ಕೇಂದ್ರದ ಸಾಧನೆಯನ್ನು ಮೆಚ್ಚಿ ಜನ ಚುನಾವಣೆ ಗೆಲ್ಲಿಸಿದ್ದಾರೆ: ಸಂಸದ ಈರಣ್ಣ ಕಡಾಡಿ
Team Udayavani, Mar 10, 2022, 4:01 PM IST
ಮೂಡಲಗಿ: ಸತತ 7 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರ್ಕಾರ ದೇಶದಲ್ಲಿ ಮಾಡಿದಂತಹ ಅದ್ವೀತಿಯ ಸಾಧನೆ ಮತ್ತು ಅಭಿವೃದ್ಧಿ ಪರ ರಾಜಕಾರಣವನ್ನು ಜನ ಮೆಚ್ಚಿ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಆರ್ಶಿವಾದ ಮಾಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಸಂತಸ ವ್ಯಕ್ತಪಡಿಸಿದರು.
ಗುರುವಾರದಂದು ಪತ್ರಿಕಾ ಹೇಳಿಕೆ ನೀಡಿದ ಅವರು ಕರೋನಾ ಕಾಲಘಟದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕಠಿಣವಾಗಿದ್ದರೂ ಕೂಡ ಮತ್ತು ವಿರೋಧಿಗಳ ಅಪಪ್ರಚಾರದ ಮಧ್ಯೆಯು ಜನರನ್ನು ಒಂದು ಸುರಕ್ಷಿತ ದಡಕ್ಕೆ ತರುವಲ್ಲಿ ನರೇಂದ್ರ ಮೋದಿ ಸಫಲರಾಗಿದ್ದಾರೆ. ಅವರ ಹೇಳಿಕೆಯಾಗಿರುವ “ಸಭ್ ಕಾ ಸಾಥ್, ಸಭ್ ಕಾ ವಿಕಾಸ್, ಸಭ್ ಕಾ ವಿಶ್ವಾಸ್, ಸಭ್ ಕಾ ಪ್ರಯಾಸ್” ಅನ್ನುವಂತಹ ಅವರ ಮಾತನ್ನು ಜನ ಅಕ್ಷರ ಸಹ ಸ್ವೀಕಾರ ಮಾಡಿದ್ದಾರೆ ಎಂದರು.
ದೇಶದ ಜನ ಕಾಂಗ್ರೇಸ್ ಹಾಗೂ ಸಮಾಜವಾದಿ ಪಾರ್ಟಿಗಳ ಕುಟುಂಬ ರಾಜಕಾರಣವನ್ನು ದಿಕ್ಕರಿಸಿ, ಒಂದು ಗುಲಗಂಜಿಯಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಹ ಮತ್ತು ಸ್ವಹಿತಾಶಕ್ತಿ ಇಲ್ಲದಂತಹ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವನ್ನು ದೇಶದ ಜನ ಒಪ್ಪಿಕೊಂಡಿದ್ದಾರೆ, ಅದರ ಪರಿಣಾಮ ಇಷ್ಟು ದೊಡ್ಡ ಪ್ರಮಾಣದ ಗೆಲುವು ಸಾಧ್ಯವಾಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ನವರು ಕೃಷ್ಣೆ-ಮೇಕೆದಾಟು ಕಡೆಗೆ ಹೊಗುವುದು ಬೇಡ, ಇಟಲಿಗೆ ಹೋಗಲಿ: ಯತ್ನಾಳ್
ಒಂದು ವಿಶಿಷ್ಟ ಪರಿಸ್ಥಿತಿ ಕಾರಣದಿಂದ ಪಂಜಾಬ್‌ನಲ್ಲಿ ನಾವು ಹಿಂದುಳಿದಿರಬಹುದು, ಮುಂದಿನ ದಿನಗಳಲ್ಲಿ ಪಂಜಾಬ್ ಗೆಲ್ಲುವಂತಹ ದಿಶೆಯಲ್ಲಿ ಬಿಜೆಪಿ ಮುನ್ನುಗುತ್ತದೆ ಮತ್ತು ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆ 2024ರ ಲೋಕಸಭಾ ಚುನಾವಣೆ ಈ ಎರಡು ಚುನಾವಣೆಗಳಲ್ಲೂ ಕೂಡಾ ನಿಶ್ಚಿತವಾಗಿ ಮತ್ತೊಂದು ಸಲ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುವಂತಹ ಎಲ್ಲ ಲಕ್ಷಣಗಳೂ ಈ ಚುನಾವಣೆ ಮೂಲಕ ಕಂಡುಬರುತ್ತದೆ ಎಂದರು. ಈ ಗೆಲುವಿಗೆ ಕಾರಣಿಭೂತರಾದ ಮತದಾರ ಬಂಧುಗಳಿಗೆ ಅಭಿನಂಧನೆ ತಿಳಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Saira Banu: ಎ.ಆರ್.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ
Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
UV Fusion: ನಿಸ್ವಾರ್ಥ ಜೀವ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.