Dussehra Festival: ದಸರಾ ಸಡಗರ: ಹೂ ಬೆಲೆಯಲ್ಲಿ ದಿಢೀರ್ ಏರಿಕೆ
ಪ್ರತಿ ಕೆ.ಜಿ. ಹೂವಿನ ಬೆಲೆ 100ರಿಂದ 200 ರೂ.ಗೆ ಹೆಚ್ಚಳ ಸಾವಿರ ರೂ. ದಾಟಿದ ಮಲ್ಲಿಗೆ ಮೊಗ್ಗಿನ ಹಾರ
Team Udayavani, Oct 15, 2023, 7:20 AM IST
ಬೆಂಗಳೂರು: ಪಿತೃಪಕ್ಷದ ಹಿನ್ನೆಲೆಯಲ್ಲಿ ಕುಸಿತ ಕಂಡಿದ್ದ ಹೂವಿನ ಬೆಲೆ ಈಗ ದಿಢೀರನೇ ಹೆಚ್ಚಳವಾಗಿದೆ. ಎಲ್ಲಡೆ ದಸರಾ ಹಬ್ಬದ ಸಡಗರ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಕೆಲವು ಹೂವುಗಳ ಬೆಲೆಯಲ್ಲಿ ಪ್ರತಿ ಕೆ.ಜಿ.ಗೆ 100ರಿಂದ 200 ರೂ. ಹೆಚ್ಚಳವಾಗಿದೆ. ದಸರಾ ಹಬ್ಬದ ವೇಳೆಗೆ ಮಲ್ಲಿಗೆ ಮೊಗ್ಗು, ಕನಕಾಂಬರ, ಸೇವಂತಿಗೆ ಹೂವು ಮತ್ತಿತರ ಹೂವಿನ ಬೆಲೆಯು ಗ್ರಾಹಕರ ಕೈ ಸುಡುವ ಸಾಧ್ಯತೆ ಇದೆ.
ಕಳೆದ ಒಂದೆರಡು ದಿನಗಳ ಹಿಂದಷ್ಟೇ ಪ್ರತಿ ಕೆ.ಜಿ. 600ರಿಂದ 700 ರೂ.ವರೆಗೂ ಮಾರಾಟವಾಗುತ್ತಿದ್ದ ಉತ್ತಮ ಗುಣಮಟ್ಟದ ಕನಕಾಂಬರ ಹೂವು ಶನಿವಾರ ಕೆ.ಆರ್.ಮಾರುಕಟ್ಟೆಯಲ್ಲಿ 1 ಸಾವಿರ ರೂ.ಗೆ ಖರೀದಿಯಾಯಿತು. ಕೆ.ಜಿಗೆ 15ರಿಂದ 20 ರೂ.ಗೆ ಮಾರಾಟ ಆಗುತ್ತಿದ್ದ ಬಿಡಿ ಹೂ ಕೂಡ 30ರಿಂದ 40 ರೂ.ವರೆಗೂ ಮಾರಾಟವಾಗಿದೆ.
ಕೆಲವು ವಾರಗಳ ಹಿಂದೆ ಮಾರು ಕಟ್ಟೆಯಲ್ಲಿ ಹೂವಿನ ಬೆಲೆಗಳು ಹೇಳಿಕೊಳ್ಳುವಂತೇನೂ ಇರಲಿಲ್ಲ. ಆದರೆ, ಎರಡೂ¾ರು ದಿನಗಳಲ್ಲಿ ಹಲವು ಹೂವುಗಳ ಬೆಲೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಅದರಲ್ಲಿ ಕನಕಾಂಬರ ಮಲ್ಲಿಗೆ ಮೊಗ್ಗು, ಸೇವಂತಿಗೆ ಮತ್ತು ಕೆಂಪು ಗುಲಾಬಿ ಹೂವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಕೆ.ಆರ್.ಮಾರುಕಟ್ಟೆಯ ಹೋಲ್ ಸೇಲ್ ಹೂವಿನ ವ್ಯಾಪಾರಿಗಳು ಹೇಳುತ್ತಾರೆ.
ಸೇವಂತಿಗೆ ಕೇಳುವವರೇ ಇರಲಿಲ್ಲ
ಕೆಲವು ದಿನಗಳ ಹಿಂದೆ ಸೇವಂತಿಗೆ ಹೂವನ್ನು ಕೇಳುವವರೇ ಇರಲಿಲ್ಲ. ಆದರೆ ಶನಿವಾರ ಉತ್ತಮ ಗುಣಮಟ್ಟದ ವಿವಿಧ ಬಣ್ಣಗಳ ಬಿಡಿ ಸೇವಂತಿಗೆ ಹೂವು ಪ್ರತಿ ಕೇಜಿಗೆ 30ರಿಂದ 40 ರೂ.ವರೆಗೂ ಖರೀದಿಯಾಯಿತು ಎನ್ನುತ್ತಾರೆ ಹೂವಿನ ವ್ಯಾಪಾರಿ ಎಳಂಗೋವನ್.
ಮಲ್ಲಿಗೆ ಮೊಳಕ್ಕೆ 50 ರೂ.
ಈ ಹಿಂದೆ ಉತ್ತಮ ಗುಣಮಟ್ಟದ ಮಲ್ಲಿಗೆ ಮೊಗ್ಗು ಪ್ರತಿ ಕೆ.ಜಿಗೆ 400 ರೂ.ದಿಂದ 500 ರೂ.ವರೆಗೂ ಖರೀದಿಯಾಗುತ್ತಿತ್ತು. ಆದರೆ ಶನಿವಾರ ತಮಿಳುನಾಡು ಭಾಗದ ಶ್ರೇಷ್ಠ ದರ್ಜೆಯ ಮಲ್ಲಿಗೆ ಮೊಗ್ಗು ಕೇಜಿಗೆ 600ರಿಂದ 700 ರೂ.ವರೆಗೂ ಮಾರಾಟವಾಯಿತು. ಮಲ್ಲಿಗೆ ಮೊಳಕ್ಕೆ 50 ರೂ.ವರೆಗೆ, ವಿವಿಧ ಬಗೆಯ ಸೇವಂತಿಗೆ ಬಿಡಿ ಹೂವು ಮಾರಿಗೆ 70 ರೂ. ನಿಂದ 80 ರೂ.ವರೆಗೂ ಖರೀದಿಯಾಗಿದೆ.
ಸಾವಿರ ರೂ.ದಾಟಿದ ಮಲ್ಲಿಗೆ ಮೊಗ್ಗಿನ ಹಾರ
ದೊಡ್ಡ ಗಾತ್ರದ ಗುಲಾಬಿ ಹೂವಿನ ಹಾರಕ್ಕೂ ಬೇಡಿಕೆ ಉಂಟಾಗಿದೆ. ಕೆಂಪು ಗುಲಾಬಿ ಬಣ್ಣದ ದೊಡ್ಡಗಾತ್ರದ ಹೂವಿನ ಹಾರ 1,400 ರೂ. ವರೆಗೆ ಖರೀದಿಯಾಗಿದೆ. ಹಾಗೆಯೇ ಮಲ್ಲಿಗೆ ಮೊಗ್ಗಿನ ಹಾರಕ್ಕೂ ಡಿಮ್ಯಾಂಡ್ ಬಂದಿದೆ. ಮಲ್ಲಿಗೆ ಹೂವಿನ ಹಾರ 1,300ರಿಂದ 1,400 ರೂ.ವರೆಗೆ ಮಾರಾಟವಾಯಿತು. ಮಲ್ಲಿಗೆ ಹೂವಿನ ದಿಂಡು 120ರೂ.ಗೆ, ಸುಗಂಧರಾಜ ಕೆ.ಜಿ 100 ರೂ.ಗೆ ಜನರು ಖರೀದಿ ಮಾಡಿದರು.
ಕಳೆದ ಒಂದೆರಡು ತಿಂಗಳಿಂದ ಹೂವಿಗೆ ಹೆಚ್ಚಿನ ಬೇಡಿಕೆ ಇರಲಿಲ್ಲ. ಆದರೆ, ದಸರಾ ಹಬ್ಬದ ಸೀಜನ್ ಆರಂಭವಾಗಿರುವುದರಿಂದ ಮಲ್ಲಿಗೆ, ಕನಕಾಂಬರ ಮತ್ತಿತರರ ಹೂವುಗಳಿಗೆ ಬೇಡಿಕೆ ಉಂಟಾಗಿದೆ ಎಂದು ಹೂವಿನ ವ್ಯಾಪಾರಿ ಮುನಿಯಮ್ಮ ಹೇಳುತ್ತಾರೆ. ಹಬ್ಬದ ದಿನಗಳಲ್ಲಿ ಎಲ್ಲ ಹೂವಿನ ಬೆಲೆಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುತ್ತಾರೆ.
ಬೆಂಗಳೂರು ಮಾರುಕಟ್ಟೆಗೆ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಂದ ರೈತರು ಹೂವು ಪೂರೈಸುತ್ತಾರೆ. ತಮಿಳುನಾಡಿನಿಂದಲೂ ಮಲ್ಲಿಗೆ ಮೊಗ್ಗು ಪೂರೈಕೆ ಆಗುತ್ತಿದೆ. ಕಳೆದ ಹಲವು ದಿನಗಳಿಂದ ಹೂವಿನ ಬೆಳೆಯಲ್ಲಿ ಅಂತಹ ಹೆಚ್ಚಳ ಕಂಡು ಬರಲಿಲ್ಲ. ಆದರೆ, ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಈಗ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಸೇರಿ ಇನ್ನಿತರ ಹೂವಿನ ಬೆಲೆಯಲ್ಲಿ ಹೆಚ್ಚಳವಾಗಿದೆ.
– ಮಂಜುನಾಥ್,
ಹೋಲ್‌ಸೇಲ್ ಹೂವಿನ ವ್ಯಾಪಾರಿ
– ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.