ಒಡಕು ತರಲಿದೆಯೇ ಮರುಮೈತ್ರಿ ಕನಸು?

ತೆನೆ ಜತೆ "ಕೈ' ಜೋಡಿಸಿದ್ರೆ ಸಿದ್ದು ನಡೆ ಕೂಡ ನಿರ್ಣಾಯಕ

Team Udayavani, Dec 3, 2019, 4:11 AM IST

Congress JDS

ಬೆಂಗಳೂರು: ನೆರೆಯ ಮಹಾಮೈತ್ರಿ ಯಶಸ್ಸಿನ ಪರಿಣಾಮ ರಾಜ್ಯದಲ್ಲಿ “ಮರು ಮೈತ್ರಿ’ಯ ಜಪ  ಶುರುವಾಗಿದೆ. ಆದರೆ, ಇದರ ಒಗ್ಗೂಡುವಿಕೆಯು ಪ್ರಮುಖವಾಗಿ ಜೆಡಿಎಸ್‌ ಪಕ್ಷದಲ್ಲಿ ಒಡಕು ಉಂಟುಮಾಡುವ ಆತಂಕವನ್ನೂ ಸೃಷ್ಟಿಸಿದೆ.

ಬಿಜೆಪಿಯೇತರ ಸರ್ಕಾರ ರಚನೆಯು ಮಹಾರಾಷ್ಟ್ರದಲ್ಲಿ ಸಾಧ್ಯವಾದ ಬೆನ್ನಲ್ಲೇ ಅಂತಹುದೇ ಪ್ರಯತ್ನದ ಉಮೇದಿನಲ್ಲಿ ಕಾಂಗ್ರೆಸ್‌ನ ಒಂದು ಗುಂಪು ಮುಂದಾಗಿದೆ. ಇದಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಆದರೆ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಒಲವು ಇದಕ್ಕೆ ವ್ಯತಿರಿಕ್ತ ವಾಗಿದೆ. “ಬಿಜೆಪಿ ಸರ್ಕಾರವನ್ನು ಬೀಳಲು ಬಿಡುವುದಿಲ್ಲ’ ಎಂಬ ಈ ಹಿಂದಿನ ಹೇಳಿಕೆ ಕೂಡ ಅವರ ಭಿನ್ನ ನಡೆಗೆ ಪುಷ್ಠಿ ನೀಡುತ್ತದೆ.

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಬಹುತೇಕ ಜೆಡಿಎಸ್‌ ಶಾಸಕರು ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡಿದ್ದರು. ಸಾ.ರಾ.ಮಹೇಶ್‌, ಡಿ.ಸಿ.ತಮ್ಮಣ್ಣ ಸೇರಿದಂತೆ ಕೆಲವರ ಗುಂಪು ಕುಮಾರಸ್ವಾಮಿ ನಿಲುವಿನ ವಿರುದಟಛಿವಾಗಿತ್ತು ಎನ್ನಲಾಗಿದೆ. ಜತೆಗೆ, ಜೆಡಿಎಸ್‌ನ ವಿಧಾನಪರಿಷತ್‌ ಸದಸ್ಯರು ಪ್ರತ್ಯೇಕ ಸಭೆಗಳನ್ನು ನಡೆಸಿ ಮಾರಸ್ವಾಮಿ ವಿರುದಟಛಿ ಹೇಳಿಕೆಗಳನ್ನೂ ನೀಡಿದ್ದರು. ಅದರ ಹಿಂದೆ ಆ ಪಕ್ಷದ ವಿಧಾನಸಭೆ ಸದಸ್ಯರೂ ಇದ್ದರು ಎಂದು ಹೇಳಲಾಗಿದೆ.

ದೋಸ್ತಿ ಕಡಿದುಕೊಂಡವರೊಂದಿಗೇ ಮತ್ತೆ ಕೈಜೋಡಿಸಲು ದೇವೇಗೌಡರು ಮುಂದಾದರೆ, ಅತ್ತ ಪುತ್ರನೊಂದಿಗೆ ಮುನಿಸು ಕಟ್ಟಿಕೊಳ್ಳಬೇಕಾಗುತ್ತದೆ. ಅದರೊಂದಿಗೆ ಕುಮಾರಸ್ವಾಮಿ ಅವರ ಬೆಂಬಲಿಗ ಜೆಡಿಎಸ್‌ ಶಾಸಕರಲ್ಲೂ ಅಸಮಾಧಾನದ ಹೊಗೆಯಾಡುತ್ತದೆ. ಅಕಸ್ಮಾತ್‌ ಕುಮಾರಸ್ವಾಮಿ ಕಮಲದೊಂದಿಗೆ ಹೋದರೆ, ತಂದೆಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇದರಿಂದ ದಳ ಒಡೆದ ಮನೆ ಆಗಲಿದೆ. ಆಗ, ಕಮಲದ ಜತೆ ಕೈಜೋಡಿಸಿದ ಪುತ್ರನನ್ನು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಂತೆ ದಿಟ್ಟತನದಿಂದ ವಾಪಸ್‌ ಕರೆತರುವ ಪ್ರಯತ್ನ ಮಾಡುತ್ತಾರೆಯೇ? ಅಥವಾ 2006ರಲ್ಲಿ ನಡೆದುಕೊಂಡಂತೆ ಮೌನಕ್ಕೆ ಶರಣಾಗುತ್ತಾರೆಯೇ? ಎಂಬುದು ಕುತೂಹಲಕರ ಸಂಗತಿ.

“ಉಪ ಚುನಾವಣೆ ಘೋಷಣೆಯಾದ ದಿನದಿಂದಲೂ ಮತ್ತೆ ನಮ್ಮದೇ (ಜೆಡಿಎಸ್‌ನದ್ದು) ಪಕ್ಷ ಅಧಿಕಾರಕ್ಕೆ ಬರಲಿದೆ’ ಎಂದು ಮೈತ್ರಿ ಮುರಿದ ಕೆಲವೇ ದಿನಗಳ ನಂತರ ದೇವೇಗೌಡರು ಹೇಳಿದ್ದರು. ಈಗ ಅಂದರೆ ಮತದಾನಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ, ಯಾರೊಂದಿಗೆ ಅಧಿಕಾರದ ಗದ್ದುಗೆ ಏರಲಿದೆ ಎಂಬುದರ ಸುಳಿವು ನೀಡಿದ್ದಾರೆ. ಈ ಮಧ್ಯೆ, ಮಹಾಮೈತ್ರಿಯಲ್ಲಿ ಕಾಂಗ್ರೆಸ್‌ ನೇತೃತ್ವ ವಹಿಸಿದ್ದ ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅದೇ ಹುರುಪಿನಲ್ಲಿ ಉಪಚುನಾವಣೆಯಲ್ಲಿ ರಂಗಪ್ರವೇಶ ಮಾಡಿದ್ದಾರೆ. ಅಂದುಕೊಂಡಂತೆ ಫ‌ಲಿತಾಂಶ ಬಂದು ಮರುಮೈತ್ರಿಗೆ ಮುಂದಾದರೆ, ಈ ಬಾರಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಒಲಿಯುವ ನಿರೀಕ್ಷೆ ಇದೆ. ಡಿಸಿಎಂ ಸ್ಥಾನ ಜೆಡಿಎಸ್‌ಗೆ ಒಲಿಯಬಹುದು. ಆಗ, ಸಿದ್ದರಾಮಯ್ಯ ನಡೆ ನಿಗೂಢವಾಗಲಿದೆ.

“ದೇಶದಲ್ಲಿ ಈಗ ಬಿಜೆಪಿ ಸರ್ಕಾರ ಇರುವ ದೊಡ್ಡ ರಾಜ್ಯಗಳು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಕರ್ನಾಟಕ ಕೂಡ ಒಂದಾಗಿದ್ದು, ದಕ್ಷಿಣ ಭಾರತದಲ್ಲಿ ಏಕೈಕ ರಾಜ್ಯವಾಗಿದೆ. ಮರುಮೈತ್ರಿಯಿಂದ ಬಿಜೆಪಿಯನ್ನು ಹೊರಗಿಡಲು ಸಾಧ್ಯವಾಗುವುದಾದರೆ, ಭಿನ್ನಮತಗಳನ್ನು ಬದಿಗೊತ್ತಿ ಒಗ್ಗಟ್ಟಿನ
ಮಂತ್ರ ಜಪಿಸಲು ಸಿದಟಛಿ. ಆದರೆ, ಈ ಎಲ್ಲ ನಡೆಯು ನ.9ರ ಫ‌ಲಿತಾಂಶವನ್ನು ಅವಲಂಬಿಸಿದೆ. ಹಾಗಾಗಿ, ಈಗ ನೀಡುವ ಯಾವುದೇ ಪ್ರತಿಕ್ರಿಯೆಗಳು ನಿರ್ಣಾಯಕ ಆಗುವುದಿಲ್ಲ’ ಎಂದು ಜೆಡಿಎಸ್‌ ನಾಯಕರೊಬ್ಬರು ಹೇಳುತ್ತಾರೆ.

ಸಿದ್ದು ನಡೆ ನಿರ್ಣಾಯಕ
ಕಾಂಗ್ರೆಸ್‌ನಲ್ಲಿ ಸಹ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ಅಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದ್ದಾರೆ. (ಈಗಷ್ಟೇ ಉಳಿದ ನಾಯಕರು ಕಾಣಿಸಿಕೊಂಡಿದ್ದಾರೆ). ಹೀಗಿರುವಾಗ ಒಂದು ವೇಳೆ ಇವೆರಡೂ ಪಕ್ಷಗಳು ಮರುಮೈತ್ರಿಗೆ ಮುಂದಾದರೆ, ಸಿದ್ದರಾಮಯ್ಯ ನಡೆ ಕೂಡ ನಿರ್ಣಾಯಕವಾಗಲಿದೆ. ಈ ನಿಟ್ಟಿನಲ್ಲಿ ಒಗ್ಗೂಡುವಿಕೆ ಸಣ್ಣ ಕಂಪನ ಸೃಷ್ಟಿಸುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

● ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.