ಐಟಿ ದಾಳಿ ನಂತರ ನಿರಾಳವಾಗಿ ತಿರುಗಾಡಿದ ಡಿ.ಕೆ.ಶಿವಕುಮಾರ್
Team Udayavani, Aug 7, 2017, 7:30 AM IST
ಬೆಂಗಳೂರು: ಐಟಿ ದಾಳಿ ಅಂತ್ಯಗೊಂಡ ಬಳಿಕ ನಿರಾಳರಾದ ಡಿ.ಕೆ. ಶಿವಕುಮಾರ್ ತಾವು ವಹಿಸಿಕೊಂಡಿದ್ದ “ಗುಜರಾತ್ ಶಾಸಕರ ಆತಿಥ್ಯದ’ ರಾಜಕೀಯ ಜವಾಬ್ದಾರಿ ಕಡೆ ಗಮನಹರಿಸಿದರು. ಈಗಲ್ಟನ್ ರೆಸಾರ್ಟ್‌ನಿಂದ ರಾಜ್ಯಪಾಲರನ್ನು ಭೇಟಿಯಾಗಲು ಬೆಂಗಳೂರಿಗೆ ಆಗಮಿಸಿದ್ದ ಗುಜರಾತ್ ಶಾಸಕರನ್ನು ವಿಧಾನಸೌಧಕ್ಕೆ ಕರೆತಂದು, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಸಾಮೂಹಿಕವಾಗಿ ಗಾಂಧಿ ಭಜನೆ ಮಾಡಿ, ಫೋಟೊಗೆ ಪೋಜ್ ಕೊಟ್ಟರು. ನಂತರ ವಿಧಾನ ಸಭೆ ಸಭಾಂಗಣ ತೋರಿಸಿ, ವಿಧಾನಸೌಧದ ಎದುರು ಮೆಟ್ಟಿಲುಗಳ ಮೇಲೆ ಎಲ್ಲ ಶಾಸಕರೊಂದಿಗೆ ಛಾಯಾ ಚಿತ್ರಕ್ಕೆ ಫೋಜ್ ಕೊಟ್ಟರು.
ಐಟಿ ದಾಳಿಯಿಂದ ಸ್ವಲ್ಪ ವಿಚಲಿತರಾದಂತೆ ಕಂಡರೂ, ಶಿವಕುಮಾರ್ ಗುಜರಾತ್‌ನ ಎಲ್ಲ ಶಾಸಕರಿಗೂ ತಾವೇ ಮುಂದೆ ನಿಂತು ವಿಧಾನಸೌಧ ತೋರಿಸಿದರು. ಅದೇ ಸಂದರ್ಭದಲ್ಲಿ ಆಗಮಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನೂ ಗುಜರಾತ್ ಶಾಸಕರಿಗೆ ಪರಿಚಯಿಸಿ, ಅವರೊಂದಿಗೆ ಹತ್ತು ನಿಮಿಷ ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಪ್ರತ್ಯೇಕವಾಗಿ ಚರ್ಚಿಸಿದರು. ಆ ನಂತರ ಎಲ್ಲ ಶಾಸಕರನ್ನೂ ಎರಡು ಬಸ್‌ಗಳಲ್ಲಿ ಕರೆದುಕೊಂಡು ಮತ್ತೆ ಈಗಲ್ಟನ್ ರೆಸಾರ್ಟ್‌ಗೆ ತೆರಳಿದರು.
ಡಿ.ಕೆ. ಶಿವಕುಮಾರ್ ರೆಸಾರ್ಟ್‌ಗೆ ಆಗಮಿಸಿದ ಸುದ್ದಿ ತಿಳಿದು ಸ್ಥಳೀಯ ಕಾಂಗ್ರೆಸ್ ನಾಯಕರು ಅವರನ್ನು ಭೇಟಿ ಮಾಡಲು ಆಗಮಿಸಿದರು. ಆದರೆ, ರೆಸಾರ್ಟ್ ಸಿಬ್ಬಂದಿ ಎಲ್ಲರನ್ನೂ ಒಳಗೆ ಬಿಡದ ಕಾರಣ ರೆಸಾರ್ಟ್ ಎದುರು ಗೊಂದಲ
ನಿರ್ಮಾಣವಾಯಿತು. ಈ ಮಧ್ಯ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ರೆಸಾರ್ಟ್‌ಗೆ ಭೇಟಿ ನೀಡಿ, ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಿಎಂ ಕ್ಷಮೆ ಕೇಳಿದ ಡಿಕೆಶಿ: ತಮ್ಮ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ತಮ್ಮ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಇದೆಲ್ಲಕ್ಕೂ ಸಿಎಂ ಸಿದ್ದರಾಮಯ್ಯ ಕಾರಣ ಎಂದು ನೀಡಿರುವ ಹೇಳಿಕೆಗೆ ಡಿ.ಕೆ. ಶಿವಕುಮಾರ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ
ಅವರು, ನನ್ನ ತಾಯಿ ಆದಾಯ ತೆರಿಗೆ ಇಲಾಖೆ ಯಾರ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಯದಿರುವ ಮುಗೆª, ಅವರು ಪುತ್ರ ವಾತ್ಸಲ್ಯದಿಂದ ಸಿದ್ದರಾಮಯ್ಯ ವಿರುದಟಛಿ ಹೇಳಿಕೆ ನೀಡಿದ್ದಾರೆ. ಅವರ ಮುಗªತೆಯನ್ನು ಕೆಲವು ಮಾಧ್ಯಮಗಳು ದುರುಪಯೋಗ ಪಡಿಸಿಕೊಂಡಿವೆ.
ಸಿಎಂ ಸಿದ್ದರಾಮಯ್ಯ ಯಾವಾಗಲೂ ನನ್ನ ಕಷ್ಟಕಾಲದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ತಾಯಿಯ ಉದ್ದೇಶ ಪೂರ್ವಕವಲ್ಲದ ಹೇಳಿಕೆಗೆ ಮುಖ್ಯಮಂತ್ರಿ ಹಾಗೂ ರಾಜ್ಯದ ಜನತೆಯ ಕ್ಷಮೆ ಕೋರುವುದಾಗಿ ಅವರು ತಿಳಿಸಿದ್ದಾರೆ.
ಡಿಕೆಶಿ ಬದಟಛಿತೆಗೆ ಗುಜರಾತ್ ಶಾಸಕರು μದಾ:
ಡಿ.ಕೆ. ಶಿವಕುಮಾರ್ ಅವರ ಬದ್ದತೆಗೆ ಗುಜರಾತ್ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರ ವಲಯದ ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರ ವಾಸ್ತವ್ಯದ ಜವಾಬ್ದಾರಿ ವಹಿಸಿಕೊಂಡಿದ್ದ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಗುಜರಾತ್ ಶಾಸಕರು ಆತಂಕಕ್ಕೊಳಗಾಗಿದ್ದರು.
ತಮ್ಮ ಮೇಲೂ ದಾಳಿಯಾಗುತ್ತದೆ ಎಂದು ಭಯಭೀತರಾಗಿದ್ದರು. ಅಲ್ಲದೇ ತಮ್ಮನ್ನು ವಾಪಸ್ ಗುಜರಾತ್‌ಗೆ ಕಳುಹಿಸಿ ಕೊಡುವಂತೆ ಆಗ್ರಹ ಕೂಡ ಮಾಡಿದ್ದರು. ಆದರೆ, ಡಿಕೆಶಿ ತಮ್ಮ ಮನೆ ಮೇಲೆ ಐಟಿ ದಾಳಿ ನಡೆದು ತಾವು ಹೊರಗೆ
ಹೋಗಲಾರದಂತ ಸ್ಥಿತಿ ನಿರ್ಮಾಣವಾದರೂ, ತಮ್ಮ ಸಹೋದರನ ಮೂಲಕ ಗುಜರಾತ್ ಶಾಸಕರನ್ನು ಕ್ಷೇಮವಾಗಿ ನೋಡಿಕೊಂಡಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ
ಅಹಮದಾಬಾದ್ ಶಾಸಕ ಜಿಯಾಸುದಿಟಛೀನ್ ಶೇಖ್, ಕರ್ನಾಟಕ ಕಾಂಗ್ರೆಸ್‌ನ ಆತಿಥ್ಯ ಉತ್ತಮವಾಗಿತ್ತು.
ವಿಶೇಷವಾಗಿ ಡಿ.ಕೆ. ಶಿವಕುಮಾರ್ ಅವರ ಧೈರ್ಯ ಮತ್ತು ಪಕ್ಷದ ಬಗ್ಗೆ ಇರುವ ಬದಟಛಿತೆಗೆ ಆಭಾರಿಯಾಗಿದ್ದೇವೆ ಎಂದರು.
ಗುಜರಾತ್ ಚುನಾವಣೆ ಉಸ್ತುವಾರಿಗೆ ಮನವಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯವೈಖರಿ ಮತ್ತು ನಿಷ್ಠುರತನ ಮೆಚ್ಚಿಕೊಂಡಿರುವ ಗುಜರಾತ್ ಶಾಸಕರು ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ನಡೆಯುವ ಚುನಾವಣೆಯ
ಉಸ್ತುವಾರಿ ವಹಿಸಿಕೊಳ್ಳುವಂತೆ ಡಿ.ಕೆ.ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸಬ್ಕೋ ಸನ್ಮತಿ ದೇ ಗಾಂಧಿ: ಶಕ್ತಿಸಿಂಗ್ ಗೋಯಲ್: ಒಂದು ವಾರದಿಂದ ರಾಜ್ಯದ ರೆಸಾರ್ಟ್‌ನಲ್ಲಿ ಸಿಲುಕಿಕೊಂಡಿದ್ದ ಗುಜರಾತ್ ಕಾಂಗ್ರೆಸ್ ಶಾಸಕರು, ಶನಿವಾರ ರೆಸಾರ್ಟ್‌ನಿಂದ ಹೊರ ಬಂದು ಮುಕ್ತವಾಗಿ ರಾಜಭವನ, ವಿಧಾನಸೌಧ ತಿರುಗಾಡಿದರು. ಗುಜರಾತ್ ಮೂಲದವರಾದ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ಚರ್ಚಿಸಿದರು. ವಿ.ಆರ್.ವಾಲಾ ಗುಜರಾತ್‌ನಲ್ಲಿ ಸಚಿವರಾಗಿ, ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ
ನಿರ್ವಹಿಸಿದ್ದರಿಂದ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಂತರ ವಿಧಾನಸೌಧದ ಗಾಂಧಿ ಪ್ರತಿಮೆಗೆ ಭೇಟಿ ನೀಡಿ ಭಜನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶಕ್ತಿ ಸಿಂಗ್ ಗೋಯಲ್, ಗುಜರಾತ್‌ನಲ್ಲಿ ನಾವೆಲ್ಲ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲದಂತಾಗಿದೆ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ನಾಡಿನಲ್ಲಿ ಈಗ ಪ್ರಜಾಪ್ರಭುತ್ವದ
ಕಗ್ಗೊಲೆಯಾಗುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದರೆ, ಅವರ ಮೇಲೆ ದಾಳಿಯಾಗುತ್ತದೆ. ಅದಕ್ಕೆ ನಿನ್ನ ನಾಡಿನಲ್ಲಿ ಏನಾಗುತ್ತಿದೆ ನೋಡು ಗಾಂಧಿ ಸಬ್ ಕೋ ಸನ್ಮತಿ ದೇ ಅಂತ ಪ್ರಾಥನೆ ಮಾಡಿದ್ದೇವೆ ಎಂದು ಗೋಯಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.