ಕರ್ನಾಟಕದ ಹಣ ಬಲದ್ದೇ ಚಿಂತೆ! ಚುನಾವಣ ಆಯೋಗ ಕಳವಳ
Team Udayavani, Mar 12, 2023, 7:56 AM IST
ಬೆಂಗಳೂರು: ಕರ್ನಾಟಕದಲ್ಲಿನ “ಹಣ ಬಲ’ ನಮ್ಮ ಪಾಲಿಗೆ ಬಹಳ ಕಳವಳದ ವಿಷಯ, ಗಂಭೀರ ಸವಾ ಲಾಗಿದೆ ಎಂದು ಕೇಂದ್ರ ಚುನಾವಣ ಆಯೋಗದ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಹೇಳಿದರು.
ಉಚಿತ ಉಡುಗೊರೆಗಳ ಹಂಚಿಕೆ, ಚುನಾವಣ ಆಮಿಷ ಗಳನ್ನು ಮಟ್ಟ ಹಾಕಲು “ಮುಹೂರ್ತ’ಕ್ಕಾಗಿ ಕಾಯಬೇಡಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ನಿರೂಪಣೆ (ನರೇಟಿವ್) ಮತ್ತು ಅಭಿಪ್ರಾಯಗಳಿಗೆ ಕಡಿವಾಣ ಹಾಕುವುದೂ ನಮ್ಮ ಮುಂದಿರುವ ದೊಡ್ಡ ಸವಾಲು ಎಂದೂ ಹೇಳಿದರು.
ಚುನಾವಣೆ ಸಿದ್ಧತೆಗಳ ಪರಿಶೀಲನೆಗೆ ರಾಜ್ಯಕ್ಕೆ 3 ದಿನಗಳ ಪ್ರವಾಸ ಕೈಗೊಂಡಿದ್ದ ಅವರು ಶನಿವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನಗರ ಮತದಾರರು ಮತ್ತು ಯುವ ಮತದಾರರ ನಿರಾಸಕ್ತಿ ಬಗ್ಗೆ ಆಯೋಗಕ್ಕೆ ಕಳವಳವಿದೆ. ಸಾಮಾಜಿಕ ಮಾಧ್ಯಮಗಳ ಸುಳ್ಳು ವದಂತಿಗಳಿಗೆ ಕಡಿವಾಣ ಹಾಕಲು ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಟಿಎಂಗಳ ಮೇಲೂ ಕಣ್ಣು
ಅಕ್ರಮ ಹಣ ಚಲಾವಣೆಗೆ ಕಡಿವಾಣ ಹಾಕಲು ಸಂಜೆ 5ರಿಂದ ಬೆಳಗ್ಗೆ 10ರ ವರೆಗೆ ಎಟಿಎಂ ಯಂತ್ರಗಳಲ್ಲಿ ನಗದು ಹಾಕುವುದನ್ನು ನಿರ್ಬಂಧಿಸಲಾಗುತ್ತದೆ. ಸಂದೇಹಾಸ್ಪದ ವಹಿವಾಟುಗಳ ಬಗ್ಗೆ ನಿಗಾ ಇಡುವಂತೆ ಎಲ್ಲ ಬ್ಯಾಂಕುಗಳಿಗೆ ತಾಕೀತು ಮಾಡಲಾಗಿದೆ. ರಾಜ್ಯಕ್ಕೆ ಮತ್ತೂಂದು ರಾಜ್ಯದಿಂದ ಸಾಮಾನ್ಯವಾಗಿ ಬರುವ ಎಲೆಕ್ಟ್ರಾನಿಕ್ ಉಪಕರಣಗಳು ಸಹಿತ ಸಾಮಾನ್ಯ ಬಳಕೆಯ ವಸ್ತುಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಪರಿಶೀಲಿಸಲಾಗುವುದು. ಆಧುನಿಕ ಎಲೆಕ್ಟ್ರಾನಿಕ್ ವಿಧಾನದ ಹಣಕಾಸಿನ ವಹಿವಾಟುಗಳ ಮೇಲೂ ಕಣ್ಣಿಡಲಾಗುತ್ತದೆ ಎಂದರು.
ಕಟ್ಟುನಿಟ್ಟಿನ ನಿರ್ದೇಶನ
ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ “ಹಣ ಬಲ’ಕ್ಕೆ ಕಡಿವಾಣ ಹಾಕಲು ರಾಜ್ಯ ಪೊಲೀಸರು, ಕಂದಾಯ ಗುಪ್ತಚರ ನಿರ್ದೇಶನಾಲಯ, ರಾಜ್ಯ ಜಿಎಸ್‌ಟಿ ವಿಭಾಗ, ಕೇಂದ್ರ ಜಿಎಸ್‌ಟಿ ವಿಭಾಗ, ಕರಾವಳಿ ಕಾವಲು ಪಡೆ, ಇಡಿ, ಏರ್‌ಪೋರ್ಟ್, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿ (ಸಿಬಿಐಸಿ) ಸಹಿತ ಚುನಾವಣ ನೀತಿ ಸಂಹಿತೆ ಜಾರಿಗೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತದೆ. ಅಕ್ರಮ ಮತ್ತು ಅನಿಯಮಿತ ಉಚಿತ ಉಡುಗೊರೆಗಳು ಹಾಗೂ ಹಣದ ಬಳಕೆ ಮತ್ತು ಒಳಹರಿವಿನ ಮೇಲೆ ಕಣ್ಗಾವಲು ಇಟ್ಟು ಅವುಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದರು.
ಆಯೋಗದ ಪರಮಾಧಿಕಾರ
ಚುನಾವಣೆ ಯಾವಾಗ ಮತ್ತು ಎಷ್ಟು ಹಂತಗಳಲ್ಲಿ ನಡೆಸಬೇಕು ಎಂದು ನಿರ್ಧರಿಸಲು ಪರಮಾಧಿಕಾರ ಇರುವುದು ಚುನಾವಣ ಆಯೋಗಕ್ಕೆ ಮಾತ್ರ. ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಸಿಇಸಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯನ್ನು 3 ಹಂತಗಳಲ್ಲಿ ನಡೆಸುವಂತೆ ಬಿಜೆಪಿ ಮನವಿ ಮಾಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೆ ದಿನಾಂಕ ಮತ್ತು ಹಂತಗಳನ್ನು ನಿಗದಿಪಡಿಸಲು ರಾಜ್ಯದ ಭೌಗೋಳಿಕ ವಿಸ್ತೀರ್ಣ, ಚುನಾವಣ ಸಿಬಂದಿ ಮತ್ತು ಭದ್ರತಾ ಪಡೆಗಳ ಲಭ್ಯತೆ, ಪರೀಕ್ಷೆಗಳು, ಹಬ್ಬ-ಜಾತ್ರೆಗಳು, ಪ್ರಕೃತಿ ವಿಕೋಪಗಳು, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ವಿದ್ಯಮಾನಗಳು ಇತ್ಯಾದಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಉಳಿದಂತೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳುವುದು ಸಾಮಾನ್ಯ ಪ್ರಕ್ರಿಯೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕು ಎಂದೂ ಅಭಿಪ್ರಾಯಗಳು ಬಂದಿವೆ. ಈ ಎಲ್ಲ ಅಂಶಗಳನ್ನು ಗಮನಿಸಿ ಆಯೋಗ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಾಜೀವ್ ಕುಮಾರ್ ಹೇಳಿದರು.
ಮುಹೂರ್ತಕ್ಕೆ ಕಾಯಬೇಡಿ
ರಾಜ್ಯದಲ್ಲಿನ ಚುನಾವಣ ಸಿದ್ಧತೆಗಳು ಸಮಾಧಾನ ತಂದಿವೆಯೇ ಎಂದು ಕೇಳಿದ ಪ್ರಶ್ನೆಗೆ ರಾಜೀವ್ ಕುಮಾರ್ ಉತ್ತರಿಸಿ, ಮತಗಟ್ಟೆ ಸೇರಿದಂತೆ ಮೂಲಸೌಕರ್ಯಗ ಳನ್ನು ಸಿದ್ಧಪಡಿಸುವ ಕೆಲಸ ಪೂರ್ಣವಾಗಿದೆ. ಆದರೆ ಉಡುಗೊರೆ, ಆಮಿಷ ತಡೆಯುವಲ್ಲಿ ಸ್ವಲ್ಪ ಹಿಂದೆ ಇದ್ದೇವೆ. ಇನ್ನೂ ನೀತಿ ಸಂಹಿತೆ ಜಾರಿ ಆಗಿಲ್ಲ ಎಂಬ ಭಾವನೆಯಿಂದ ಕೆಲವು ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಿಲ್ಲ. ಇದಕ್ಕಾಗಿ “ಮುಹೂರ್ತ’ಕ್ಕಾಗಿ ಕಾಯಬೇಡಿ, ಕಾನೂನಿನ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉಡುಗೊರೆ, ಹಣ ಹಂಚಿಕೆ, ಆಮಿಷಗಳಿಗೆ ಕಡಿವಾಣ
ಹಾಕುವಂತೆ ಸಂಬಂಧಪಟ್ಟ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.