ಉದ್ಯೋಗ ಸಖಿಗಿಲ್ಲ ಉತ್ತೇಜನ! ರಾಜ್ಯದ 15 ಜಿಲ್ಲೆಗಳಲ್ಲಿ ಶೂನ್ಯ ಸಾಧನೆ
ಉಡುಪಿ ನೂರರಷ್ಟು ಸಾಧನೆ
Team Udayavani, Dec 25, 2021, 6:55 AM IST
ಬೆಂಗಳೂರು: ಗ್ರಾಮೀಣ ಮಹಿಳೆಯ ರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸುವ ಕೇಂದ್ರದ ಮತ್ತೂಂದು ಮಹತ್ವಾಕಾಂಕ್ಷಿ “ಉದ್ಯೋಗ ಸಖಿ’ ಯೋಜನೆಯಲ್ಲಿ ರಾಜ್ಯದ ಪ್ರಗತಿ ಅತ್ಯಂತ ನೀರಸವಾಗಿದ್ದು, ಅರ್ಧಕ್ಕರ್ಧ ಜಿಲ್ಲೆಗಳದ್ದು ಶೂನ್ಯ ಸಾಧನೆ!
ಆದರೆ ಉಡುಪಿ ಶೇ. 100ರಷ್ಟು ಗುರಿ ಸಾಧಿಸಿದ ಏಕೈಕ ಜಿಲ್ಲೆಯಾಗಿ ದಾಖಲಾಗಿದೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ “ಉದ್ಯೋಗ ಸಖೀ’ ಯೋಜನೆ ಜಾರಿಗೊಳಿಸಲಾಗಿದೆ. ಈ “ಸಖಿ”ಗಳ ಮೂಲಕ ತಂಡಗಳನ್ನು ರಚಿಸಿಕೊಂಡು, ಗ್ರಾಮೀಣ ಭಾಗದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಗೆ ಒದಗಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮಹತ್ವದ ಯೋಜನೆ ಇದಾಗಿದೆ. ಆದರೆ ರಾಜ್ಯದ 15 ಜಿಲ್ಲೆ ಗಳಲ್ಲಿ ಒಬ್ಬರೇ ಒಬ್ಬ “ಉದ್ಯೋಗ ಸಖಿ’ಯನ್ನೂ ತಯಾರು ಮಾಡಲು ಸಾಧ್ಯವಾಗಿಲ್ಲ.
ಒಟ್ಟಾರೆ 30 ಜಿಲ್ಲೆಗಳಿಗೆ ಆಯಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ “ಉದ್ಯೋಗ ಸಖಿ”ಗಳ ಗುರಿ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,104 ಸಖೀಗಳನ್ನು ಗುರುತಿಸಿ, ತರಬೇತಿ ನೀಡಿ ಸಜ್ಜುಗೊಳಿಸಬೇಕು. ಆದರೆ ಇದು ವರೆಗೆ ಕೇವಲ 373 ಫಲಾನುಭವಿ ಗಳನ್ನು ಗುರುತಿಸಲಾಗಿದೆ ಎಂದು ಗ್ರಾಮೀ ಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಕಾರ್ಯವೇನು?
ಉದ್ಯೋಗ ಸಖಿಯ ಒಂದು ಭಾಗವಾದ ಕೃಷಿ ಸಖೀಯರನ್ನು ಸಮುದಾಯ ಸಂಶೋಧನ ವ್ಯಕ್ತಿಯಾಗಿ ಸಣ್ಣ ಮತ್ತು ಅತಿಸಣ್ಣ ರೈತ ಮಹಿಳೆಯರಿಗೆ ಉನ್ನತ ಮಟ್ಟದ ಕೃಷಿ ಚಟುವಟಿಕೆಗಳನ್ನು, ಕೃಷಿ ಮೌಲ್ಯದ ಸರಪಳಿ ಹಾಗೂ ಮಾರುಕಟ್ಟೆ ಅಭಿವೃದ್ಧಿಪಡಿಸಲು ನೇಮಕ ಮಾಡಲಾಗುತ್ತದೆ. ಪ್ರಾದೇಶಿಕವಾರು 20 ರೈತ ಮಹಿಳೆಯರ ಗುಂಪನ್ನು ಸಿದ್ಧಪಡಿಸುವ ಮೂಲಕ ಮೊದಲು ಉತ್ಪಾದಕರ ಗುಂಪನ್ನು ನಿರ್ಮಿಸುತ್ತಾರೆ. ಪ್ರಸ್ತುತ ರಾಜ್ಯಾದ್ಯಂತ ನಾಲ್ಕು ಸಾವಿರ ಉತ್ಪಾದಕರ ಗುಂಪುಗಳು ರಚನೆಯಾಗಿವೆ.
ಉದ್ಯೋಗ ಸಖಿಯರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸುವುದರಿಂದ ಅವರಿಗೆ ಜ್ಞಾನಾಭಿವೃದ್ಧಿ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿ, ಗ್ರಾಮ ಮಟ್ಟದ ಆದಾಯದ ಮೂಲವನ್ನು ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ:ರಾಜಸ್ಥಾನ: ಭಾರತೀಯ ವಾಯುಸೇನೆಯ ಮಿಗ್- 21 ವಿಮಾನ ಪತನ, ಪೈಲಟ್ ಸಾವು
ನೇಮಕಾತಿ-ತರಬೇತಿ
ಉದ್ಯೋಗ ಸಖಿಯ ಆಯ್ಕೆ ಪ್ರಕ್ರಿಯೆಯಲ್ಲಿ ಶಿಕ್ಷಣ, ಅನುಭವ, ಸ್ಥಳೀಯತೆ, ಪಾರದರ್ಶಕತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸುಸ್ಥಿರ ಕೃಷಿ ಪದ್ಧತಿ, ಕೃಷಿ ಪರಿಸರ ಅಭ್ಯಾಸಗಳು, ಸಾವಯವ ಕೃಷಿ ಪದ್ಧತಿ ಸಹಿತ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಯುವ ಹೊಸ ಸಂಶೋಧನೆಗಳ ಬಗ್ಗೆ ಏಳು ದಿನಗಳ ತರಬೇತಿ ನೀಡಲಾಗುತ್ತದೆ.
ಏನಿದು “ಉದ್ಯೋಗ ಸಖೀ’?
ಇದು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಯೋಜನೆಯಡಿ ಬರಲಿದ್ದು, ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಾದೇಶಿಕ ಜೀವನ ಶೈಲಿಗೆ ಅನುಗುಣವಾಗಿ ಕೃಷಿ ಸಖೀ, ಪಶು ಸಖಿ, ಮತ್ಸ್ಯಸಖಿ, ವನ ಸಖಿ ಮತ್ತು ಕೃಷಿ ಉದ್ಯೋಗ ಸಖಿಯರೆಂದು ನೇಮಿಸಲಾಗುತ್ತದೆ.
ಶೂನ್ಯ ಸಂಪಾದನೆಯ ಜಿಲ್ಲೆಗಳು
ಬೆಳಗಾವಿ, ಮಂಡ್ಯ, ಬೆಂಗಳೂರು ಗ್ರಾ., ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಹಾವೇರಿ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ಉ.ಕ., ಯಾದಗಿರಿ.
ಉದ್ಯೋಗ ಸಖಿಯರಿಗೆ ಫೆಬ್ರವರಿ ಅಂತ್ಯಕ್ಕೆ ತರಬೇತಿ ನೀಡಿ, ಕಾರ್ಯಾಚರಣೆ ಆರಂಭಿಸುವ ಯೋಜನೆ ಇದೆ. ಅನಂತರ ಶೂನ್ಯಗೊಂಡಿರುವ ಜಿಲ್ಲೆಗಳ ಬಗ್ಗೆಯೂ ಗಮನಹರಿಸಿ, ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು. ಒಟ್ಟಾರೆ ಹಣಕಾಸು ವರ್ಷದ ಅಂತ್ಯದೊಳಗೆ ಗುರಿ ಸಾಧಿಸಲಾಗುವುದು.
– ರಾಜೇಶ್ವರಿ, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ, ಕೃಷಿ ಮೌಲ್ಯ ಸರಪಳಿ ಅಭಿವೃದ್ಧಿ
- ಭಾರತಿ ಸಜ್ಜನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.