ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ|ಬಿ.ಆರ್‌.ಶೆಟ್ಟಿ


Team Udayavani, Mar 1, 2021, 5:08 PM IST

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ|ಬಿ.ಆರ್‌.ಶೆಟ್ಟಿ

ಉಡುಪಿ: ನಾನು ಯಾರ ಮೇಲೆ ವಿಶ್ವಾಸವಿರಿಸಿದೆನೋ ಅವರು ದ್ರೋಹ ಮಾಡಿದರು. ನಾನು ಯಾರಿಗೂ ಮೋಸ ಮಾಡಲಿಲ್ಲ. ಈ ವಿಷಯವೀಗ ನ್ಯಾಯಾಲಯದಲ್ಲಿದೆ. ನಾನು ಈ ಸಮಸ್ಯೆಯಿಂದ ಹೊರಬರುತ್ತೇನೆಂಬ ಆತ್ಮವಿಶ್ವಾಸವಿದೆ…

ಇದು ಅನಿವಾಸಿ ಭಾರತೀಯ ಉದ್ಯಮಿ ಡಾ|ಬಿ.ಆರ್‌.ಶೆಟ್ಟಿಯವರ ವಿಶ್ವಾಸದ ನುಡಿ. ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರ 10,000ನೇ ಮಗುವಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.

ನಾನು ಸಿಂಡಿಕೇಟ್‌ ಬ್ಯಾಂಕ್‌ನಿಂದ ಕೆ.ಕೆ.ಪೈಯವರು ಕೊಟ್ಟ ಸಾಲದಿಂದ ದುಬಾಯಿಗೆ ಹೋದೆ. ಅಲ್ಲಿ ದುಡಿದು ಆ ಸಾಲದ ಮೊತ್ತವನ್ನು ಹಿಂದಿರುಗಿಸಿದೆ. ಭಾರತದಲ್ಲಿ ನನ್ನ ಒಂದು ರೂ. ಸಾಲವೂ ಇಲ್ಲ. ನನ್ನ ಶೇ.50 ಸಂಪತ್ತನ್ನು ಮಿಲಿಂದ್‌ಗೇಟ್‌ ದತ್ತಿ ಸಂಸ್ಥೆಗೆ ಬರೆದಿದ್ದೇನೆ ಎಂದರು.

ನನ್ನ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಸೇರಿದ ಒಬ್ಬನನ್ನು ಸಿ ಎಫ್ ಓ ಮಾಡಿದೆ  ಅವನೇ ನನ್ನ ಬೆನ್ನಿಗೆ ಚೂರಿ ಹಾಕಿದ  ನನಗೇ ತಿಳಿಯದ ಹಾಗೆ ಬೆನ್ನ ಹಿಂದೆ ಆರ್ಥಿಕ ವಂಚನೆ ಮಾಡಿದ್ದಾರೆ  ಇಂತಹ ವ್ಯಕ್ತಿಯನ್ನು ಆರೋಪಿ ಎಂದು ನಾನು ಹೇಳಲಾರೆ ಏಕೆಂದರೆ ಆರೋಪ ಇನ್ನೂ ಸಾಬೀತಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ಹಾಗಾಗಿ ಹೆಚ್ಚೇನು ಹೇಳಲಾರೆ. ಪಟ್ಟಭದ್ರ ಹಿತಾಸಕ್ತಿಗಳು ಸೇರಿ ನನಗೆ ವಂಚನೆ ಮಾಡಿದ್ದಾರೆ  ಜನರ ಆಶಿರ್ವಾದದಿಂದ ಈ ಎಲ್ಲಾ ಸಮಸ್ಯೆಗಳಿಂದ ನಾನು ಹೊರ ಬರುತ್ತೇನೆ ಜನಸೇವೆಯೇ ಜನಾರ್ದನ ಸೇವೆ ಎಂದು ನಂಬಿದವನು ನಾನು ಎಂದರು.

ಟ್ರಂಪ್ ಗೆ ಒಂದು ಕ್ರೆಡಿಟ್ ಕಾರ್ಡ್ ಕೂಡ ಕೊಡಲು ಅಮೆರಿಕದ ಬ್ಯಾಂಕುಗಳು ಹಿಂದೆ ಮುಂದೆ ನೋಡುತ್ತಿದ್ದವು  ಅಂತಹ ದಿವಾಳಿ ಆಗಿದ್ದ ಮನುಷ್ಯ ಬಳಿಕ ಅಮೆರಿಕದ ಅಧ್ಯಕ್ಷ ಆಗಲಿಲ್ಲವೇ? ಯಾರಿಗೂ ನಾನು ವಂಚನೆ ಮಾಡಿಲ್ಲ ಎಂಬ ಆತ್ಮವಿಶ್ವಾಸವಿದೆ.  ನಾನು ಉಡುಪಿಯಲ್ಲಿದ್ದಾಗ ನನ್ನ ಕಿಸೆಯಲ್ಲಿ ಒಂದು ರೂಪಾಯಿ ದುಡ್ಡು ಇರುತ್ತಿರಲಿಲ್ಲ. ಆಗ ಸಾಲಮಾಡಿ ಬೈಕಿಗೆ ಪೆಟ್ರೋಲ್ ಹಾಕಿ ಓಡಾಡುತ್ತಿದ್ದೆ. ಯಾರಿಂದ ಸಾಲ ಪಡೆದಿದ್ದೇನೆ ಎಲ್ಲವನ್ನೂ ವಾಪಾಸು ಮಾಡಿದ್ದೇನೆ ಎಂದು ಹೇಳಿದರು.

ಇದೊಂದು ನನಗೆ ಗ್ರಹಚಾರ ಬಂದಿದೆ ಏನು ಮಾಡಲು ಸಾಧ್ಯ ? :

ಬಿಆರ್ ಶೆಟ್ಟಿ ಸಾಮ್ರಾಜ್ಯ ಮುಳುಗಿಹೋಯಿತು ಎಂಬ ಸುದ್ದಿಗಳನ್ನು ನೋಡಿ ಬೇಸತ್ತು ಹೋಗಿದ್ದೇನೆ. ದೇವರ ದಯೆಯಿಂದ ನನ್ನ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ನೀವು ಯಾರು ಊಹಿಸಿರದಷ್ಟು ಬಿ ಆರ್ ಶೆಟ್ಟಿ ಆರ್ಥಿಕವಾಗಿ ಸಕ್ಷಮವಾಗಿದ್ದಾರೆ. ಹೊರದೇಶದಲ್ಲಿರುವ ನನ್ನ ಸಾಮ್ರಾಜ್ಯ ಹೋಗಿರಬಹುದು. ಆದರೆ ಭಾರತದ ಆಸ್ತಿ ಸುರಕ್ಷಿತವಾಗಿದೆ.ಯಾರಾದರೂ ಮೇಲೆ ಹೋಗುತ್ತಾರೆ ಎನ್ನುವಾಗ ಮತ್ಸರ ಪಡುವ ಜನರು ಇರುವುದು ಸಹಜ ಎಂದರು.

ಪ್ರಶ್ನೆಯೊಂದಕ್ಕೆ ಕಂಟ್ರಿ ಹೆಡ್‌ ಕುಶಲ ಶೆಟ್ಟಿಯವರು ಆರು ಖಂಡಗಳಲ್ಲಿ 247 ಆಸ್ಪತ್ರೆಗಳಿವೆ ಎಂದಾಗ ಡಾ|ಶೆಟ್ಟಿಯವರು ಈಗ ಇದು ಇಲ್ಲ. ಭಾರತದಲ್ಲಿ ನಾಲ್ಕು ಆಸ್ಪತ್ರೆಗಳಿವೆ ಎಂದರು.

2018ರಲ್ಲಿ 12.8 ಬಿ. ಡಾಲರ್‌ ಸಂಪತ್ತು ಇತ್ತು. ಲಕ್ಷ್ಮೀ  ಚಂಚಲೆ ಆಗ್ತಾಳೆ. 2017ರಲ್ಲಿಯೇ ನ್ಯೂ ಮೆಡಿಕಲ್‌ ಸೆಂಟರ್‌ನಿಂದ ನಾನು ಹೊರಬಂದಿದ್ದೆ ಎಂದು ಹೇಳಿದ ಡಾ|ಶೆಟ್ಟಿ, ಹಿಂದೆ ಸಾಲ ಕೊಡಲು ಬ್ಯಾಂಕ್‌ನವರು ಕ್ಯೂ ನಿಲ್ಲುತ್ತಿದ್ದರು. ಈಗ ಆ ಕಾಲ ಹೋಯಿತು ಎಂದರು.

ಜೋಗ ಫಾಲ್ಸ್‌ ಯೋಜನೆ ಏನಾಯಿತು ಎಂದಾಗ, ಜೋಗ ಫಾಲ್ಸ್‌ ಯೋಜನೆಗೆ ಟೆಂಡರ್‌ ಹಾಕುವ ದಿನಾಂಕವನ್ನು ಮುಂದೂಡುವಂತೆ ಒಬ್ಬರು ಡಾ|ಶೆಟ್ಟಿಯವರಲ್ಲಿ ತಿಳಿಸಿದರು. ಆಗ ಡಾ|ಶೆಟ್ಟಿಯವರು ನಾವೇ ಹಾಕೋಣ ಎಂದರು. ಈ ಯೋಜನೆ ಬದಲು ವಿಮಾನ ನಿಲ್ದಾಣವೂ ಸೇರಿದಂತೆ ವಿಸ್ತೃತ ಯೋಜನೆಯೊಂದನ್ನು ಪ್ರಸ್ತಾವಿಸಿದೆವು. ಇದು ಆದರೆ ಐದು ವರ್ಷಗಳಲ್ಲಿ ಜಗತ್ತಿನ 10 ಮಹತ್ವದ ಪ್ರವಾಸಿ ತಾಣಗಳಲ್ಲಿ ಇದು ಒಂದಾಗುತ್ತಿತ್ತು. ಸರಕಾರದಿಂದ ಮತ್ತೆ ಪ್ರತಿಕ್ರಿಯೆ ಬರಲಿಲ್ಲ ಎಂದು ಕಂಟ್ರಿ ಹೆಡ್‌ ಕುಶಲ ಶೆಟ್ಟಿ ಉತ್ತರಿಸಿದರು.

ಇದನ್ನೂ ಓದಿ : ತಾಯಿಯ ಮೇಲೆ ಟಿ ಎಮ್ ಸಿ ಗೂಂಡಾಗಳಿಂದ ಹಲ್ಲೆ : ಬಿಜೆಪಿ ಕಾರ್ಯಕರ್ತನಿಂದ ಆರೋಪ

ಉಡುಪಿಯ ಆಸ್ಪತ್ರೆಯ ಸೇವೆಯನ್ನು ನೋಡಿ ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್‌, ಒಡಿಶಾದ ಮುಖ್ಯಮಂತ್ರಿಯವರು ತಮ್ಮಲ್ಲಿಯೂ ಇಂತಹುದೇ ಆಸ್ಪತ್ರೆ ನಿರ್ಮಿಸುವಂತೆ ಕೋರಿಕೆ ಸಲ್ಲಿಸಿದ್ದಾರೆಂದು ಕುಶಲ ಶೆಟ್ಟಿ ತಿಳಿಸಿದರು.

ನೀರಾ ಮೋದಿ, ಮಲ್ಯನಂತೆ ನಾನೂ ಆಗಬೇಕೆ? :

ಪ್ರಧಾನಿ ನರೇಂದ್ರ ಮೋದಿಯವರ ಸಂಪರ್ಕ ನಿಮಗೆ ಚೆನ್ನಾಗಿ ಇದೆ. ಅವರನ್ನು ಭೇಟಿ ಮಾಡಿದ್ದೀರಾ ಎಂದು ಪ್ರಶ್ನಿಸಿದಾಗ “ಇಲ್ಲ. ನಾನು ನರೇಂದ್ರ ಮೋದಿಯವರನ್ನು ಸಂಪರ್ಕಿಸಿಲ್ಲ. ನೀರಾ ಮೋದಿ, ವಿಜಯ ಮಲ್ಯರಂತೆ ನನ್ನ ಹೆಸರೂ ಬರಬೇಕೆಂದಿದ್ದೀರಾ?’ ಎಂದರು.

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.