ನ್ಯಾಯಾಲಯದ ತೀರ್ಪು ಪ್ರಕಟವಾಗುವವರೆಗೆ ಹಾಲಿ ನಿಯಮ ಮುಂದುವರಿಕೆ: ಸಚಿವ ಬಿ.ಸಿ. ನಾಗೇಶ್
ಹಿಜಾಬ್: ಯಥಾಸ್ಥಿತಿ
Team Udayavani, Feb 5, 2022, 7:05 AM IST
ಬೆಂಗಳೂರು: ವಿದ್ಯಾರ್ಥಿನಿಯರ ಹಿಜಾಬ್ ಪ್ರಕರಣ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಗಳ ತಲುಪಿದೆ. ಪ್ರಕರಣಕ್ಕೆ ರಾಜಕೀಯ ತಿರುವು ಸಿಕ್ಕಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ವಾಕ್ಸಮರ ಆರಂಭಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು, ಸಿಎಂ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಥಾಸ್ಥಿತಿ (ತರಗತಿಗೆ ಸಮವಸ್ತ್ರದಲ್ಲಿ ಹಾಜರಾಗುವುದು) ಕಾಯ್ದುಕೊಳ್ಳಬೇಕು. ಹೈಕೋರ್ಟ್ ಆದೇಶ ಹೊರಬಿದ್ದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಕಾನೂನು ತಂಡದ ಜತೆ ಸಿಎಂ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದು ನ್ಯಾಯಾಲಯದಲ್ಲಿ ಸರಕಾರದ ನಿಲುವು ತಿಳಿಸುವಂತೆ ಸೂಚಿಸಿದ್ದಾರೆ ಎಂದರು
ಆವರಣದೊಳಗೆ ಸಮವಸ್ತ್ರ ಕಡ್ಡಾಯ
ಕಾಲೇಜಿನ ಕಾಂಪೌಂಡ್‌ವರೆಗೂ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬರಬಹುದು. ಆವರಣದೊಳಗೆ ಕಾಲೇಜು ಆಡಳಿತ ಮಂಡಳಿ ನಿಗದಿ ಮಾಡಿರುವ ಸಮವಸ್ತ್ರ ಧರಿಸುವುದು ಕಡ್ಡಾಯ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರವೇ ನಿಯಮಗಳನ್ನು ರೂಪಿಸಿ ಶಾಲಾಭಿವೃದ್ಧಿ ಮಂಡಳಿ ಮತ್ತು ನಿರ್ವಹಣ ಸಮಿತಿ(ಎಸ್‌ಡಿಎಂಸಿ) ರಚಿಸಲಾಗಿದೆ ಹಾಗೂ ಸಮವಸ್ತ್ರಗಳನ್ನು ರೂಪಿಸಲಾಗಿದೆ. ಒಂದೂವರೆ ವರ್ಷ ದಿಂದ ಸಮವಸ್ತ್ರ ನಿಯಮ ಪಾಲಿಸಲಾಗುತ್ತಿದ್ದು, ಜನವರಿ ಯಿಂದ ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ ಎಂದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದಂಕಿಗೆ ಇಳಿದ ಕೋವಿಡ್ ಪಾಸಿಟಿವಿಟಿ ರೇಟ್: ಇಂದು 53 ಮಂದಿ ಬಲಿ
ಸಮವಸ್ತ್ರ ಕುರಿತು ಕಾಯ್ದೆ ಏನು ಹೇಳುತ್ತದೆ?
ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮ-1995ರ (ವರ್ಗೀಕರಣ, ನಿಯಂತ್ರಣ, ಪಠ್ಯಕ್ರಮ ಮತ್ತು ಇತರ ಕಾಯ್ದೆ) ಪ್ರಕಾರ, ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸಹಿತ ಆಯಾ ಶಿಕ್ಷಣ ಸಂಸ್ಥೆಗಳು ಸಮವಸ್ತ್ರವನ್ನು ನಿಗದಿ ಮಾಡುವ ಅಧಿಕಾರ ಹೊಂದಿರುತ್ತವೆ. ಒಂದು ಬಾರಿ ನಿಗದಿ ಮಾಡಿದ ಸಮವಸ್ತ್ರವನ್ನು ಐದು ವರ್ಷಗಳ ಕಾಲ ಪಾಲಿಸ
ಬೇಕು. ಒಂದು ವೇಳೆ ಬದಲಾವಣೆ ಮಾಡುವುದಾದರೆ, ಕನಿಷ್ಠ ಒಂದು ವರ್ಷ ಮೊದಲೇ ಪಾಲಕ- ಪೋಷಕರಿಗೆ ಮಾಹಿತಿ ನೀಡಬೇಕು. ಘಟನೆ ಹಿಂದೆ ಕಾಣದ ಕೈಗಳಿವೆ ಎಂಬುದು ಸ್ಪಷ್ಟವಾಗುತ್ತದೆ. ಮುಗ್ಧ ಮಕ್ಕಳನ್ನು ಬಳಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.
– ಬಿ.ಸಿ. ನಾಗೇಶ್, ಶಿಕ್ಷಣ ಸಚಿವ
ಹಿಜಾಬ್ ಇಂದು-ನಿನ್ನೆಯದಲ್ಲ. ಆದರೆ ಕೇಸರಿ ಶಾಲು ಹಾಕಿಕೊಂಡು ಹೋಗಿರುವ ಉದ್ದೇಶವೇನು? ಇದಕ್ಕೆಲ್ಲ ಸರಕಾರ ಕುಮ್ಮಕ್ಕು ನೀಡಬಾರದು. ಶಿಕ್ಷಣದಲ್ಲಿ ರಾಜಕೀಯ ಬೆರೆಸಬಾರದು. ಚುನಾವಣೆ ಹತ್ತಿರ ಬಂದಾಗ ಇಂತಹ ವಿಚಾರ ಪ್ರಸ್ತಾವ ಮಾಡುತ್ತಾರೆ.
-ಸಿದ್ದರಾಮಯ್ಯ, ವಿಪಕ್ಷ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.