ಮಾದಕ ವಸ್ತು ಮಾರಾಟ: ದ.ಕ. ಮೂಲದ ಪ್ರೀತಿಪಾಲ್ ರೈ ಸೆರೆ
Team Udayavani, Dec 30, 2020, 12:08 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಹೊಸ ವರ್ಷಾಚರಣೆ ಸಂದರ್ಭ ಮಾದಕ ವಸ್ತು ಚರಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಪೆಡ್ಲರ್‌ಗಳನ್ನು ಆಗ್ನೇಯ ವಿಭಾಗದ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಮೂಲದ ಕೆ.ಪ್ರೀತಿಪಾಲ್ ಅಲಿಯಾಸ್ ಪ್ರೀತಿಪಾಲ್ ರೈ (48), ಆತನ ಸಹಚರ ಕೆ . ಖಲಂದರ್ (31) ಹಾಗೂ ಮತ್ತೂಂದು ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ಅಮಿತ್ ಕುಮಾರ್ (31), ಸೂರಜ್ (32) ಅವರನ್ನು ಬಂಧಿಸಲಾಗಿದೆ. ಎರಡು ತಂಡಗಳಿಂದ 73 ಲಕ್ಷ ರೂ. ಮೌಲ್ಯದ 214 ಕೆ.ಜಿ. ಗಾಂಜಾ ಮತ್ತು 600 ಗ್ರಾಂ. ಚರಸ್ ವಶಕ್ಕೆ ಪಡೆಯಲಾಗಿದೆ.
ಕಡಿಮೆ ಬೆಲೆಗೆ ಗಾಂಜಾ ಖರೀದಿ
ಆರೋಪಿಗಳಾದ ಕೆ. ಪ್ರೀತಿಪಾಲ್ ಮತ್ತು ಕೆ. ಖಲಂದರ್ ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ವಾಹನಗಳ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಪ್ರೀತಿಪಾಲ್, ಪೃಥ್ವಿ, ವಿನಯ್, ಗೌತಮ್ ಶೆಟ್ಟಿ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಈತನ ವಿರುದ್ಧ ಗೋವಾ, ಕೇರಳ ರಾಜ್ಯಗಳಿಂದ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಪ್ರಕರಣಗಳಿವೆ.
ಎಂಟಕ್ಕೂ ಅಧಿಕ ಕ್ರಿಮಿನಲ್ ಪ್ರಕರಣ
ಬಂಟ್ವಾಳ ಗ್ರಾಮಾಂತರ, ಉಡುಪಿ ಬಂದರು ಠಾಣೆ, ಅಬಕಾರಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಟೌನ್ ಠಾಣೆಯಲ್ಲಿ ಮೂರು ಪ್ರಕರಣ ಸಹಿತ ಎಂಟಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದಾನೆ.
ಕೆಲ ಪೆಡ್ಲರ್‌ಗಳ ಸಂಪರ್ಕ
ಮಂಗಳೂರಿನಲ್ಲಿ ಶೇ.20ರಷ್ಟು ಹಾಗೂ ಕಾಸರಗೋಡಿನಲ್ಲಿ ಶೇ.70ರಷ್ಟು ಪ್ರಮಾಣದಲ್ಲಿ ಪೆಡ್ಲರ್‌ಗಳು, ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್
ವೇರ್ ಕಂಪನಿ ನೌಕರರಿಗೆ ಮಾರಾಟ ಮಾಡುತ್ತಿದ್ದರು. ನ್ಯಾಯಾಲಯದಲ್ಲಿ ಜಾಮೀನು ಪಡೆದು ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತ ಬೆಂಗಳೂರಿನಲ್ಲಿ ನೆಲೆಸಿದ್ದ. ಇತ್ತೀಚೆಗೆ ಜೈಲು ಸೇರಿದ್ದ ಕೆಲ ಪೆಡ್ಲರ್‌ಗಳು ಈತನ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.