Encounter: ಅಧಿಕಾರಿಗೆ ಕಾಂಗ್ರೆಸ್‌ ಶಾಸಕನ ಬೆದರಿಕೆ?

ಹೈಕೋರ್ಟ್‌ ಜಡ್ಜ್ ಮುಂದೆ ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಕಣ್ಣೀರು

Team Udayavani, Aug 7, 2024, 7:10 AM IST

Encounter: ಅಧಿಕಾರಿಗೆ ಕಾಂಗ್ರೆಸ್‌ ಶಾಸಕನ ಬೆದರಿಕೆ?

ಬೆಂಗಳೂರು: ಸಾಗರ ಕಾಂಗ್ರೆಸ್‌ ಶಾಸಕರ ವಿರುದ್ಧ ಸರಕಾರಿ ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಒಬ್ಬರು ಹೈಕೋರ್ಟ್‌ ನ್ಯಾಯಮೂರ್ತಿಗಳ ಮುಂದೆ ಈ ಆರೋಪ ಮಾಡಿದ್ದಾರೆ. ಅಲ್ಲದೆ, “ಸ್ಥಳೀಯ ಡಿವೈಎಸ್ಪಿ ನನ್ನನ್ನು ಎನ್‌ಕೌಂಟರ್‌ ಮಾಡುವುದಾಗಿ ಹೇಳಿದ್ದಾರೆ. ನನಗೆ ಭಯ ಆಗುತ್ತಿದೆ. ನಾನು ಹೊರಗಡೆ ಹೋಗುವುದಿಲ್ಲ, ಕೋರ್ಟ್‌ ಹಾಲ್‌ನಲ್ಲೇ ಇರು ತ್ತೇನೆ, ದಯವಿಟ್ಟು ನನ್ನನ್ನು ಕಾಪಾಡಿ, ನನಗೆ ರಕ್ಷಣೆ ಕೊಡಿ’ ಎಂದು ನ್ಯಾಯಮೂರ್ತಿಗಳ ಮುಂದೆ ಕೈಮುಗಿದು ಕಣ್ಣೀರು ಹಾಕಿದ ಪ್ರಸಂಗ ಹೈಕೋರ್ಟ್‌ನಲ್ಲಿ ಮಂಗಳವಾರ ನಡೆಯಿತು.

ಇದಕ್ಕೆ ಆಘಾತ ವ್ಯಕ್ತಪಡಿಸಿದ ನ್ಯಾ| ಎಂ. ನಾಗಪ್ರಸನ್ನ, ಎಂಜಿನಿಯರ್‌ ಆರೋಪ, ಹೇಳುತ್ತಿರುವ ವಿಷಯ ನಿಜವೇ ಆಗಿದ್ದಲ್ಲಿ ಕೋರ್ಟ್‌ ಗಂಭೀರ ವಾಗಿ ಪರಿಗಣಿಸಲಿದೆ. ಪೊಲೀ ಸರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಬಳಿಕ ಪ್ರಕರಣವನ್ನು ಬುಧವಾರ ವಿಚಾರಣೆ ನಡೆಸುವುದಾಗಿ ಹೇಳಿದರು.

ನ್ಯಾ| ನಾಗಪ್ರಸನ್ನ ಅವರು ಬೆಳಗಿನ ಕಲಾಪ ಮುಗಿಸಿ ತೆರಳುತ್ತಿರುವಾಗ, ಕೈ ಮುಗಿದು ಕಣ್ಣೀರು ಹಾಕುತ್ತ ನ್ಯಾಯಪೀಠದ ಮುಂದೆ ಬಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಪಿಟಿಸಿಎಲ್‌ ಸಹಾಯಕ ಎಂಜಿನಿಯರ್‌ ಎಂ.ಜಿ. ಶಾಂತಕುಮಾರ ಸ್ವಾಮಿ, “ನನಗೆ ವಿವಾಹ ನಿಶ್ಚಯವಾಗಿ ರದ್ದಾಗಿತ್ತು. ಅನಂತರ ಸುಳ್ಳು ಪ್ರಕರಣ ದಾಖಲಿಸಿ, ನನ್ನಿಂದ ಹಣ ಪಡೆಯಲು ಸ್ಥಳೀಯ ಕಾಂಗ್ರೆಸ್‌ ಶಾಸಕರು ಮತ್ತು ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದನ್ನು ರೆಕಾರ್ಡ್‌ ಮಾಡಿ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದೀಯಾ ಎಂದು ಸಾಗರದಲ್ಲಿ ಇರಲು ನನ್ನನ್ನು ಬಿಡುತ್ತಿಲ್ಲ. ನಾನು ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಕೋರುತ್ತಿದ್ದೇನೆ. ಅದೂ ಆಗಿಲ್ಲ, ಹಾಗಾಗಿ ನನಗೆ ರಕ್ಷಣೆ ನೀಡಬೇಕು’ ಎಂದು ಕೋರಿದರು.

ಅಲ್ಲದೆ, ಸಾಗರದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯು ಜು. 22ರಂದು ಹೈಕೋರ್ಟ್‌ನಲ್ಲಿ ನಿಮ್ಮ ನ್ಯಾಯಪೀಠದ ಮುಂದೆಯೇ ನಡೆದಿತ್ತು. ಈ ಪ್ರಕರಣಗಳಲ್ಲಿ ವಿಚಾರಣೆಯಲ್ಲಿ ಖುದ್ದಾಗಿ ಭಾಗಿಯಾಗಿದ್ದು, ವಕೀಲರನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವನ್ನು ತಾವು ನೀಡಿದ್ದೀರಿ. ಹೈಕೋರ್ಟ್‌ ವಿಚಾರಣೆಯ ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ವೀಡಿಯೊ ಆಧರಿಸಿ, ತತ್‌ಕ್ಷಣವೇ ಸುಳ್ಳು ಗಾಂಜಾ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಿದ್ದಾರೆ ಎಂದು ವಿವರಿಸಿದರು.

ಥಳಿಸಿದ ಡಿವೈ ಎಸ್‌ಪಿ: ಆರೋಪ
ಹೈಕೋರ್ಟ್‌ನಲ್ಲಿ ಪೊಲೀಸರ ಬಗ್ಗೆ ದೂರುತ್ತೀಯಾ ಎಂದು ಸಾಗರದ ಡಿವೈಎಸ್‌ಪಿ ನನ್ನನ್ನು ಥಳಿಸಿದ್ದಾರೆ. ಗಾಂಜಾ ಪ್ರಕರಣದ ಜತೆಗೆ ತತ್‌ಕ್ಷಣ ಬೇರೆ ಬೇರೆ ಸೆಕ್ಷನ್‌ ಹಾಕಿದ್ದಾರೆ. ಎನ್‌ಕೌಂಟರ್‌ ಮಾಡಲಾಗುವುದು ಎಂದು ಹೇಳಿದ್ದಾರೆ. ರೌಡಿಶೀಟರ್‌ ತೆರೆಯಲಾಗುವುದು ಎಂದು ಬೆದರಿಕೆಯೊಡ್ಡಿದ್ದಾರೆ. ಮೊಬೈಲ್‌ ಮತ್ತು ಪರ್ಸ್‌ ಕಸಿದುಕೊಂಡಿದ್ದಾರೆ ಎಂದು ಹೇಳಿ ಕಣ್ಣೀರು ಹಾಕಿದರು.

ಆಗ ನ್ಯಾಯಮೂರ್ತಿಗಳು, ನೀವು ಹೇಳಿರುವುದೆಲ್ಲವನ್ನೂ ರೆಕಾರ್ಡ್‌ ಮಾಡಲಾಗುತ್ತದೆ. ಡಿವೈಎಸ್‌ಪಿ ಈ ರೀತಿ ನಡೆದುಕೊಂಡಿದ್ದರೆ ಖಂಡಿತ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಚ್ಚುವರಿ ಸರಕಾರಿ ವಿಶೇಷ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರಿಗೆ, “ನೋಡಿ, ಇಂಥ ಕೃತ್ಯದಿಂದ ಹಿಂದೆ ಸರಿಯುವಂತೆ ಡಿವೈಎಸ್‌ಪಿಗೆ ತಿಳಿಸಿ, ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ಇಲ್ಲವಾದರೆ ಅವರನ್ನು ನ್ಯಾಯಾಲಯಕ್ಕೆ ಕರೆಯಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜತೆಗೆ, “ಅರ್ಜಿದಾರರಿಗೆ ನೀವು ಹೆದರಬೇಡಿ, ನಾವು ಇದ್ದೇವೆ, ನಿಮಗೆ ಎಲ್ಲ ರೀತಿಯ ಭದ್ರತೆ ನೀಡಲಾಗುವುದು, ನಾಳೆ ನಿಮ್ಮ ಪ್ರಕರಣ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಪೀಠ ಹೇಳಿತು.

ಟಾಪ್ ನ್ಯೂಸ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

ud-sp

Udupi ಹೊಸ ವರ್ಷಾಚರಣೆ: ಹಾನಿಕಾರಕ ಸಂದೇಶ ಎಚ್ಚರ ವಹಿಸಲು ಎಸ್‌ಪಿ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

BJP-Gov

ಪೊಲೀಸ್‌ ಅಧಿಕಾರಿಗಳ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಎಂಎಲ್‌ಸಿ ಸಿ.ಟಿ.ರವಿ

1-punjab

Bandh; ರೈತರಿಂದ ಪಂಜಾಬ್ ಬಂದ್‌ ನಡೆಸಿ ಹೋರಾಟ: ಜನಜೀವನ ಅಸ್ತವ್ಯಸ್ತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.