ಅಸೆಂಬ್ಲಿಗೂ ಮುನ್ನವೇ ರಾಜ್ಯ ಸಭೆ ಚುನಾವಣೆ
Team Udayavani, Feb 24, 2018, 2:28 AM IST
ನವದೆಹಲಿ/ಬೆಂಗಳೂರು: ವಿಧಾನ ಸಭೆ ಚುನಾವಣೆಗೂ ಮುನ್ನವೇ ಕರ್ನಾಟಕದಲ್ಲಿ ಧುತ್ತನೇ ಮತ್ತೂಂದು ಹೈವೋಲ್ಟೆಜ್ ರಾಜ್ಯ ಸಭಾ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್ 23 ರಂದು ರಾಜ್ಯದ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಶುಕ್ರವಾರ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಏಪ್ರಿಲ್ ಮತ್ತು ಮೇನಲ್ಲಿ ನಿವೃತ್ತಿಯಾಗಲಿರುವವರ 58 ಸ್ಥಾನ ಭರ್ತಿ ಮಾಡಲು ಈ ಚುನಾವಣೆ ನಡೆಯಲಿದೆ. ಇದರ ಜತೆ ಕೇರಳದ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ ನಡೆಯಲಿದೆ. ಕರ್ನಾಟಕದಿಂದ ಸ್ವತಂತ್ರ ಸದಸ್ಯ ರಾಜೀವ್ ಚಂದ್ರಶೇಖರ್, ಬಿಜೆಪಿಯ ಆರ್. ರಾಮ ಕೃಷ್ಣ, ಬಸವ ರಾಜ ಪಾಟೀಲ್ ಸೇಡಂ ಮತ್ತು ಕಾಂಗ್ರೆಸ್‌ನ ರೆಹಮಾನ್ ಖಾನ್ ಏಪ್ರಿಲ್ 2 ರಂದು ನಿವೃತ್ತಿಯಾಗಲಿದ್ದಾರೆ. ಸದ್ಯದ ಲೆಕ್ಕಾಚಾರದ ಪ್ರಕಾರ, ಕಾಂಗ್ರೆ ಸ್ ಎರಡು, ಬಿಜೆಪಿ ಒಂದು ಮತ್ತು ಇನ್ನೊಂದು ಸ್ಥಾನಕ್ಕೆ ಪ್ರಬಲವಾದ ಪೈಪೋಟಿ ಇದೆ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್‌ನಲ್ಲಿ ಉಳಿಯುವ ಹೆಚ್ಚುವರಿ ಮತಗಳಿಂದ ಮತ್ತೂಬ್ಬರು ಆಯ್ಕೆಯಾಗಬಹುದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಖಾಲಿಯಾಗುವ ಒಂದು ಸ್ಥಾನದ ಜತೆಗೆ ಮತ್ತೂಂದು ಸ್ಥಾನಗಳಿಸಿ ಕೊಂಡರೆ, ಬಿಜೆಪಿ ಖಾಲಿಯಾಗುವ
ಎರಡರಲ್ಲಿ ಒಂದು ಸ್ಥಾನ ಕಳೆದುಕೊಳ್ಳಲಿದೆ. ಸದ್ಯ ಸ್ವತಂತ್ರ್ಯ ಸದಸ್ಯರಾಗಿರುವ ರಾಜೀವ್ ಚಂದ್ರ ಶೇಖರ್ ಅವರಿಂದ ತೆರವಾದ ಸ್ಥಾನಕ್ಕೆ ಯಾರು ಎಂಬ ಚರ್ಚೆ ಶುರುವಾಗಿದೆ. ವಿಶೇಷವೆಂದರೆ, ರಾಜ್ಯ ಸಭೆ ಚುನಾವಣೆ ಅಸೆಂಬ್ಲಿ ಚುನಾವಣೆಯ ಆಜು ಬಾಜಲ್ಲೇ ಬಂದಿರುವುದರಿಂದ ಅಡ್ಡ ಮತದಾನವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಅಲ್ಲದೆ ಈ ಚುನಾವಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಜೆಡಿಎಸ್‌ನಿಂದ ಆಚೆ ಕಾಲಿಟ್ಟಿರುವ ಶಾಸಕರು ಕಾಯುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಮೋದಿ ಸಂಪುಟ ಸದಸ್ಯರ ನಿವೃತ್ತಿ: ಮಾ.23 ರಂದು ಒಟ್ಟು 58 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರಲ್ಲಿ ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಸಚಿವರೇ ಕಣಕ್ಕಿಳಿಯಲಿದ್ದಾರೆ. ಅಂದರೆ, ಹಣ ಕಾಸು ಸಚಿವ ಅರುಣ್ ಜೇಟ್ಲಿ, ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾಬ್ಡೇಕರ್, ಆರೋಗ್ಯ ಸಚಿವ ಜೆ.ಪಿ. ನಡ್ಡಾ, ತಾವರ್‌ಚಂದ್ ಗೆಹೊಟ್ ಅವರ ಅವಧಿಯೂ ಏ.2 ರಂದೇ ಅಂತಿಮ ಗೊಳ್ಳಲಿದೆ. ಇನ್ನು ಕಾಂಗ್ರೆಸ್‌ನಿಂದ ಆಂಧ್ರದ ಚಿರಂಜೀವಿ, ರೇಣುಕಾ ಚೌಧರಿ, ರಾಜೀವ್ ಶುಕ್ಲಾ, ಉತ್ತರ ಪ್ರದೇಶದಲ್ಲಿ ಎಸ್ಪಿಯ ನರೇಶ್ ಅಗರ್ವಾಲ್, ಜಯಾ ಬಚ್ಚನ್, ಬಿಎಸ್‌ಪಿಯ ಮಾಯಾವತಿ ಅವಧಿಯೂ ಅಂತ್ಯಗೊಳ್ಳಲಿದೆ. ಇದೇ ವೇಳೆ ನಾಮನಿರ್ದೇಶಿತ ಸದಸ್ಯರಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ಹಿರಿಯ ನಟಿ ರೇಖಾ, ಆರ್ಥಿಕ ತಜ್ಞ ಅನು ಆಗ ಅವರ ಅವಧಿಯೂ ಏ.26 ರಂದು ಅಂತ್ಯವಾಗಲಿದೆ. ಈ ಮೂರು ಸ್ಥಾನಗಳೂ ಬಿಜೆಪಿ ಪಾಲಿಗೆ ಹೊಸದಾಗಿಸಿಗಲಿವೆ.
ಉತ್ತರ ಪ್ರದೇಶದಲ್ಲಿ 10, ಬಿಹಾರ, ಮಹಾರಾಷ್ಟ್ರದಲ್ಲಿ 6: ಈ ಚುನಾವಣೆ ಬಿಜೆಪಿ ಪಾಲಿಗೆ ಹೆಚ್ಚಿನ ಲಾಭ ತಂದು ಕೊಡಲಿದೆ ಎಂದೇ ಹೇಳಲಾಗುತ್ತಿದೆ. ಗುಜರಾತ್‌ನಲ್ಲಿ ಒಂದೆರಡು ಸ್ಥಾನ ಕಳೆದು ಕೊಂಡರೂ, ಉತ್ತರ ಪ್ರದೇಶದಲ್ಲಿ ಹೆಚ್ಚು ಅನುಕೂಲವಾಗಲಿದೆ. ಅಂತೆಯೇ ಬಿಹಾರದಲ್ಲೂ ಜೆಡಿಯು ಜತೆ ಮೈತ್ರಿ ಮಾಡಿ ಕೊಂಡಿರುವುದಿರಿಂದ ರಾಜ್ಯ ಸಭೆಯಲ್ಲಿ ಸ್ಥಾನ ಹೆಚ್ಚಿಸಿಕೊಳ್ಳಲು ಬಿಜೆಪಿಗೆ ಸಹಾಯವಾಗು ತ್ತದೆ.
ಎಲ್ಲೆಲ್ಲಿ ಎಷ್ಟು ಸ್ಥಾನ ಖಾಲಿ?: ಉತ್ತರ ಪ್ರದೇಶ – 10, ಬಿಹಾರ, ಮಹಾರಾಷ್ಟ್ರ -6, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ – 5, ಕರ್ನಾಟಕ, ಗುಜರಾತ್-4, ಆಂಧ್ರ, ತೆಲಂಗಾಣ, ಒಡಿಶಾ, ರಾಜಸ್ಥಾನ-3, ಜಾರ್ಖಂಡ್-2, ಛತ್ತೀಸ್‌ಗಡ, ಹರ್ಯಾಣ, ಹಿಮಾಚಲ, ಉತ್ತರಾ ಖಂಡ-1, ಕೇರಳ-1(ಉಪ ಚುನಾವಣೆ)
ರಾಜ್ಯದಲ್ಲಿ ಜಯದ ಲೆಕ್ಕ
ಬೆಂಗಳೂರು: ಗೆಲುವಿಗಾಗಿ ಪ್ರತಿ ಅಭ್ಯರ್ಥಿಯು ಕನಿಷ್ಠ 45 ಮತ ಪಡೆಯಬೇಕು. ಹೀಗಾಗಿ, ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ 2 ಹಾಗೂ ಬಿಜೆಪಿಗೆ ಒಂದು ಸ್ಥಾನ ಸುಲಭವಾಗಿ ದಕ್ಕಲಿದೆ. ಜೆಡಿಎಸ್ ಸಂಖ್ಯಾಬಲ 30 ಹೊಂದಿದ್ದರೂ ಇನ್ನೂ 15 ಮತ ಗಳವರೆಗೂ ಹೊಂಚ ಬೇಕು. ಹೀಗಾಗಿ, ಮೂರನೇ ಸ್ಥಾನ ಸಹ ಕಾಂಗ್ರೆಸ್ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಕಾಂಗ್ರೆಸ್‌ನಲ್ಲಿ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳಿದ್ದು, ರೆಹಮಾನ್‌ಖಾನ್ ಮತ್ತೂಂದು ಅವಧಿ ಕೇಳಿದ್ದಾರೆ. ಇವರ ಜತೆ ಜಾಫರ್ ಷರೀಫ್, ನಸೀರ್ ಅಹಮದ್ ಸಹ
ಆಕಾಂಕ್ಷಿಗಳಾಗಿದ್ದಾರೆ. ವಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ಹಿಂದುಳಿದ ವರ್ಗಗಳಿಂದ ವಿ.ಆರ್. ಸುದರ್ಶನ್, ಮಾಜಿ ಮೇಯರ್ ರಾಮ ಚಂದ್ರಪ್ಪ, ಮಹಿಳಾ ಕೋಟದಿಂದ ಡಿ.ಕೆ. ತಾರಾ ದೇವಿ, ಲಕ್ಷ್ಮೀ ಹೆಬ್ಟಾ ಳ್ಕರ್ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿಯಿಂದ ಮಾಜಿ ಸಂಸದ ವಿಜಯಸಂಕೇಶ್ವರ ಮತ್ತು ರಾಜೀವ್ ಚಂದ್ರಶೇಖರ್ ಆಕಾಂಕ್ಷಿಗಳಾಗಿದ್ದಾರೆ. ವಿಜಯ ಸಂಕೇಶ್ವರ್ ಅವರನ್ನು ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿಸಿ, ರಾಜೀವ್‌ಚಂದ್ರಶೇಖರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಜೆಡಿಎಸ್ ಬೆಂಬಲ ಪಡೆಯುವುದರ ಜತೆಗೆ ಎರಡನೇ ಪ್ರಾಶಸ್ತ್ಯ ಮತ ಕೊಡಿಸುವ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ ಎಂದ ಹೇಳಲಾಗಿದೆ.
ಲಿಂಗಾಯಿತ ಪ್ರತ್ಯೇಕ ಧರ್ಮ ವಿವಾದ ಹಿನ್ನೆಲೆಯಲ್ಲಿ ಲಿಂಗಾಯಿತರಿಗೆ ಅದರಲ್ಲೂ ಉತ್ತರ ಕರ್ನಾಟಕ ಭಾಗದವರಿಗೆ ಬಿಜೆಪಿಯಿಂದ ಅವಕಾಶ ಕಲ್ಪಿಸಬೇಕು ಎಂಬ ಚಿಂತನೆಯಿದೆ. ಇದೀಗ ನಿವೃತ್ತಿಯಾಗುತ್ತಿರುವು ದು ಲಿಂಗಾಯಿತ ಸಮುದಾಯದ ಹಾಗೂ ಉತ್ತರ ಕರ್ನಾಟಕ ಭಾಗದವೇ ಆಗಿದ್ದಾರೆ. ಅಂತಿಮವಾಗಿ ಜೆಡಿಎಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಅಧಿಕೃತ ಅಭ್ಯರ್ಥಿ ಯಾರು ಎಂಬುದರ ತೀರ್ಮಾನವಾಗಲಿ ದೆ ಎನ್ನಲಾಗಿದೆ.
ಮತ್ತೂಂದೆಡೆ ಜೆಡಿಎಸ್ ಸಹ ಒಂದು ಸ್ಥಾನ ಪಡೆಯಲು ಸಾಧ್ಯವೇ ಎಂಬ ಬಗ್ಗೆ ಲೆಕ್ಕಾಚಾರದಲ್ಲಿ ತೊಡಗಿದೆ. 40 ಮತ ಪಡೆದರೆ
ಒಂದು ಸ್ಥಾನ ಗೆಲ್ಲಬಹುದು ಎಂದಾದರೆ ಪಕ್ಷೇತರ ಸದಸ್ಯರ ಬೆಂಬಲದಿಂದ ಒಂದು ಸ್ಥಾನ ಗಳಿಸಬಹುದೇ ಎಂಬ ಬಗ್ಗೆಯೂ ಚರ್ಚೆಗಳು
ನಡೆದಿವೆ. ಜೆಡಿಎಸ್ ವತಿಯಿಂದ ಬಿ.ಎಂ.ಫರೂಕ್ ಅವರನ್ನೇ ಮತ್ತೂಮ್ಮೆ ಅಥವಾ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ
ಡ್ಯಾನಿಶ್ ಆಲಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿ ದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.