ಬ್ಲ್ಯಾಕ್ ಲೇಬಲ್, ಬ್ಲೂ ಲೇಬಲ್ ನಿಮಗೆ ಗೊತ್ತೇ?
Team Udayavani, Jun 21, 2017, 2:23 PM IST
ವಿಧಾನಸಭೆ: ಬ್ಲ್ಯಾಕ್ ಲೇಬಲ್, ಬ್ಲೂ ಲೇಬಲ್, ಗ್ರೀನ್ ಲೇಬಲ್, ರೆಡ್ ಲೇಬಲ್… ಎಲ್ಲವೂ ನನಗೆ ಗೊತ್ತು. ನಿಮಗೆ ಗೊತ್ತೇ ಎಂದು ಪರೀಕ್ಷೆ ಮಾಡಿದೆ. ಹೀಗೆಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಅವರ ಕಾಲೆಳೆದಿದ್ದು ಮುಖ್ಯಮಂತ್ರಿ
ಸಿದ್ದರಾಮಯ್ಯ.
ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆ ವೇಳೆ ಅಬಕಾರಿ ಇಲಾಖೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಉದಾಹರಣೆಯೊಂದನ್ನು ನೀಡಿದ ಜಗದೀಶ ಶೆಟ್ಟರ್, ಹುಬ್ಬಳ್ಳಿ-ಧಾರವಾಡದಲ್ಲಿ ವೈನ್ಶಾಪ್ ಒಂದಕ್ಕೆ ಪರವಾನಗಿ ನೀಡುವ ಕುರಿತು ಅದರ ಮಾಲೀಕರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೂ ಪರವಾನಗಿ ನೀಡದ ಕಾರಣ ಆತ ನನ್ನ ಬಳಿ ಬಂದು ಹೇಳಿಕೊಂಡಿದ್ದರು.
ನಾನು ಎರಡು ಬಾರಿ ಆ ಜಿಲ್ಲಾಧಿಕಾರಿಗೆ ಫೋನ್ ಮಾಡಿದ ಬಳಿಕ ಅರ್ಜಿದಾರರನ್ನು ಸಂಪರ್ಕಿಸಿದ ಆ ಅಧಿಕಾರಿ, ಪರವಾನಗಿಗೆ ಇಂತಿಷ್ಟು ಎಂದು ಕೊಡಬೇಕಿದೆ. ಆದರೆ, ನೀವು ಅವರಿಂದೆಲ್ಲಾ ಫೋನ್ ಮಾಡಿಸಿದ್ದರಿಂದ ರಿಯಾಯಿತಿ ಕೊಡೋಣ.
ಆದರೆ, ನನಗೆ ಇಂಪೋರ್ಟೆಡ್ ಬಾಟಲ್ ಒಂದನ್ನು ಕೊಡಿಸಿ ಅಂದರಂತೆ. ಅದೇನೋ ಬ್ಲೂ ಟೇಬಲ್ಲೋ, ಲೇಬಲ್ಲೋ ಏನೋ ಇದ್ಯಂತಲ್ಲಾ ಅದು. ನನಗೆ ಅದು ಗೊತ್ತಾಗಲ್ಲ ಎಂದರು.
ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಅದು ಬ್ಲೂ ಲೇಬಲ್ ಅಂತ ಎಂದಾಗ, ನನಗೆ ಅದೆಲ್ಲಾ ಗೊತ್ತಿಲ್ಲ. ನಿಮಗೆ ಗೊತ್ತಿರಬೇಕು ಎಂದು ಜಗದೀಶ ಶೆಟ್ಟರ್ ತಿರುಗೇಟು ನೀಡಿದರು. ನನಗೆ ಎಲ್ಲಾ ಗೊತ್ತಿದೆ. ಬ್ಲೂ ಲೇಬಲ್, ಬ್ಲ್ಯಾಕ್ ಲೇಬಲ್, ಗ್ರೀನ್ ಲೇಬಲ್, ರೆಡ್ ಲೇಬಲ್ ಎಲ್ಲವೂ ಗೊತ್ತಿದೆ ಎಂದಾಗ, ಮುಖ್ಯಮಂತ್ರಿಗಳೇ ಗ್ಲೆನ್ ಪೆಡಿಚ್ ಸಿಂಗಲ್ ಮಾಲ್ಟ್ ವಿಸ್ಕಿ ಹೆಸರೇ ಮರೆತುಬಿಟ್ರಲ್ಲಾ ಎಂದು ಬಿಜೆಪಿಯ ಅರವಿಂದ ಲಿಂಬಾವಳಿ ಕಾಲೆಳೆದರು.
ನಿನಗೆ ನೆನಪಿಲ್ವಾ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನೆ ಹಾಕಿದಾಗ, ನೀವೇ ಆ ಬ್ರಾಂಡ್ ನನಗೆ ಕೊಡಿಸಿದ್ದು
ಮರೆಯೋಕೆ ಸಾಧ್ಯವೇ ಎಂದು ಅರವಿಂದ ಲಿಂಬಾವಳಿ ಉತ್ತರಿಸಿದರು. ಅಷ್ಟರಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್, ಅವರಿಗೆ ಮಾತ್ರ ಏಕೆ, ನಮಗೂ ಕೊಡಿಸಿ ಎಂದು ಹೇಳಿದರೆ, ಪಾಪ ಜೀವರಾಜ್ಗೆ ಆಸೆ ಬಂದಿದೆ. ಕೊಡಿಸಿ ಎಂದು ಲಿಂಬಾವಳಿ ಪ್ರತಿಕ್ರಿಯಿಸಿದರು. ಮಲೆನಾಡಿನವರಿಗೆ ಅದೆಲ್ಲಾ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ತೆರೆ ಎಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.