ಅಕ್ಕಮಹಾದೇವಿ ವಿವಿ ಮೇಲೆ ಕಣ್ಣಿಡಲಿದೆ ಡ್ರೋಣ್!
Team Udayavani, Jul 29, 2017, 7:00 AM IST
ವಿಜಯಪುರ: ವಿಜಯಪುರದ ತೊರವಿ ಬಳಿ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೇಲೆ ಇನ್ನು ಡ್ರೋಣ್ ಕ್ಯಾಮರಾ ಹದ್ದಿನ ಕಣ್ಣಿಡಲಿದ್ದು, ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಆಗಸ್ಟ್ ಮಾಸಾಂತ್ಯದಲ್ಲಿ ಯೋಜನೆ ಆರಂಭಗೊಳ್ಳಲಿದೆ. ರಾಜ್ಯದ ಎರಡು ಪ್ರಮುಖ ಖಾಸಗಿ ಸುದ್ದಿವಾಹಿನಿಗಳನ್ನು ರೂಪಿಸಿರುವ ಬೆಂಗಳೂರಿನ ಟೆಲೆರಾಡ್
ಸಂಸ್ಥೆಗೆ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯ ಅತ್ಯಾಧುನಿಕ ಡ್ರೋಣ್ ಕ್ಯಾಮರಾ ತಾಂತ್ರಿಕತೆ ಅಳವಡಿಸುವ ಹೊಣೆ ನೀಡಲಾಗಿದೆ.
ಅನುಮತಿಗೆ ಪ್ರಯತ್ನ: ಡ್ರೋಣ್ ಕ್ಯಾಮರಾ ಅಳವಡಿಸಲು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಅನುಮತಿ ಪಡೆಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ವಿಜಯಪುರದಲ್ಲಿ ರಾಜ್ಯದ ಸೈನಿಕ ಶಾಲೆ ಇದೆ. ಬೀದರ್ ಜಿಲ್ಲೆಯಲ್ಲಿ ಸೇನಾ
ವೈಮಾನಿಕ ತರಬೇತಿ ಕೇಂದ್ರವಿದ್ದು, ಈ ಕೇಂದ್ರದ ಹೆಲಿಕಾಪ್ಟರ್‌ಗಳು ತರಬೇತಿ ಸಂದರ್ಭದಲ್ಲಿ ವಿಜಯಪುರ ಜಿಲ್ಲೆವರೆಗೂ ಹಾರಾಟ ನಡೆಸಲಿವೆ. ಹೀಗಾಗಿ ಮಹಿಳಾ ವಿಶ್ವವಿದ್ಯಾಲಯದ ಮೇಲೆ ಡ್ರೋಣ್ ಎಷ್ಟು ಎತ್ತರದಲ್ಲಿ ಹಾರಿಸಬೇಕೆಂದು ತಾಂತ್ರಿಕ ಸಮೀಕ್ಷೆ ನಡೆಯಲಿದೆ. ವಾಯುಯಾನ ಇಲಾಖೆ, ವಾಯುಸೇನಾ ವಿಭಾಗದಿಂದ ಆಕ್ಷೇಪಣಾ
ರಹಿತ ಪ್ರಮಾಣ ಪತ್ರವೂ ದೊರೆಯಬೇಕಿದೆ.
ಜಿಲ್ಲೆಯಲ್ಲಿ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳಿವೆ. ಕೃಷ್ಣಾ,ಆದರ ಉಪ ನದಿಗಳ ವ್ಯಾಪ್ತಿಯಲ್ಲಿ ಹಲವು ಜಲಾಶಯಗಳಿವೆ. ಹೀಗಾಗಿ ಡ್ರೋಣ್ ಅಳವಡಿಕೆಗೆ ಅನುಮತಿ ನೀಡುವ ಮುನ್ನ ರಕ್ಷಣಾ ಇಲಾಖೆ, ಗೃಹ ಇಲಾಖೆ ಸೂಕ್ಷ್ಮಾತಿಸೂಕ್ಷ್ಮ ಸುರಕ್ಷತಾ ಕ್ರಮದ ಪರಿಶೀಲನೆ ನಡೆಸಲಿವೆ. ಈ ಕುರಿತು ಪರಸ್ಪರ ವಿಶ್ವಾಸಾರ್ಹತೆ ಮೂಡಿದ ಮೇಲೆ ರಕ್ಷಣಾ ಇಲಾಖೆ ಡ್ರೋಣ್ ಕ್ಯಾಮರಾ ಅಳವಡಿಕೆಗೆ ಮಂಜೂರಾತಿ ನೀಡಲಿದೆ.
ಸುರಕ್ಷತೆಗೆ ಆದ್ಯತೆ: ಯೋಜನೆ ಅನುಷ್ಠಾನಕ್ಕೆ ಸಮ್ಮತಿ ದೊರೆತರೆ ಆಗಸ್ಟ್ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದರಿಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ. ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಸಮೂಹ ಸಂವಹನ ವಿಭಾಗದ ಉಸ್ತುವಾರಿಯಲ್ಲಿ ಡ್ರೋಣ್ ಕ್ಯಾಮರಾ ತೊರವಿ
ಹೊರ ವಲಯದಲ್ಲಿರುವ ವಿವಿ ಮೇಲೆ ಮಾತ್ರ ಹಾರಲಿದೆ. ತಾಂತ್ರಿಕತೆ ಪರಿಶೀಲನೆ ಪೂರ್ಣಗೊಂಡ ಬಳಿಕ ವಿಜಯಪುರ ಮಹಾನಗರ ಮೇಲೂ ಕಣ್ಣಿಡಲು ಈ ಡ್ರೋಣ್ ಬಳಕೆಗೆ ನಿರ್ಧರಿಸಲಾಗಿದೆ. ಡ್ರೋಣ್ ಅಳವಡಿಕೆ ಗುತ್ತಿಗೆ ಪಡೆದಿರುವ
ಟೆಲೆರಾಡ್ ಸಂಸ್ಥೆಯೇ ಪರವಾನಗಿ ಸೇರಿ ಎಲ್ಲ ರೀತಿಯ ಸಮೀಕ್ಷೆ, ಮಂಜೂರಾತಿ ಪಡೆಯುವ ಜವಾಬ್ದಾರಿ ನಿರ್ವಹಿಸಲಿದೆ. ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಗಣೇಶ ನೇತೃತ್ವದಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ| ಉಷಾರಾಣಿ, ಮಹಿಳಾ ವಿಶ್ವವಿದ್ಯಾಲಯದ ಡಾ| ಓಂಕಾರ ಕಾಕಡೆ ಅವರನ್ನು ಒಳಗೊಂಡಿರುವ ಸಮಿತಿಯನ್ನೂ
ರಚಿಸಲಾಗಿದೆ.
ಏನಿದರ ವೈಶಿಷ್ಟé?
ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಳವಡಿಸುವ ಡ್ರೋಣ್ ಅತ್ಯಂತ ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಆಧುನಿಕ ಅಪರಿಮಿತ ತಾಂತ್ರಿಕತೆ ಹೊಂದಿದೆ. ಒಂದೊಮ್ಮೆ ವೈಮಾನಿಕ ಹಾರಾಟದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಂಡು
ಬಂದಲ್ಲಿ ಎಲ್ಲಿಯೇ ಹಾರಾಟ ನಡೆಸುತ್ತಿದ್ದರೂ ದೋಷಿತ ಡ್ರೋಣ್ ವಿಶ್ವವಿದ್ಯಾಲಯದ ನಿಯಂತ್ರಣ ಕೇಂದ್ರಕ್ಕೆ ಮರಳಿ ಬರಲಿದೆ. ಇದು ಡ್ರೋಣ್ ಕ್ಯಾಮರಾ ವೈಶಿಷ್ಟÂ. ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಈ ಸೌಲಭ್ಯ ಅಳವಡಿಕೆ ನಮಗೆ ಆನೆ ಬಲ ನೀಡಲಿದೆ. ಕಾನೂನು ಪ್ರಕಾರ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ. ಬರುವ ತಿಂಗಳಲ್ಲಿ ಯೋಜನೆ ಚಾಲನೆ ಪಡೆಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.