ಬೆಲ್ಲದ ಜತೆ ಈರುಳ್ಳಿ ಸೇವಿಸಿ, ಡೆಂಘಿಯಿಂದ ದೂರಾಗಿ
Team Udayavani, Jul 26, 2017, 7:05 AM IST
ಬೆಂಗಳೂರು: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವುದರಿಂದ ಡೆಂ à ಜ್ವರದ ನಿಯಂತ್ರಣ ಮಾಡಬಹುದು ಎಂಬ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಹೆಸರಿನೊಂದಿಗೆ ರವಾನೆಯಾಗುತ್ತಿದೆ. ಹಾಗಾದರೆ, ಈ ಸಂದೇಶ ನಿಜಕ್ಕೂ ಅರಿವು ಮೂಡಿಸುವಂಥದ್ದೇ? ಆಯುರ್ವೇದಿಕ್ ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಮತ್ತು ಆಯುಷ್ ಇಲಾಖೆ ಡೆಂ à ಜ್ವರದ ನಿಯಂತ್ರಣದ ಬಗ್ಗೆ ಹೇಳಿರುವುದು ಏನು ಎಂಬಿತ್ಯಾದಿ ಎಲ್ಲಾ ವಿಷಯವನ್ನು ಒಳಗೊಂಡಿರುವ ಸಂಪೂರ್ಣ ವಿವರ ಇಲ್ಲಿದೆ.
ಸಹಾಯಕಾರಿ ಸಂದೇಶ: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಡೆಂ à ಜ್ವರದ ಪ್ರಮಾಣ ಅಧಿಕವಾಗುತ್ತಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಮೊದಲಾದ ಜಿಲ್ಲೆಗಳಲ್ಲಿ ಡೆಂ à ಜ್ವರದಿಂದ ಸಾವು ಕೂಡ ಸಂಭವಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಡೆಂ àಗೆ ಅಲೋಪಥಿ ಔಷಧಕ್ಕಿಂತ ಆಯುರ್ವೇದ ಔಷಧವೇ ಉತ್ತಮ ಮತ್ತು ಜನರು ಸುಲಭವಾಗಿ ಇದನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ನಿತ್ಯವೂ ಹೊಸ ಸಂಶೋಧನೆಗೆ ಮುಂದಾಗುತ್ತಿದೆ.
ಡೆಂ à ಜ್ವರದಿಂದ ಬಲುತ್ತಿರುವ ವ್ಯಕ್ತಿ ಪರಂಗಿ ಎಲೆ ಕಷಾಯ ಕುಡಿಯುವುದರಿಂದ ಪ್ಲೇಟ್ಲೆಟ್‌ಗಳನ್ನು ಸ್ಥಿರವಾಗಿಟ್ಟುಕೊಳ್ಳಬಹುದು ಎಂಬುದು ಸುದ್ದಿಯಾಗಿತ್ತು. ಕಷಾಯ ಕುಡಿದು ಅನೇಕರು ಡೆಂ àಯಿಂದ ದೂರಾಗಿದ್ದಾರೆ.
ಈಗಲೂ ಅದನ್ನೇ ಅನುಸರಿಸುವುದು ತಪ್ಪಲ್ಲ. ಈರುಳ್ಳಿ ಬೆಲ್ಲದ ಕಾಂಬಿನೇಷನ್: ಬೆಲ್ಲವನ್ನು ಹಸಿಯಾದ ಸಣ್ಣ ಈರುಳ್ಳಿಯೊಂದಿಗೆ ಸೇವಿಸುವು ದರಿಂದ ಡೆಂ à ಜ್ವರ ನಿಯಂತ್ರಣ ಮಾಡಬಹುದು.
ಆಯುರ್ವೇದ ಸೇರಿದಂತೆ ಎಲ್ಲಾ ರೀತಿಯ ಪರೀಕ್ಷೆಗೆ ಒಳಪಡಿಸಿದ ನಂತರ ಬಂದಿರುವ ಫಲಿತಾಂಶದ ಆಧಾರದಲ್ಲಿ ಆರೋಗ್ಯ ಇಲಾಖೆ ಈ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 1400ಕ್ಕೂ ಅಧಿಕ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯವೂ ಈ ಸಂಬಂಧ ಹೊಸ ಸಂಶೋಧನೆ ನಡೆಯುತ್ತಲೇ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಯುಷ್ ಮದ್ದು
ಆಯುಷ್ ಇಲಾಖೆಯು ಡೆಂ à ಜ್ವರದ ಬಗ್ಗೆ ಹೊರಡಿಸಿರುವ ಮಾಹಿತಿ ಪತ್ರದಲ್ಲಿ, ಡೆಂ à ಜ್ವರಕ್ಕೆ ಮನೆಯ ಸುತ್ತಮುತ್ತಲು
ಬೆಳೆಯುವ ಗಿಡಮೂಲೀಕೆಗಳಿಂದಲೇ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಿದ್ದಾರೆ. ಬೇವಿನ ಚಕ್ಕೆ, ಹೂವರಿಸಿಯ ಚಕ್ಕೆ, ಅರಿಶಿನ, ಬಿಳಿಸಾಸಿವೆ, ಹೊಂಗೆಚಕ್ಕೆ, ಬೆಳ್ಳುಳ್ಳಿ ಸಿಪ್ಪೆ ಇವುಗಳನ್ನು ಒಣಗಿಸಿ ಪುಡಿಮಾಡಿ, ಕರ್ಪೂರ ಹಾಗೂ ನೀಲಗಿರಿ ಎಣ್ಣೆಯಲ್ಲಿ ಸೇರಿಸಿ ಸೊಳ್ಳೆ ಓಡಿಸಲು ಧೂಪ ಹಾಕಬಹುದು. ಹಾಗೆಯೇ
ಪರಂಗಿ ಎಲೆಯ ಕಷಾಯ, ಅಮೃತ ಬಳ್ಳಿಯ ಕಾಂಡ, ಸೊಗದೆ ಬೇರು, ಕೊನ್ನಾರಿ ಗಡ್ಡೆ, ಲಾವಂಚ ಮತ್ತು ಒಣ ಶುಂಠಿ ಸೇರಿಸಿ ಕಷಾಯ ಮಾಡಿ ಕುಡಿಯುವ ಬಗ್ಗೆಯೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.