ವಿವಿಧ ರಾಜ್ಯಗಳಲ್ಲಿ ಡ್ರಗ್ಸ್ ಜಾಲ: ಎನ್‌ಸಿಬಿಯಿಂದ ಮಹಿಳೆಯರು ಸೇರಿ 9 ಮಂದಿ ಬಂಧನ
ನೈಜಿರಿಯಾ ಪ್ರಜೆಯೂ ಬಂಧನ; ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಕಾರ್ಯಾಚರಣೆ ಆರಂಭ
Team Udayavani, May 27, 2022, 9:17 PM IST
ಬೆಂಗಳೂರು: ಬೆಂಗಳೂರು, ದೆಹಲಿ, ಮಧ್ಯಪ್ರದೇಶ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಮಾದಕ ವಸ್ತು ಜಾಲ ವಿಸ್ತರಿಸಿ, ಅವ್ಯಹತವಾಗಿ ದಂಧೆ ನಡೆಸುತ್ತಿದ್ದ ನೈಜಿರಿಯಾ ಪ್ರಜೆ ಹಾಗೂ 7 ಮಂದಿ ಮಹಿಳೆಯರು ಸೇರಿ 9 ಮಂದಿಯನ್ನು ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಹಾಗೂ ದೇಶದ ವಿವಿಧೆಡೆ ಜಾಲ ವಿಸ್ತರಿಸಿರುವ ನೈಜಿರಿಯಾ ಪ್ರಜೆ, ಮೂವರು ಆಫ್ರಿಕಾ ದೇಶದ ಮಹಿಳೆಯರು ಹಾಗೂ ನಾಲ್ವರು ಸ್ಥಳೀಯ ಮಹಿಳೆಯರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 52.5 ಕೋಟಿ ರೂ. ಮೌಲ್ಯದ 34.89 ಕೆ.ಜಿ. ಹೆರಾಯಿನ್, 5.8 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮೇ 24ರಂದು ಜಿಂಬಾಬ್ವೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯನ್ನು ವಶಕ್ಕೆ ಪಡೆದು, ಆಕೆಯ ಸೂಟ್‌ಕೇಸ್ ಪರಿಶೀಲಿಸಿದಾಗ 7 ಕೆ.ಜಿ. ಹೆರಾಯಿನ್ ಪತ್ತೆಯಾಗಿತ್ತು. ಆಕೆಗಾಗಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದ ಮತ್ತೊಬ್ಬ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಇಬ್ಬರು ನೀಡಿದ ಮಾಹಿತಿ ಮೇರೆಗೆ ಲಾಡ್ಜ್ ಒಂದರ ಕೊಠಡಿ ಶೋಧಿಸಿದಾಗ 6.89 ಕೆ.ಜಿ. ಹೆರಾಯಿನ್ ಪತ್ತೆಯಾಗಿದೆ.
ಇಬ್ಬರು ಆರೋಪಿತ ಮಹಿಳೆಯರ ಸಿಡಿಆರ್ ಪರಿಶೀಲಿಸಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ ಇತರೆ ಮೂವರು ಮಹಿಳೆಯರು ಬೆಂಗಳೂರಿನಿಂದ ರಾಜಧಾನಿ ಎಕ್ಸ್‌ಪ್ರಸ್ ರೈಲಿನಿಂದ ದೆಹಲಿಗೆ ತೆರಳುತ್ತಿರುವ ವಿಚಾರ ಗೊತ್ತಾಗಿದೆ. ಕೂಡಲೇ ಮಧ್ಯಪ್ರದೇಶದ ಇಂಧೋರ್‌ನ ಎನ್‌ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಈ ತಂಡ ಮೂವರು ಮಹಿಳೆಯರು ತಂಗಿದ್ದ ಲಾಡ್ಜ್ ಮೇಲೆ ದಾಳಿ ನಡೆಸಿ ಕೊಠಡಿಯಲ್ಲಿ ಟ್ರಾಲಿ ಬ್ಯಾಗ್‌ನಲ್ಲಿದ್ದ 21 ಕೆ.ಜಿ. ಹೆರಾಯಿನ್ ಪತ್ತೆಯಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ನೈಜಿರಿಯಾ ಪ್ರಜೆ ಬಂಧನ
ಐವರು ಮಹಿಳೆಯರನ್ನು ವಿಚಾರಣೆ ನಡೆಸಿದಾಗ ನೈಜಿರಿಯಾ ಪ್ರಜೆಯೊಬ್ಬ ದೆಹಲಿಯಲ್ಲಿ ಕುಳಿತು ಕರ್ನಾಟಕ, ಮಧ್ಯಪ್ರದೇಶ, ದೆಹಲಿ, ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಡ್ರಗ್ಸ್ ದಂಧೆಯ ಜಾಲಹೊಂದಿರುವುದು ಗೊತ್ತಾಗಿದೆ. ನಂತರ ದೆಹಲಿಯ ಎನ್‌ಸಿಬಿ ಅಧಿಕಾರಿಗಳ ಸಹಕಾರದೊಂದಿಗೆ ನೈಜಿರಿಯಾ ಪ್ರಜೆಯನ್ನು ಬಂಧಿಸಲಾಗಿದೆ. ಇದೇ ವೇಳೆ ಆತನ ಜತೆ ದಂಧೆಗೆ ಸಹಕಾರ ನೀಡುತ್ತಿದ್ದ ಮೂವರು ಆಫ್ರಿಕಾ ದೇಶದ ಮಹಿಳೆಯರನ್ನು ಬಂಧಿಸಲಾಗಿದೆ. ಈ ಮೂಲಕ ದೇಶದ ವಿವಿಧೆಡೆ ಡ್ರಗ್ಸ್ ದಂಧೆ ನಡೆಸುತ್ತಿದ್ದ ಬೃಹತ್ ಜಾಲವನ್ನು ಬೇಧಿಸಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಸೂಟ್‌ಕೇಸ್‌ನ ಕೆಳಗಿತ್ತು ಡ್ರಗ್ಸ್
ನೈಜಿರಿಯಾ ಪ್ರಜೆ, ಮಹಿಳೆಯರನ್ನು ತನ್ನ ದಂಧೆಗೆ ಬಳಸಿಕೊಳ್ಳುತ್ತಿದ್ದ. ದೇಶದ ವಿವಿಧೆ ಮಹಿಳೆಯರನ್ನು ಪ್ರಯಾಣಿಕರ ಸೋಗಿನಲ್ಲಿ ಕಳುಹಿಸಿ ಅವರೊಂದಿಗೆ ಟ್ರಾಲಿ ಬ್ಯಾಗ್ ಅಥವಾ ಸೂಟ್‌ಕೇಸ್‌ನ ಕೆಳಭಾಗದಲ್ಲಿ ಪ್ರತ್ಯೇಕವಾಗಿ ಬ್ಯಾಗ ಹೊಲಿಸಿ, ಅದರಲ್ಲಿ ಡ್ರಗ್ಸ್‌ಗಳನ್ನುತುಂಬಿ ಇಡುತ್ತಿದ್ದ. ಹೀಗಾಗಿ ಇದುವರೆಗೂ ದಂಧೆಯ ಸುಳಿವು ಸಿಕ್ಕಿರಲಿಲ್ಲ. ಇದೀಗ ಜಾಲವನ್ನು ಬೇಧಿಸಿದ್ದು, ಇತರೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಎನ್‌ಸಿಬಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.