ವಿದ್ಯುತ್ ತಂತಿ ತುಳಿದು ನಾಲ್ವರ ದುರ್ಮರಣ
Team Udayavani, Apr 5, 2019, 6:06 AM IST
ರಾಮದುರ್ಗ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎತ್ತಿನ ಚಕ್ಕಡಿಯಲ್ಲಿ ಹೊಲಕ್ಕೆ ಹೊರಟ ಒಂದೇ ಕುಟುಂಬದ ನಾಲ್ವರು ಸೇರಿ ಎರಡು ಎತ್ತುಗಳು ಸಾವಿಗೀಡಾದ ದುರ್ಘಟನೆ ಬುಧವಾರ ನಸುಕಿನಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ.
ರೈತ ರೇವಪ್ಪ ಕಲ್ಲೋಳ್ಳಿ (35), ಪತ್ನಿ ರತ್ನವ್ವ ರೇವಪ್ಪ ಕಲ್ಲೋಳ್ಳಿ(30), ಮಗ ಸಚಿನ ರೇವಪ್ಪ ಕಲ್ಲೋಳ್ಳಿ (8) ಹಾಗೂ ರೇವಪ್ಪನ ಸಹೋದರನ ಮಗ ಕೃಷ್ಣಾ ಶಿವಪ್ಪ ಕಲ್ಲೋಳ್ಳಿ (10) ಮೃತರು. ಚಕ್ಕಡಿಯಲ್ಲಿದ್ದ ಇಬ್ಬರು ಬಾಲಕಿಯರು ಹೊರ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ರೇವಪ್ಪನ ಪುತ್ರಿ ಲಕ್ಷ್ಮೀ ರೇವಪ್ಪ ಕಲ್ಲೋಳ್ಳಿ, ಅಣ್ಣನ ಪುತ್ರಿ ಪ್ರಿಯಾಂಕ ಶಿವಪ್ಪ ಕಲ್ಲೋಳ್ಳಿ ಬದುಕುಳಿದವರು. ಈ ಎಲ್ಲರೂ ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಬಟ್ಟೆ ತೊಳೆಯಲೆಂದು ಗುರುವಾರ ನಸುಕಿನಲ್ಲಿ ಚಕ್ಕಡಿಯಲ್ಲಿ ಹೊಲಕ್ಕೆ ಹೊರಟಿದ್ದರು. ಸಂತೋಷ ಮುದಕಪ್ಪ ಮಸ್ಕಿ ಎಂಬುವರ ಹೊಲದಲ್ಲಿ ಹಾಯ್ದು ಹೋದ ವಿದ್ಯುತ್ ತಂತಿ ಎರಡು ದಿನದ ಹಿಂದೆ ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಸಾರ್ವಜನಿಕರು ಹೆಸ್ಕಾಂಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ.
ಆದರೆ ರೇವಪ್ಪ ಹೊಲದಲ್ಲಿ ಬಿದ್ದ ತಂತಿಯನ್ನು ಗಮನಿಸದೇ ಚಕ್ಕಡಿ ಮುಂದೆ ಹೊಡೆದಾಗ ತಂತಿ ಎತ್ತಿನ ಕಾಲಿಗೆ ತಾಗಿ ಅವಘಡ ಸಂಭವಿಸಿದೆ. ಅಪಾಯ ಅರಿತ ಇಬ್ಬರು ಬಾಲಕಿಯರು ಕೂಡಲೇ ಹಿಂದಿನಿಂದ ಜಿಗಿದು ಪಾರಾಗಿದ್ದಾರೆ. ಉಳಿದ ನಾಲ್ವರಿಗೆ ವಿದ್ಯುದಾಘಾತವಾಗಿ ನರಳಾಡುತ್ತಿದ್ದಾಗ ಇಬ್ಬರೂ ಓಡಿ ಮನೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮನೆಯವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಎಲ್ಲರೂ ಸಾವಿಗೀಡಾಗಿದ್ದರು.
ಸಿಬ್ಬಂದಿ ಅಮಾನತಿಗೆ ಶಿಫಾರಸು:ಘಟನೆಗೆ ಸಂಬಂ ಧಿಸಿದಂತೆ ಸಾಲಹಳ್ಳಿ ಪ್ರಭಾರಿ ಶಾಖಾಧಿ ಕಾರಿ ಈರಣ್ಣ ಆರ್. ನಾಯ್ಕರ ಹಾಗೂ ಪವರ್‌ಮನ್ ಬಸವರಾಜ ಕಟಕೋಳ ಎಂಬುವರ ಅಮಾನತಿಗೆ ಮೇಲಧಿ ಕಾರಿಗೆ ವರದಿ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.