ಆತಂಕ ತಂದ ಡ್ರೋನ್ ಹಾರಾಟ
Team Udayavani, Mar 2, 2019, 3:09 AM IST
![26.jpg](https://www.udayavani.com/wp-content/uploads/2019/03/2/26.jpg)
![26.jpg](https://www.udayavani.com/wp-content/uploads/2019/03/2/26.jpg)
ನಾಯಕನಹಟ್ಟಿ: ಸಮೀಪದ ಕುಂದಾಪುರದಲ್ಲಿರುವ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವೈಮಾನಿಕ ನೆಲೆಯ ಮೇಲೆ ಸುಮಾರು 12 ನಿಮಿಷಗಳ ಕಾಲ ಡ್ರೋನ್ ವೊಂದು ಹಾರಾಟ ನಡೆಸಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಗುರುವಾರ ಈ ವಿಷಯ ರಕ್ಷಣಾ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ನಂತರ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಬೆಂಗಳೂರು ಕ್ಯಾಂಪಸ್‌ನ ಏರೋನಾಟಿಕಲ್ ಸಂಶೋಧನಾ ವಿಭಾಗ ಪರೀಕ್ಷಾರ್ಥ ನಡೆಸಿದ ಡ್ರೋನ್ ಇದು ಎಂಬುದು ದೃಢಪಟ್ಟಿತು.
ಡಿಆರ್‌ಡಿಒದಲ್ಲಿ ಇಂತಹ ಯಾವುದೇ ಡ್ರೋನ್ ಬಳಸುತ್ತಿಲ್ಲ. ಇಲ್ಲಿನ ಪ್ರದೇಶದಲ್ಲಿ ಚಾಲಕ ರಹಿತ ವಿಮಾನಗಳ ಹಾರಾಟ ಪರೀಕ್ಷೆ ಮಾತ್ರ ಮಾಡಲಾಗುತ್ತಿದೆ. ಡಿಆರ್‌ಡಿಒ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಭಾರತೀಯ ವಿಜ್ಞಾನ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಐಐಎಸ್ಸಿ ಬೆಂಗಳೂರು ಕ್ಯಾಂಪಸ್‌ನ ಏರೋನಾಟಿಕಲ್ ಸಂಶೋಧನಾ ವಿಭಾಗ ಇಲ್ಲಿನ ಸಂಶೋಧನಾ ಕಾರ್ಯದಲ್ಲಿ ತೊಡಗಿದೆ. ಸಂಶೋಧನಾ ವಿಭಾಗದ ಮೆಡಿಸಿನ್ ಡ್ರೋನ್ ಕಣ್ತಪ್ಪಿನಿಂದ ಐಐಎಸ್ಸಿ ಆವರಣ ದಾಟಿ ಡಿಆರ್‌ಡಿಒ ಪ್ರವೇಶಿಸಿದೆ. ಹಾಗಾಗಿ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು ಎಂದು ಐಐಎಸ್ಸಿ ಮುಖ್ಯಸ್ಥ ಪ್ರೊ. ಬಿ.ಎನ್. ರಘುನಂದನ್ ತಿಳಿಸಿದ್ದು, ಡ್ರೋನ್ ಪರೀಕ್ಷೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-sidda](https://www.udayavani.com/wp-content/uploads/2025/02/1-sidda-150x101.jpg)
![1-sidda](https://www.udayavani.com/wp-content/uploads/2025/02/1-sidda-150x101.jpg)
![1-sidda](https://www.udayavani.com/wp-content/uploads/2025/02/1-sidda-150x101.jpg)
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
![1-congress](https://www.udayavani.com/wp-content/uploads/2025/02/1-congress-150x108.jpg)
![1-congress](https://www.udayavani.com/wp-content/uploads/2025/02/1-congress-150x108.jpg)
![1-congress](https://www.udayavani.com/wp-content/uploads/2025/02/1-congress-150x108.jpg)
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
![DKSHi-4](https://www.udayavani.com/wp-content/uploads/2025/02/DKSHi-4-150x85.jpg)
![DKSHi-4](https://www.udayavani.com/wp-content/uploads/2025/02/DKSHi-4-150x85.jpg)
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
![Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ](https://www.udayavani.com/wp-content/uploads/2025/02/car-3-150x82.jpg)
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
![Instagram provides clues to finding suspect who had been on the run for 9 years](https://www.udayavani.com/wp-content/uploads/2025/02/inst-150x82.jpg)
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್