ನಮ್ಮ ಒಗ್ಗಟ್ಟು,ಏಕತೆ ಒಡೆಯಲು ಯಾವುದೇ ಪತ್ರಿಕೆ,ಟಿವಿಯಿಂದ ಆಗುವುದಿಲ್ಲ-ಈಶ್ವರಪ್ಪ
Team Udayavani, May 26, 2021, 2:59 PM IST
ಶಿವಮೊಗ್ಗ : ಪತ್ರಿಕೆಯವರು, ಟಿವಿಯವರಿಗೆ ಸುದ್ದಿ ಬೇಕು ಹಾಕ್ತಿದ್ದೀರಾ. ಸರ್ಕಸ್ ಮಾಡಿದ್ರೂ ಕೂಡಾ ಬಿಜೆಪಿಯ ಶಾಸಕರ ಒಗ್ಗಟ್ಟು, ಏಕತೆ ಒಡೆಯಲು ಯಾವುದೇ ಪತ್ರಿಕೆ, ಟಿವಿಯಿಂದ ಆಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ನಾವೆಲ್ಲಾಒಟ್ಟಾಗಿದ್ದೇವೆ, ಒಟ್ಟಾಗಿ ಪ್ರಯತ್ನ ಮಾಡ್ತೇವೆ. ರಾಜ್ಯ ಸರಕಾರದ ಬಗ್ಗೆ ಕೇಂದ್ರದ ನಾಯಕರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಎಲ್ಲರೂ ಬದ್ದರು.ಕೇಂದ್ರದ ನಾಯಕರು ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕು ಯಡಿಯೂರಪ್ಪನವರ ಬದಲಾವಣೆ ಇಲ್ಲ. ಅವರು ತೆಗೆದುಕೊಂಡಿರುವ ಎಲ್ಲಾ ತೀರ್ಮಾನಕ್ಕೆ ಎಲ್ಲರೂ ಬದ್ದ ಎಂದು ಸ್ಪಷ್ಟಪಡಿಸಿದರು.
ಯಾವುದೋ ಒಂದು ಪತ್ರಿಕೆಯಲ್ಲಿ, ಯಾವುದೋ ಒಂದು ಟಿವಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ತೋರಿಸುತ್ತಾರೆ. ಅದನ್ನು ಸತ್ಯ ಅಂಥ ಎಂದು ನಂಬೋಕೆ ಆಗುವುದಿಲ್ಲ.ಯಡಿಯೂರಪ್ಪ ಅವರ ಅಧಿಕಾರವಧಿ ಮುಗಿದೆ ಹೋಯ್ತು, ಹೊಸ ಸಿಎಂ ಪ್ರತಿಜ್ಞಾ ವಿಧಿ ತೆಗೆದುಕೊಂಡು ಬಿಟ್ಟೆ ಬಿಟ್ಟರು ಅಂತಾ ತೋರಿಸಿದ್ರೂ,ಬಿ ಜೆಪಿ ಎಲ್ಲಾ ವಿಚಾರದ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿನಃ ಪತ್ರಿಕೆ ಟಿವಿಯವರು ನಮ್ಮ ಪಕ್ಷದ ಮೇಲೆ ಡಾಮಿನೆಂಟ್ ಮಾಡೋಕೆ ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ : ಆಸ್ಪತ್ರೆ ಬಾಗಿಲಲ್ಲೇ ಹೆರಿಗೆ,ಸಾವನ್ನಪ್ಪಿದ ಮಗು: ಮಂಡ್ಯದಲ್ಲೊಂದು ಮನಕಲಕುವ ಘಟನೆ
ನಮ್ಮದು ಕಾಂಗ್ರೆಸ್ ಪಕ್ಷ ಅಲ್ಲ ಇದು ಯಾರೋ ಬರುತ್ತಾರೆ, ಯಾರೋ ಹೋಗ್ತಾರೆ ಅನ್ನೋಕೆ. 17 ಜನ ಶಾಸಕರು ಹೋದರು ಅವರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಎಲ್ಲರೂ ಬಿಜೆಪಿಗೆ ಬಂದು ಚುನಾವಣೆಯಲ್ಲಿ ಗೆದ್ದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾರೆ ಎನ್ನುವ ಅಂಶವನ್ನು ಕೇಂದ್ರದ ನಾಯಕರು ಘೋಷಣೆ ಮಾಡಿದ್ದಾರೆ ಎಂದರು.
ಯಾವುದೇ ಕಾರಣಕ್ಕು ಮುಖ್ಯಮಂತ್ರಿ ಬದಲಾವಣೆ ಇಲ್ಲ. ಅವಶ್ಯಕತೆ ಇದ್ದಾಗ ಶಾಸಕಾಂಗ ಸಭೆ ಕರೆಯುತ್ತಾರೆ. ವಿಧಾನ ಮಂಡಲದಲ್ಲಿ ಎಷ್ಟೋ ಸಮಿತಿ ಇದೆ. ಆ ಸಮಿತಿ ಸಭೆಗಳೇ ನಡೆಯುತ್ತಿಲ್ಲ. ಕ್ಯಾಬಿನೆಟ್ ನಡೆಸಲು ಸಹ ಹಿಂದೆ ಮುಂದೆ ನೋಡುತ್ತಿದ್ದೇವೆ. ಶಾಸಕಾಂಗ ಸಭೆ ಕರೆಯಬೇಕು ಅಂತಾ ಯಾರು ಕೇಳಿದ್ದಾರೆ. ಶಾಸಕಾಂಗ ಸಭೆ ಏಕೆ ಬೇಕು. ಎಲ್ಲಾ ಶಾಸಕರು ಅವರವರ ಕ್ಷೇತ್ರದಲ್ಲಿ ಕೋವಿಡ್ ದೂರ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಶಾಸಕರ ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ. ಅವರವರ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ಶಾಸಕರಿಗೆ ಪುರುಸೋತ್ತು ಇಲ್ಲ. ಶಾಸಕಾಂಗ ಸಭೆ ಏನು ಅವಶ್ಯಕತೆ ಇದೆ. ಸುಮ್ಮನೆ ರಾಜಕಾರಣ ಬೆರೆಸುವ ಪ್ರಯತ್ನ ಮಾಡೋದು ಸೂಕ್ತವಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.