Internal reservation;ರಾಜ್ಯ ಸರಕಾರ ಅಸ್ತು : ಏನಿದು ?,ಆಯೋಗದ ಹೊಣೆ ಏನು?
ಮೂರು ತಿಂಗಳಲ್ಲಿ ವರದಿಗೆ ಸೂಚನೆ .. ಅಲ್ಲಿವರೆಗೆ ನೇಮಕಾತಿ ತಡೆ
Team Udayavani, Oct 29, 2024, 6:45 AM IST
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪರಿಶಿಷ್ಟ ಜಾತಿ ಒಳ ಮೀಸಲು ಜಾರಿಗೆ ಒತ್ತಾಯಿಸುತ್ತಿದ್ದ ದಲಿತ ಸಂಘಟನೆಗಳ ಹೋರಾಟಕ್ಕೆ ರಾಜ್ಯ ಸರಕಾರ ಕೊನೆಗೂ ತಲೆಬಾಗಿದ್ದು, ಮೀಸಲು ವರ್ಗೀಕರಣ ಜಾರಿಗೆ ಸಚಿವ ಸಂಪುಟ ಸಭೆ ಯಲ್ಲಿ ಒಪ್ಪಿಗೆ ನೀಡಿದೆ. ಆದರೆ ಹಂಚಿಕೆಯ ಸ್ವರೂಪ- ಸಾಧ್ಯತೆಗಳ ಬಗ್ಗೆ ನಿರ್ಧ ರಿಸುವುದಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಾ ಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚನೆ ಮಾಡಲು ಮುಂದಾಗಿದೆ. ಜತೆಗೆ 3 ತಿಂಗಳು ಯಾವುದೇ ನೇಮಕಾತಿ ನಡೆಸ ದಂತೆ ತಡೆ ವಿಧಿಸಲಾಗಿದೆ.
ಸರಕಾರದ ಈ ನಡೆಗೆ ಸಚಿವ ಸಂಪುಟದಲ್ಲಿರುವ ಎಡಗೈ ಸಮುದಾಯದ ಸಚಿವರು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದ್ದಾರೆ.
ಏಕ ಸದಸ್ಯ ಆಯೋಗಕ್ಕೆ ವರದಿ ಸಲ್ಲಿಸು ವುದಕ್ಕೆ 3 ತಿಂಗಳು ಸಮಯಾವಕಾಶ ನೀಡಲಾಗಿದ್ದು, ಅಲ್ಲಿಯ ವರೆಗೆ ಯಾವುದೇ ಹೊಸ ನೇಮಕ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸದೆ ಇರಲು ಸಚಿವ ಸಂಪುಟ ನಿರ್ಧರಿಸಿದೆ. ಇದ ರಿಂದ ಮೀಸಲು ವರ್ಗೀಕರಣಕ್ಕೆ ಸರಕಾರ ಒಪ್ಪಿದರೂ ತತ್‌ಕ್ಷಣ ಜಾರಿಗೆ ಬರುವುದಕ್ಕೆ ಸಾಧ್ಯವಿಲ್ಲ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಒಳಮೀಸಲು ಜಾರಿಗೆ ಒಪ್ಪಿಗೆ ನೀಡಲಾಗಿದೆ. ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಈ ವಿಷಯ ತಿಳಿಸಿದರು.
ಯಾಕೆ ಆಯೋಗ? ಮೀಸಲು ವರ್ಗೀಕರಣಕ್ಕೆ ಸಂಬಂಧ ಪಟ್ಟಂತೆ ಆಯೋಗ ರಚನೆ ಮಾಡಿದ್ದೇಕೆ, ಇದೊಂದು ಕುಂಟು ನೆಪವಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಸಿ. ಮಹದೇವಪ್ಪ, “ಇದು ಕುಂಟು ನೆಪವಲ್ಲ. ಸುಪ್ರೀಂ ಕೋರ್ಟ್ ಆದೇಶಕ್ಕೆ ಸರಕಾರ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷದ ಚುನಾವಣ ಪ್ರಣಾಳಿಕೆಯಲ್ಲೂ ನಾವು ಈ ಭರವಸೆ ನೀಡಿದ್ದೇವೆ. ಆದರೆ ದತ್ತಾಂಶ ಆಧರಿಸಿ ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸದಾಶಿವ ಆಯೋಗದಲ್ಲಿ ದತ್ತಾಂಶ ಇರಲಿಲ್ಲ. ಬಿಜೆಪಿ ಕಾಲದಲ್ಲಿ ನಡೆದ ಮೀಸಲು ವರ್ಗೀಕರಣಕ್ಕೆ ಈ ವರದಿಯನ್ನೇ ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಒಮ್ಮತವಿಲ್ಲ. ಹೀಗಾಗಿ ಮೀಸಲು ವರ್ಗೀಕರಣವನ್ನು ನಾವು ನ್ಯಾಯ ಹಾಗೂ ಸಂವಿಧಾನಬದ್ಧವಾಗಿ ಮಾಡಲು ನಿರ್ಧರಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಆಯೋಗ ರಚನೆ ಮಾಡಲಾಗಿದೆ ಎಂದು ಸಮರ್ಥನೆ ನೀಡಿದರು.
ವರದಿಯಲ್ಲಿ ಏನಿದೆ ಗೊತ್ತಿಲ್ಲ: ದತ್ತಾಂಶದ ವಿಚಾರ ಬಂದಾಗ ರಾಜ್ಯ ಸರಕಾರದ ಬಳಿ ಈಗಾಗಲೇ ಇರುವ ಜಾತಿ ಗಣತಿ ವರದಿಯನ್ನು ಆಧರಿಸಿ ಮೀಸಲು ವರ್ಗೀಕರಣ ಮಾಡುವುದಕ್ಕೆ ಸಮಸ್ಯೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, “ಎಂಪರಿಕಲ್ ಡೇಟಾ’ ಎಂದರೆ ಏನೆಂಬುದು ನಿರ್ದಿಷ್ಟವಾಗಿದೆ. ಅದನ್ನು ನಿರ್ಧರಿಸಬೇಕಿರುವುದು ಸುಪ್ರೀಂ ಕೋರ್ಟ್. ಸಾಮಾಜಿಕ ಹಾಗೂ ಆರ್ಥಿಕಸಮೀಕ್ಷೆ ವರದಿ ನಮ್ಮ ಬಳಿ ಇರುವುದು ನಿಜವಾದರೂ, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಹೀಗಾಗಿ ಅದನ್ನು ಆಧರಿಸಿ ವರ್ಗೀಕರಣ ಮಾಡುತ್ತೇವೆ ಎನ್ನುವುದಕ್ಕೆ ಸಾಧ್ಯವಿಲ್ಲ. ಇವೆಲ್ಲವನ್ನು ವಿಷದಪಡಿಸು ವುದಕ್ಕಾಗಿಯೇ ಆಯೋಗ ರಚನೆ ಮಾಡಲಾಗಿದೆ ಎಂದರು.
35 ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಈಗ ಬಲ ಬಂದಂತಾಗಿದೆ. ಎಲ್ಲರೂ ವಿಶ್ವಾಸದಿಂದ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಮೂರು ತಿಂಗಳು ಸಮಯಾವಕಾಶ ನೀಡಲಾಗಿದೆ. ಯಾರೂ ವಿರೋಧ ವ್ಯಕ್ತಪಡಿಸಿಲ್ಲ.
ಕೆ.ಎಚ್. ಮುನಿಯಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
ಸದಾಶಿವ ಆಯೋಗದ ವರದಿ, ಜನಗಣತಿ ಮತ್ತು ಜಾತಿ ಗಣತಿ- ಈ ಮೂರು ವರದಿಗಳಲ್ಲಿಯೂ ದತ್ತಾಂಶ ಇದೆ. ಮೂರು ತಿಂಗಳು ಸಮಯಾವಕಾಶ ತೆಗೆದುಕೊಂಡಿದ್ದಾರೆ. ನಾಲ್ಕನೇ ತಿಂಗಳು ಜಾರಿಯಾಗಲೇಬೇಕು. ಅಲ್ಲಿ ವರೆಗೆ ಯಾವುದೇ ನೇಮಕ ನಡೆಯಬಾರದು. ಎಚ್.ಆಂಜನೇಯ, ಮಾಜಿ ಸಚಿವ
ಆಯೋಗದ ಹೊಣೆ ಏನು?
ಪರಿಶಿಷ್ಟ ಜಾತಿಯ 101 ಉಪಜಾತಿ ಬಗ್ಗೆ ಮಾಹಿತಿ ಸಂಗ್ರಹ
ಜನಸಂಖ್ಯೆ ಆಧರಿಸಿ ಉಪಜಾತಿ ವರ್ಗೀಕರಣ
ಪ್ರತೀ ಜಾತಿ ಎಷ್ಟು ಮೀಸಲಾತಿಗೆ ಅರ್ಹ ಎಂದು ವಿಂಗಡನೆ
ಏನಿದು ಒಳ ಮೀಸಲಾತಿ?
ಪರಿಶಿಷ್ಟ ಜಾತಿಗೆ ಸೇರಿದ 101 ಉಪ ಜಾತಿಗಳ ಜನ ಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ವರ್ಗೀಕರಣ ಮಾಡುವ ಅಧಿ ಕಾರ ರಾಜ್ಯ ಸರಕಾರಗಳಿಗಿದೆ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಒಳ ಮೀಸಲು ಜಾರಿಗೆ ಒತ್ತಡ ಹೆಚ್ಚಾದದ್ದರಿಂದ ಅದರ ಜಾರಿಗೆ ಸರಕಾರ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.