ್ಯಕರ್ತೆಯರು ದೊಡ್ಡ ಪ್ರಮಾಣದಲ್ಲಿ ಮಾಸ್ಕ್ಗಳನ್ನು ತಯಾರಿಸಿ ವಿತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜ್ಯದ 7,41,406 ಮಂದಿ ಪ್ರಧಾನ ಮಂತ್ರಿ ಸಹಾಯ
ನಿಧಿ (ಪಿಎಂ ಕೇರ್)ಗೆ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದರು.
3.32 ಲಕ್ಷ ಮಂದಿಗೆ ನೆರವು:
ಸಹಾಯವಾಣಿಗೆ (ಬಿಜೆಪಿ ಸಹಾಯವಾಣಿ- 080- 6832 4040/ ವಾಟ್ಸ್‌ಆ್ಯಪ್ ಸಂಖ್ಯೆ- 87225 57733 ) 3,45,213 ಮಂದಿ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದಾರೆ. 3,32,860
ಮಂದಿಗೆ ಔಷಧ, ದಿನಸಿ ಕಿಟ್, ಆಹಾರ ಪೊಟ್ಟಣ, ಮಾಸ್ಕ್ ವಿತರಿಸಲಾಗಿದೆ. ಈವರೆಗೆ ಪಕ್ಷದ 6,85,813 ಕಾರ್ಯಕರ್ತರು ನಾನಾ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಸ್ವಾರ್ಥ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾದರಾಯನಪುರದಲ್ಲಿ ಕೋವಿಡ್ ವಾರಿಯರ್ಗೆ ಸಹಕಾರ ನೀಡದೆ ಕೋವಿಡ್ ವೈರಸ್ ಮಿತ್ರನಂತೆ ವರ್ತಿಸುತ್ತಿ ರುವ ಶಾಸಕ ಜಮೀರ್ ಅಹಮ್ಮದ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು.
●ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ
ಮುಖ್ಯಾಂಶಗಳು
82,23,048 ಆಹಾರ ಪೊಟ್ಟಣ ವಿತರಣೆ
22,13,672 ದಿನಸಿ ಕಿಟ್ ಹಂಚಿಕೆ
34,35,902 ಮಾಸ್ಕ್ ವಿತರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.