ನಾಟಕ ರೂಪ ಪಡೆದ “ಹೌದು ಹುಲಿಯಾ’
Team Udayavani, Dec 28, 2019, 3:05 AM IST
ಬಾದಾಮಿ: ಕಾಗವಾಡ ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಕೇಳಿ ಬಂದ “ಹೌದು ಹುಲಿಯಾ’ ಸಂಭಾಷಣೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಿದ್ದರಾಮಯ್ಯ ಕೂಡ ಇದರ ಜನಪ್ರಿಯತೆಯನ್ನು ಒಪ್ಪಿಕೊಂಡಿದ್ದರು.
ಈಗ ಇದೇ ಸಂಭಾಷಣೆ ಆಧರಿಸಿದ್ದ ರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ “ಹೌದ್ದ ಹುಲಿಯಾ’ ನಾಟಕವೊಂದು ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ಸಿದ್ದರಾಮಯ್ಯ ಹೋದ ಲ್ಲೆಲ್ಲ ಕೇಳಿ ಬರುತ್ತಿದ್ದ “ಹೌದು ಹುಲಿಯಾ’ ಡೈಲಾಗ್ ಸಿದ್ದ ರಾಮಯ್ಯಗೆ ಮಾತ್ರವಲ್ಲದೇ, ಇದನ್ನು ಹೇಳಿದ್ದ ಪೀರಪ್ಪನಿಗೂ ಜನಪ್ರಿಯತೆ ತಂದು ಕೊಟ್ಟಿತ್ತು.
ಅದರ ಪ್ರಖ್ಯಾತಿ ಕಂಡು ಮಹೇಶ ಕಲ್ಲೋಳರ “ಹೌದ್ದ ಹುಲಿಯಾ’ ಶೀರ್ಷಿಕೆಯಲ್ಲಿ ನಾಟಕ ರಚಿಸಿದ್ದಾರೆ. ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘದ ವತಿಯಿಂದ ಪ್ರದರ್ಶನಗೊಳ್ಳಲಿದೆ. ಜ.9 ರಿಂದ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಒಂದು ತಿಂಗಳು ಜಾತ್ರಾ ಮಹೋತ್ಸವದಲ್ಲಿ ನಿತ್ಯ ಮೂರು ಪ್ರದರ್ಶನ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.