ಅಹಂಕಾರಿ ಸಿಎಂ, ಸರ್ಕಾರ
Team Udayavani, May 9, 2018, 6:00 AM IST
ಕೊಪ್ಪಳ/ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಮೂರು ದಿನ ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನ ವೈಖರಿ ಚುರುಕುಗೊಳಿಸಿದ್ದು, ಕರ್ನಾಟಕದಲ್ಲಿ ಅಹಂಕಾರದ ಸರ್ಕಾರ ಮತ್ತು ಅಹಂಕಾರಿ ಮುಖ್ಯಮಂತ್ರಿ ಇದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಕೊಪ್ಪಳದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾವು ಕಾಮ್‌ಧಾರಿಗಳಾಗಿದ್ದರೆ, ಅವರು ನಾಮ್
ಧಾರಿಗಳಾಗಿದ್ದಾರೆ ಎಂದು ಮತ್ತೂಮ್ಮೆ ಟೀಕಿಸಿದರು. ನಾವು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್‌ನಂತೆ ನಡೆದರೆ, ಕಾಂಗ್ರೆಸ್ ನವರು ತಮ್ಮ ಕಾರ್ಯ ಸಾಧನೆಗಾಗಿ ದೇಶ, ರಾಜ್ಯ, ಜಾತಿ, ಪಂಥವನ್ನು ಒಡೆಯುತ್ತಾರೆ. ಮನೆತನಗಳನ್ನು ಒಡೆದಿದ್ದಾರೆ. ಅಂತಹ ಕುತಂತ್ರ, ವಿಚಿತ್ರ ಮನಸ್ಸಿನ ಕಾಂಗ್ರೆಸ್ ತೊಲಗಬೇಕಿದೆ ಎಂದರು.
ಸೋಲಿಗೆ ಕಾರಣ ಹುಡುಕುತ್ತಿದೆ: ಅತ್ತ ವಿಜಯಪುರದಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಕಾಂಗ್ರೆಸ್ ಅನ್ನು
ಕಿತ್ತೂಗೆಯಬೇಕಿದೆ ಎಂದರು. ಅಲ್ಲದೆ ಈಗಾಗಲೇ ಸೋಲಿನ ಅರಿವಾಗಿದ್ದು ಕಾರಣಗಳನ್ನು ಹುಡುಕುತ್ತಿದೆ. ಇದಕ್ಕಾಗಿಯೇ ಇವಿಎಂಗಳ ಮೇಲೆ ಮತ್ತೆ ಆರೋಪ ಮಾಡಲಾಗುತ್ತಿದೆ ಎಂದು ಛೇಡಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬ
ಸಚಿವರ ಹೆಸರು ಹೇಳಿ ಎಂದು ಸಾರ್ವಜನಿಕರನ್ನು ಕೇಳಿದ ಮೋದಿ ಅವರು, ನಿಮ್ಮ ಜಿಲ್ಲೆಯ ನೀರಾವರಿ ಸಚಿವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಯಾರ್ಯಾರಿಗೆ ಗುತ್ತಿಗೆ ನೀಡಿದ್ದಾರೆ, ಯಾರ್ಯಾರ ತಿಜೋರಿಯಲ್ಲಿ ಎಷ್ಟೆಷ್ಟು ಹಣ ಇಟ್ಟಿದ್ದಾರೆ ಎಂದೆಲ್ಲ ನಮಗೆ ಗೊತ್ತು. ಇವರು ಗುತ್ತಿಗೆ ಪಡೆದ ಗುತ್ತಿಗೆದಾರರೆಲ್ಲ ಹೆಲಿಕಾಪ್ಟರ್‌ನಲ್ಲಿ ಸುತ್ತಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಸಿದ್ದುರನ್ನು ಮನೆಗೆ ಕಳುಹಿಸಿ
ಈ ಮಧ್ಯೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು, ಮೇ 15 ರಂದು ರಾಜ್ಯದಲ್ಲಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಿ ಎಂದು ಆಗ್ರಹಿಸಿದರು. ಈ ಮೂಲಕ ಪ್ರಧಾನಿ ಮೋದಿ ಅವರ ಕೈಯನ್ನು ಭದ್ರಗೊಳಿಸಿ ಎಂದರು. ಈ ಸರ್ಕಾರದ ಅವಧಿಯಲ್ಲಿ ಹಿಂದೂಗಳ ಹತ್ಯೆಯಾಗುತ್ತಿದ್ದು ಇದುವರೆಗೂ ಯಾರೊಬ್ಬರದ್ದೂ ಬಂಧನವಾ ಗಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೇರುತ್ತಿ ದ್ದಂತೆ, ತಪ್ಪಿತಸ್ಥ ರನ್ನು ಪತ್ತೆಹಚ್ಚಲಾಗುವುದು ಎಂದು ಭರವಸೆ ನೀಡಿದರು.
24ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿ ದ್ದರೂ ಜಿಹಾದಿ ಶಕ್ತಿಗಳನ್ನು ಮಟ್ಟ ಹಾಕಲು ಸರ್ಕಾರ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ, ಮಾμಯಾ, ಗೂಂಡಾ ಗಿರಿಗಳ ಹುಟ್ಟಡಗಿಸಲಾಗಿದೆ.
● ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…
Bengaluru: ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ
Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು
Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್
Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್ ತಾತ್ಕಾಲಿಕ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.