ಬರದಿಂದ ಒಣಗಿದ 2.82 ಕೋಟಿ ತೆಂಗು, ಅಡಕೆ ಮರಗಳು
Team Udayavani, Aug 8, 2017, 9:02 AM IST
ಬೆಂಗಳೂರು: ಸತತ ಬರದ ಹಿನ್ನೆಲೆಯಲ್ಲಿ ರಾಜ್ಯದ 2.28 ಕೋಟಿ ತೆಂಗು ಹಾಗು ಅಡಕೆ ಮರಗಳು ಒಣಗಿ ಹೋಗಿದ್ದು, ಫಸಲು ಸಂಪೂರ್ಣ ನಷ್ಟವಾಗಿದೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ, ರಾಜ್ಯದಲ್ಲಿ ನೀರಿಲ್ಲದೆ ಹಾಗೂ ವಿವಿಧ ರೋಗಳಿಗೆ ತುತ್ತಾಗಿ 2.28 ಕೋಟಿ ತೆಂಗು ಮತ್ತು ಅಡಕೆ ಮರಗಳು ಒಣಗಿದ್ದು, 45 ಲಕ್ಷ ತೆಂಗು, 1.83 ಕೋಟಿ ಅಡಕೆ ಮರಗಳಲ್ಲಿ ಫಸಲು ನಷ್ಟವಾಗಿದೆ. ಆ ಪೈಕಿ ಶೇ.50 ಮರಗಳು ಬೇರು ಸಹಿತ ಜೀವ ಕಳೆದುಕೊಂಡಿವೆ. ಇದೇ ಪರಿಸ್ಥಿತಿ ಮುಂದುವರಿದರೆ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ 13 ವರ್ಷಗಳಲ್ಲಿ ಮೂರು ವರ್ಷಗಳು ಮಾತ್ರ ರಾಜ್ಯದಲ್ಲಿ ವಾಡಿಕೆ ಮಳೆಯಾಗಿದೆ, ಇನ್ನು 10 ವರ್ಷ ಮಳೆ ಕೊರತೆಯಿಂದ ಬರ ಬಂದಿದೆ. ಮಳೆ ಇಲ್ಲದ ಕಾರಣ ಜಲ ಮೂಲ ಬತ್ತಿ ಹೋಗಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಅಂಶವೇ ಲಭ್ಯವಾಗುತ್ತಿಲ್ಲ. ಇದರಿಂದ ಅಡಕೆ ಮತ್ತು ತೆಂಗಿನ ಮರಗಳ ಸುಳಿ ಸಮೇತ ನಿಷ್ಕ್ರಿಯಗೊಳ್ಳುತ್ತಿವೆ ಎಂದು ಹೇಳಿದರು.
ತೆಂಗು, ಅಡಕೆ ಬೆಳಗಾರರಿಗೆ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು, ರಾಜ್ಯದಲ್ಲಿ ಒಟ್ಟಾರೆ 1.83 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು 0.51 ಲಕ್ಷ ಹೆಕ್ಟೇರ್‌ನಲ್ಲಿ ಅಡಕೆ ಬೆಳೆ ನಷ್ಟವಾಗಿದೆ. ರಾಜ್ಯದ ವಿವಿಧ ಬಾಗಗಳಲ್ಲಿ ಹಾನಿಗೀಡಾದ ಇತರೆ ಬೆಳೆಗಳ ಪ್ರಮಾಣವೂ ಸೇರಿ ಎಲ್ಲ
ವಿವರಗಳನ್ನು ಒಳಗೊಂಡಂತೆ ವರದಿ ತರಿಸಿ, ಇನ್ನೊಂದು ವಾರದಲ್ಲಿ ದೆಹಲಿಗೆ ಹೋಗಿ ಪ್ರತಿ ಹೆಕ್ಟೇರ್‌ಗೆ 75 ಸಾವಿರ ರೂ. ಪರಿಹಾರಕ್ಕೆ ಕೇಂದ್ರ ಸರ್ಕಾರದೆದುರು ಬೇಡಿಕೆ ಇಡಲಿದ್ದೇವೆ ಎಂದು ತಿಳಿಸಿದರು.
ಕೇಂದ್ರದ ಗೃಹ ಸಚಿವರಿಗೆ ಪರಿಹಾರಕ್ಕಾಗಿ ಮನವಿ ಕೊಡುತ್ತೇವೆ. ನಂತರ ಅಗತ್ಯ ಬಿದ್ದರೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ ಅನುದಾನ ನೀಡುವ ಮಾರ್ಗಸೂಚಿ ಬದಲಿಸುವಂತೆ ಮತ್ತೂಮ್ಮೆ ಮನವಿ ಮಾಡುತ್ತೇವೆ ಎಂದರು.
14ಕ್ಕೆ ಸರ್ವಪಕ್ಷ ಸಭೆ
ಕಾವೇರಿ ವ್ಯಾಪ್ತಿಯ ಜಲಾಶಯಗಳಲ್ಲಿ ನೀರು ಕಡಿಮೆ ಇರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಗಸ್ಟ್ 14 ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಅದಕ್ಕೂ ಮುನ್ನ ಬುಧವಾರ (ಆ.9) ರಂದು ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದಿದ್ದು ವಸ್ತುಸ್ಥಿತಿಯನ್ನು
ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ಈ ಮಧ್ಯೆ ಆ.9ರಂದು ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ವಾದ ಮಂಡಿಸಲಿದ್ದು, ಆನಂತರ ರಾಜ್ಯದ ನಿಲುವು ವ್ಯಕ್ತಪಡಿಸಲು ಮತ್ತೂಂದು ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.
ಹೆದ್ದಾರಿ ಬದಿಯಲ್ಲಿ ಬರುವ ಮದ್ಯದ ಅಂಗಡಿ ಬಂದ್ ಹಾಗೂ ನಗರ ಮಧ್ಯಭಾಗದಲ್ಲಿ ಹಾದು ಹೋಗಿರುವ ಹೆದ್ದಾರಿಗಳ ಅಕ್ಕ-ಪಕ್ಕದ ಮದ್ಯದ ಅಂಗಡಿ ಬಂದ್ ವಿಷಯದಲ್ಲಿ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರ ಏನು ಮಾಡಬಹುದೋ ಅದೆಲ್ಲವನ್ನೂ ಮಾಡಿದೆ. ಒಟ್ಟಾರೆ ಮದ್ಯದ ಅಂಗಡಿಗಳ ಪೈಕಿ ಶೇ.5 ರಷ್ಟು ಮಾಲೀಕರು ನ್ಯಾಯಲಯದ ಮೊರೆ ಹೋಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.