ಈ ಬಾರಿ ವಿವಿಪ್ಯಾಟ್ ಬಳಕೆ; ರಾಜ್ಯ ಚುನಾವಣಾಧಿಕಾರಿ ಹೇಳಿದ್ದೇನು?
Team Udayavani, Feb 28, 2018, 3:06 PM IST
ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನದ ವೇಳೆ ಎಲೆಕ್ಟ್ರಾನಿಕ್ ಮತಯಂತ್ರದ ಜತೆಗೆ ವಿವಿಪ್ಯಾಟ್(ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್) ಯಂತ್ರವನ್ನು ಬಳಸುತ್ತೇವೆ. ಮತದಾರರು ಯಾರಿಗೆ ಮತ ನೀಡಿದ್ದೇವೆ ಎಂದು 6ಸೆಕೆಂಡ್ ನೋಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್(ಇದನ್ನೂ ಓದಿ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಸಂದರ್ಶನ) ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಚಲಾವಣೆ ಬಗ್ಗೆ ಅನುಮಾನ ಬಂದರೆ ಮತದಾರರು ಆಕ್ಷೇಪಣೆ ಸಲ್ಲಿಸಬಹುದು. ಆದರೆ ಯಾವುದೇ ದೋಷಗಳಿಲ್ಲದಿದ್ದರೆ ಆಕ್ಷೇಪಣೆ ಸಲ್ಲಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಏನಿದು ಮತದಾರ ದೃಢೀಕರಣ ಚೀಟಿ (ವಿವಿಪ್ಯಾಟ್)?
ಇವಿಎಂಗಳ ಜೊತೆಗೆ ಈಗ ವಿವಿಪ್ಯಾಟ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಂದರೆ, ಯಾರೇ ಇವಿಎಂನಲ್ಲಿ ಮತಚಲಾಯಿಸಿದರೆ, ಅದಕ್ಕೆ ಹೊಂದಿಕೊಂಡಂತೆ ಒಂದು ವಿವಿಪ್ಯಾಟ್ ಸಹ ಇರುತ್ತದೆ. ಯಾರಿಗೆ ಮತ ಹೋಗಿದೆ ಅನ್ನುವ ಚೀಟಿ ಅದರಲ್ಲಿ ಬರುತ್ತದೆ. ಆರು ಸೆಕೆಂಡ್ ಆ ಚೀಟಿ ಮತದಾರನಿಗೆ ಕಾಣಲಿದೆ. ಅದರಲ್ಲಿ ತನ್ನ ಮತವನ್ನು ಆತ ದೃಢೀಕರಿಸಿಕೊಳ್ಳಬಹುದು. ಆ ಮತದಾರ ದೃಢೀಕರಣ ಚೀಟಿ ಐದು ವರ್ಷದವರೆಗೆ ಭದ್ರವಾಗಿಡಲಾಗುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ಇವಿಎಂಗಳ ಜೊತೆಗೆ ವಿವಿಪ್ಯಾಟ್‌ಗಳಲ್ಲಿನ ಚೀಟಿಗಳ ಎಣಿಕೆ ಸಹ ಮಾಡಲಾಗುತ್ತದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳಲ್ಲಿ ಇದರ ಪ್ರಯೋಗ ಮಾಡಲಾಗಿದ್ದು, ಶೇ.100ರಷ್ಟು ಅದು ಯಶಸ್ವಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.