ಬಾಹ್ಯ ಆಡಳಿತ ಸಹಿಸೆವು: ಚುನಾವಣಾ ಆಯುಕ್ತ ರಾವತ್ ಎಚ್ಚರಿಕೆ
Team Udayavani, Apr 7, 2018, 6:00 AM IST
ಬೆಂಗಳೂರು: “ಸಂವಿಧಾನೇತರ ವ್ಯಕ್ತಿಗಳನ್ನು’ ಚುನಾವಣಾ ಆಡಳಿತ ಯಂತ್ರದಿಂದ ದೂರ ಇಡುವಂತೆ ರಾಜ್ಯ ಆಡಳಿತಕ್ಕೆ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಅಲ್ಲದೇ, ಚುನಾವಣಾ ಕರ್ತವ್ಯದಲ್ಲಿರುವ
ಇಲಾಖೆ ಅಥವಾ ಅಧಿಕಾರಿಗಳು ಅಂತಹ “ಸಂವಿಧಾನೇತರ ವ್ಯಕ್ತಿಗಳೊಂದಿಗೆ’ ಸಂಬಂಧವಿಟ್ಟು ಕೊಂಡರೆ ಅಥವಾ ಸಂಪರ್ಕದಲ್ಲಿದ್ದರೆ
ಆಯೋಗ ಸಹಿಸುವುದಿಲ್ಲ. ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದೂ ರಾವತ್ ಎಚ್ಚರಿಕೆ ನೀಡಿದರು.
3 ದಿನಗಳ ಚುನಾವಣಾ ಪೂರ್ವ ಸಿದ್ಧತಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಕೇಳಿದ್ದಕ್ಕೆ, “ದೇವೇಗೌಡರು ಅರೋಪ ಮಾಡಿದ್ದು ನಿಜ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಸತ್ಯಾಂಶ ಸಂಗ್ರಹಿಸಲಾಗುತ್ತಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಹುರುಳಿಲ್ಲದ ಆರೋಪ: ರಾಜ್ಯದಲ್ಲಿ 15ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ರಾವತ್, ಆಯೋಗದ ಮಾರ್ಗಸೂಚಿ ಪ್ರಕಾರ ಹೆಸರುಗಳನ್ನು ತೆಗೆದು ಹಾಕಲು ಅವಕಾಶವಿಲ್ಲ. ಅರ್ಜಿ ನಮೂನೆ 7 ಸಲ್ಲಿಕೆಯಾದರೆ, ಅದನ್ನು ಪರಿಶೀಲಿಸಿ ತೆಗೆದು ಹಾಕಲಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಸ್ಥಳಾಂತರಗೊಂಡ 4.88 ಲಕ್ಷ, ಮೃತಪಟ್ಟ 3.67 ಲಕ್ಷ ಎರಡು ಬಾರಿ ಸೇರಿಸಲ್ಪಟ್ಟ 61 ಸಾವಿರ ಸೇರಿ ಅಂತಿಮ ಪಟ್ಟಿಯಿಂದ
ಕೈಬಿಟ್ಟಿದ್ದೇ 9.17 ಲಕ್ಷ ಹೆಸರುಗಳು. ಹೀಗಿರುವಾಗ ಅಲ್ಪಸಂಖ್ಯಾತರನ್ನು ಕೈಬಿಡಲಾಗಿದೆ ಅನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.