ವೃದ್ಧರಿಗೆ ಬಯೋಮೆಟ್ರಿಕ್ ಇಲ್ಲದೆ ಪಡಿತರ ವಿತರಣೆ
Team Udayavani, Mar 15, 2022, 6:45 AM IST
ಬೆಂಗಳೂರು: ಹೆಬ್ಬೆರಳು ರೇಖೆಗಳು ಮಾಸಿ ಹೋಗಿದ್ದರಿಂದ ಬಯೋಮೆಟ್ರಿಕ್ ಪಡೆಯಲು ತೊಂದರೆಯಾಗುವ ಎಲ್ಲ ವಯೋ ವೃದ್ಧರಿಗೆ ಬಯೋಮೆಟ್ರಿಕ್ ಇಲ್ಲದೆ ಪಡಿತರ ವಿತರಿಸಲಾಗುವುದು ಎಂದು ಸರಕಾರ ಹೇಳಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಎಸ್. ರವಿ ಪ್ರಶ್ನಿಸಿ, ಬಯೋಮೆಟ್ರಿಕ್ ಪಡೆಯುವಲ್ಲಿ ತೊಂದರೆಯಾಗುವ ವಯೋವೃದ್ಧರಿಗೆ ಬಯೋಮೆಟ್ರಿಕ್ ಹೊರತುಪಡಿಸಿ ಪಡಿತರ ಪಡೆಯಲು ಶೇ. 2ರಷ್ಟು ಫಲಾನುಭವಿಗಳಿಗೆ ಅವಕಾಶ ಕೊಡಲಾಗಿದೆ ಆದರೆ, ವಯೋವೃದ್ಧರ ಹೆಬ್ಬೆರಳಿನ ಗೆರೆಗಳು ಮಾಸಿ ಹೋಗಿದ್ದರಿಂದ ಬಯೋಮೆಟ್ರಿಕ್ ಪಡೆಯಲು ಆಗುತ್ತಿಲ್ಲ. ಹಾಗಾಗಿ, ವಯೋವೃದ್ಧ ಫಲಾನುಭವಿಗಳಿಗೂ ಬಯೋಮೆಟ್ರಿಕ್ ಇಲ್ಲದೆ ಪಡಿತರ ನೀಡಬೇಕು ಅಥವಾ ಫಲಾನುಭವಿಗಳ ಪ್ರಮಾಣ ಶೇ. 10 ಮಾಡಬೇಕು ಎಂದು ಮನವಿ ಮಾಡಿದರು.
ವಿತರಣೆಗೆ ಅವಕಾಶ
ಇದಕ್ಕೆ ಆಹಾರ ಸಚಿವರ ಪರ ಉತ್ತರಿಸಿದ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಯೋಮೆಟ್ರಿಕ್ ಪಡೆಯುವಲ್ಲಿ ತೊಂದರೆಯಾಗುವ ವಯೋವೃದ್ಧರಿಗೆ ಬಯೋಮೆಟ್ರಿಕ್ ಹೊರತುಪಡಿಸಿ ಶೇ. 2ರಷ್ಟು ಫಲಾನುಭವಿಗಳಿಗೆ ಪಡಿತರ ಹಂಚಿಕೆ ನೀಡುವ ನಿಯಮ ಜಾರಿಯಲ್ಲಿದೆ. ಅನಿವಾರ್ಯ ಸಂದರ್ಭ ಪೂರ್ವಾನು ಮತಿಯೊಂದಿಗೆ ಬಯೋಮೆಟ್ರಿಕ್ ಇಲ್ಲದೆ ಆಹಾರಧಾನ್ಯ ವಿತರಣೆಗೆ ಅವಕಾಶ ನೀಡಲಾಗಿದೆ. ಹೆಬ್ಬರಳಿನ ರೇಖೆಗಳು ಮಾಸಿ ಹೋಗಿದ್ದರಿಂದ ಅನೇಕರಿಗೆ ತೊಂದರೆಯಾಗುತ್ತಿದೆ ಎನ್ನುವ ವಿಚಾರ ಗಮನಕ್ಕೆ ತರಲಾಗಿದೆ. ವಯೋವೃದ್ಧರಿಗೆ ಬಯೋಮೆಟ್ರಿಕ್ ಇಲ್ಲದೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಅಗತ್ಯ ಇರುವ ಕಡೆ ಉಪ ನೋಂದಣಾಧಿಕಾರಿ ಕಚೇರಿ: ಅಶೋಕ್
20,016 ಅಂಗಡಿ ಬಯೋಮೆಟ್ರಿಕ್
ರಾಜ್ಯದಲ್ಲಿ 20,084 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 20,016 ನ್ಯಾಯಬೆಲೆ ಅಂಗಡಿಗಳನ್ನು ಬಯೋಮೆಟ್ರಿಕ್ ವ್ಯವಸ್ಥೆಗೆ ಅಳವಡಿಸಲಾಗಿದೆ. ಇಂಟರ್‌ನೆಟ್ ಸಮಸ್ಯೆ ಇರುವ ಗುಡ್ಡಗಾಡು, ಮಲೆನಾಡು ಪ್ರದೇಶಗಳ 68 ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಬಯೋಮೆಟ್ರಿಕ್ ಇಲ್ಲದೆ ನೇರವಾಗಿ ವಿತರಿಸಲಾಗುತ್ತಿದೆ ಎಂದು ಸಭಾನಾಯಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.